ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಶ್ರೀಮಹಾಲಕ್ಷ್ಮಿಕಲ್ಯಾಣ ಮಂಟಪದಲ್ಲಿ ನಡೆದ ಆರೋಗ್ಯ ಹಾಗೂ ಕಣ್ಣಿನ ಉಚಿತ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ 150 ಕ್ಕೂ ಮಂದಿ ಪ್ರಯೋಜನ ಪಡೆದುಕೊಂಡರು.ವಾಲ್ಮೀಕಿ ಬ್ರಿಗೇಡ್ ಹಾಗೂ ಶ್ರೀಮಹಾಲಕ್ಷ್ಮಿ ಪೂಜಾ ಸಂಸ್ಥಾನ ಸಮಿತಿಯಿಂದ ಆರೋಗ್ಯ ಭಾರತಿ ಮೈಸೂರು, ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಭಾಗಿತ್ವದಲ್ಲಿ ನಡೆದ ಶಿಬಿರದಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಇಸಿಜಿ, ಕ್ಯಾನ್ಸರ್ ತಪಾಸಣೆ, ಉಸಿರಾಟದ ತೊಂದರೆ ತಪಾಸಣೆ, ಕಣ್ಣಿನ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ತಪಾಸಣೆ ಮಾಡಲಾಯಿತು.
ಶಿಬಿರದಲ್ಲಿ 2 ಮಂದಿಗೆ ರಿಯಾಯ್ತಿ ದರದಲ್ಲಿ ಕನ್ನಡಕ ಹಾಗೂ ಇಬ್ಬರು ಉಚಿತ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು. ಸುಮಾರು 150ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.ಇದೇ ವೇಳೆ ವಾಲ್ಮೀಕಿ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ಶಂಕರ್, ಲಕ್ಷ್ಮೀ ದೇವಸ್ಥಾನದ ಮುಖ್ಯ ಅರ್ಚಕ ಕೃಷ್ಣಭಟ್, ಬಿ.ವಿ ವಿಷ್ಣುಮೂರ್ತಿ, ಎಸ್.ನ್ ವಾಸುದೇವ್, ವೈದ್ಯರಾದ ಮೋಹನ್, ಗುಬ್ಜರ್, ಮುಖಂಡರಾದ ಗಂಜಾಂ ಶಿವು, ರಾಘು, ಚೇತು, ಯತೀಶ್, ಪ್ರವೀಣ್ ಸೇರಿದಂತೆ ಇತರರು ಜೊತೆಯಲ್ಲಿದ್ದರು.
ಮೇ 27 ರಂದು ಬಸವ ಜಯಂತಿ ಆಚರಣೆಮಳವಳ್ಳಿ: ಪಟ್ಟಣದ ವಿಶ್ವಗುರು ಕೋ ಆಪರೇಟಿವ್ ಸೊಸೈಟಿಯಿಂದ ಮೇ 27ರಂದು ಗಾಯಿತ್ರಿ ಭವನದಲ್ಲಿ ಬಸವ ಜಯಂತಿ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 11 ಗಂಟೆಗೆ ನಡೆಯುವ ಜಯಂತಿ ಕಾರ್ಯಕ್ರಮದ ಸಾನಿಧ್ಯವನ್ನು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದ ಸ್ವಾಮೀಜಿ ವಹಿಸಲಿದ್ದಾರೆ. ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಆರ್.ಶಿವಕುಮಾರ ದಂಡಿನ ಕಾರ್ಯಕ್ರಮ ಉದ್ಘಾಟಿಸುವರು. ಮೈಸೂರಿನ ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಬಿಬಿಎಂಪಿಯ ನಿವೃತ್ತ ಜಂಟಿ ನಿರ್ದೇಶಕ ಎಂ.ರಾಮಕೃಷ್ಣ, ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಕೆ.ಎಸ್.ಪ್ರಕಾಶ್, ಮನ್ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ, ತಾಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ, ಬೆಳಕವಾಡಿಯ ಡಾ.ಬಿ.ಎಂ.ಮಾಲಾ ಭಾಗವಹಿಲಿದ್ದಾರೆ ಎಂದು ಸೊಸೈಟಿ ಅಧ್ಯಕ್ಷ ಎಂ.ಜಿ.ರಂಗಸ್ವಾಮಿ ತಿಳಿಸಿದ್ದಾರೆ.