ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಪ್ರತಿಯೊಂದು ಹಳ್ಳಿಯಲ್ಲೂ ಬಂಜಾರ ತಾಂಡ ಅಭಿವೃದ್ಧಿ ನಿಗಮ ವತಿಯಿಂದ ಆಯೋಜಿಸಲಾದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನ ಸದುಪಯೋಗ ಪಡಿಸಿಕೊಳ್ಳಿ ಎಂದು ನ್ಯಾಷನಲ್ ಸೇವಾ ಡಾಕ್ಟರ್ ಅಶೋಶಿಯೇಷನ್ ಕರ್ನಾಟಕ ವೈದ್ಯಕೀಯ ಬಂಜಾರ ಸಂಘದ ಅಧ್ಯಕ್ಷ ಡಾ.ಉಮೇಶ್ ನಾಯಕ್ ತಿಳಿಸಿದರು.ತಾಲೂಕಿನ ರಾಮಾಪುರ ಹೋಬಳಿಯ ದಿನ್ನಳ್ಳಿ ಗ್ರಾಮದ ಸಾರ್ವಜನಿಕ ಬಾಲಕರ ಮೆಟ್ರಿಕ್ ವಿದ್ಯಾರ್ಥಿನಿಲಯದಲ್ಲಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಹಾಗೂ ನ್ಯಾಷನಲ್ ಸೇವಾ ಡಾಕ್ಟರ್ ಅಶೋಸಿಯೇಷನ್ ಕರ್ನಾಟಕ ವತಿಯಿಂದ ಆಯೋಜಿಸಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಂದು ತಾಂಡಾ ಹಳ್ಳಿ ಹಳ್ಳಿಗಳಲ್ಲಿ ಆರೋಗ್ಯ ಸಮಸ್ಯೆ ಇದ್ದರೆ, ಅವರಿಗೆ ಪ್ರತ್ಯೇಕ (ದೊಡ್ಡ )ಆಸ್ಪತ್ರೆಯಿಂದ, ಸೂಕ್ತ ಚಿಕಿತ್ಸೆ ನೀಡಲು ನ್ಯಾಷನಲ್ ಸೇವಾ ಡಾಕ್ಟರ್ ಅಶೋಶಿಯೇಷನ್ ಕರ್ನಾಟಕ ಘಟಕದಿಂದ ಸಹಕರಿಸುತ್ತೇವೆ ಎಂದು ತಿಳಿಸಿದರು. ಸಾಮಾನ್ಯ ರೋಗ ತಜ್ಞರು, ಶಸ್ತ್ರ ಚಿಕಿತ್ಸಾ ತಜ್ಞರು, ಕೀಲು ಮತ್ತು ಮೂಳೆ ರೋಗ ತಜ್ಞರು, ಸ್ತ್ರೀ ಹಾಗೂ ಪ್ರಸೂತಿ ರೋಗ ತಜ್ಞರು, ಮಕ್ಕಳ ಚಿಕಿತ್ಸಾ ತಜ್ಞರು, ಕಣ್ಣಿನ ತಜ್ಞರು, ಚರ್ಮ ಹಾಗೂ ಗುಪ್ತ ರೋಗ ತಜ್ಞರು, ಕಿವಿ, ಮೂಗು ಹಾಗೂ ಗಂಟಲು ಚಿಕಿತ್ಸೆ ತಜ್ಞರು, ಹೃದಯ ರೋಗ ಚಿಕಿತ್ಸಾ ತಜ್ಞರು, ದಂತ ಚಿಕಿತ್ಸ ತಜ್ಞರು, ಕ್ಯಾನ್ಸರ್ ರೋಗ ತಜ್ಞರು, ನರರೋಗ ತಜ್ಞರು ಭಾಗವಹಿಸಿದ್ದರು.ಈ ವೇಳೆ ಡಾ. ಸುಧಾರಾಣಿ ಇಂಡಿಯಾ ಮಿಸಸ್ ವರ್ಡ್ ವೈಲ್ಡ್ ಪ್ರಶಸ್ತಿ ಪುರುಸ್ಕೃತೆ, ನ್ಯಾಷನಲ್ ಸೇವಾ ಡಾಕ್ಟರ್ ಅಶೋಸಿಯೇಷನ್ ಕರ್ನಾಟಕದ ಉಪಾಧ್ಯಕ್ಷ ಹರೀಶ್ ನಾಯಕ್, ಕಾರ್ಯದರ್ಶಿ ಮಂಜುನಾಥ್, ದಿನ್ನಳ್ಳಿ ಗ್ರಾಪಂ ಅಧ್ಯಕ್ಷೆ ಪಾರ್ವತಿ ಬಾಯಿ, ಉಪಾಧ್ಯಕ್ಷ ರಾಮಕೃಷ್ಣ, ಮಾಜಿ ಅಧ್ಯಕ್ಷ ಮುರುಗೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೈಸೂರಿನ ರಮೇಶ್, ಸೊರಗೊಂಡ ಕೊಪ್ಪ ಜಂಟಿ ಕಾರ್ಯದರ್ಶಿ ಕೃಷ್ಣ ನಾಯಕ್, ಬಂಜರಾ ನೌಕರರ ಜಿಲ್ಲಾ ಅಧ್ಯಕ್ಷ ಪಳನಿಸ್ವಾಮಿ, ಕಾರ್ಯದರ್ಶಿ ಬಾಲು, ಶಿಕ್ಷಕ ಶಾಂತಕುಮಾರ್, ಡಾ. ಪ್ರಕಾಶ್, ಡಾ. ಸಂತೋಷ್, ಡಾ. ಪುರುಷೋತ್ತಮ್, ಡಾ. ಸಂಜಯ್ ಶಿವರಾಜ್, ವೈದ್ಯರು, ಸಿಬ್ಬಂದಿ, ಗ್ರಾಮಸ್ಥರು ಹಾಜರಿದ್ದರು.4ಸಿಎಚ್‌ಎನ್53
ಹನೂರು ತಾಲೂಕಿನ ದಿನ್ನಳ್ಳಿ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.