ಸಾರಾಂಶ
ಜೆ. ಗೋಪಿ ಒಬ್ಬ ಉತ್ತಮ ಪಾಲಿಕೆ ಸದಸ್ಯರಾಗಿ ವಾರ್ಡಿನಲ್ಲಿ ಜನಮನ್ನಣೆ ಗಳಿಸಿದ್ದಾರೆ
ಕನ್ನಡಪ್ರಭ ವಾರ್ತೆ ಮೈಸೂರು
ನಗರ ಮಾಜಿ ಪಾಲಿಕೆ ಸದಸ್ಯ ಜೆ. ಗೋಪಿ ಅವರ ಜನ್ಮದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ನೆಡೆಸಲಾಯಿತು.ಜೆ. ಗೋಪಿ ಸ್ನೇಹ ಬಳಗದ ವತಿಯಿಂದ ತೊಣಚಿಕೊಪ್ಪಲು ಜನತಾ ನಗರದ ಗಣೇಶ್ ಭಂಡಾರ ಬಳಿ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರು ಜೆ. ಗೋಪಿ ಒಬ್ಬ ಉತ್ತಮ ಪಾಲಿಕೆ ಸದಸ್ಯರಾಗಿ ವಾರ್ಡಿನಲ್ಲಿ ಜನಮನ್ನಣೆ ಗಳಿಸಿದ್ದಾರೆ. ಸದಾ ಜನರ ಮಧ್ಯೆ ಇದ್ದು ಬಡಾವಣೆಯಲ್ಲಿ ಯಾವುದೇ ಸಮಸ್ಯೆ ಬಂದರೂ ಕೂಡ ಕಾರ್ಯೋನ್ಮುಖರಾಗಿ ಕೆಲಸ ಮಾಡಿಸಿ ಪರಿಹಾರ ನೀಡುತ್ತಾರೆ ಎಂದರು.
ಸಾರ್ವಜನಿಕರಿಗೆ ಉಚಿತವಾಗಿ ಬಿಪಿ, ಶುಗರ್, ಕ್ಯಾನ್ಸರ್, ಮೂಳೆ ಸಾಂದ್ರತೆ, ಕಣ್ಣು, ಹೃದಯ ತಪಾಸಣೆ ಹಾಗೂ ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಿಸಲಾಯಿತು.ಈ ವೇಳೆ ಜೆ. ಗೋಪಿ ಸ್ನೇಹ ಬಳಗದ ಅಧ್ಯಕ್ಷ ಬಿ. ರಾಜು, ಉಪಾಧ್ಯಕ್ಷ ಕೆಂಚಪ್ಪ, ವಿ. ಬಸವರಾಜು, ತಮ್ಮಣ್ಣ, ದನಿ ಬೀರಯ್ಯ, ಬಿ. ಜಗದೀಶ್, ಪರಮೇಶ್, ಕೆಂಪನಂಜಯ್ಯ, ಜೆ. ಮಹೇಶ್, ಚಿನ್ನದಗುಡಿಹುಂಡಿ ಸೋಮು, ಲಖನ್, ರಾಜೇಶ್, ಕೋಟೆಹುಂಡಿ ಬೀರಲಿಂಗಯ್ಯ, ಮಹೇಶ್, ಅಶೋಕ್, ಗಿರೀಶ್, ಸಿದ್ದರಾಮು, ಫಾರೂಖ್ ಮೊದಲಾದವರು ಇದ್ದರು.