ಸಾರಾಂಶ
ಹಾರೋಹಳ್ಳಿ : ತಾಲೂಕಿನ ಶ್ರೀ ಕಣಿವೆ ಮಹದೇಶ್ವರ ಸೇವಾ ಸಮಿತಿ ಹಾಗೂ ಸ್ನೇಹಮಯಿ ಫೌಂಡೇಶನ್ ಸಹಯೋಗದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ತಟ್ಟೆಕೆರೆ ಶ್ರೀ ಕಣಿವೆ ಮಹದೇಶ್ವರ ದೇವಾಲಯದ ಆವರಣದಲ್ಲಿ ಉಚಿತ ಸಾಮೂಹಿಕ ವಿವಾಹವನ್ನು ನ. 11 ರಂದು ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಜಿ.ಶಾಂತರಾಜು ತಿಳಿಸಿದರು. ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಣಿವೆ ಮಹದೇಶ್ವರಸ್ವಾಮಿ ಸೇವಾಸಮಿತಿ ಸಹಕಾರದಲ್ಲಿ 25 ಜೋಡಿ ವಧು-ವರರು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ವಧುವಿಗೆ ಸೀರೆ, ರವಿಕೆ ಮಂಗಳಸೂತ್ರ ಹಾಗೂ ವರನಿಗೆ ಶಲ್ಯ, ಪಂಚೆ ವಸ್ತ್ರಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು. ಉಪಾಧ್ಯಕ್ಷ ಡಿ.ಎಂ.ಮಹದೇವ್ ಮಾತನಾಡಿ, ಇತ್ತೀಚೆಗೆ ವೈಭವವೀತ ಮದುವೆಗಳನ್ನು ನಡೆಸುವ ಮೂಲಕ ಪೋಷಕರು ಸಾಲದ ಶೂಲಕ್ಕೆ ಒಳಗಾಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಇಂತಹ ಸಂಕಷ್ಟಗಳಿಂದ ದೂರವಿಡುವ ಉದ್ದೇಶದಿಂದ ಇಂತಹ ಸಾಮೂಹಿಕ ವಿವಾಹಗಳು ಅನುಕೂಲವಾಗುತ್ತದೆ. ಇದನ್ನು ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲೆಯ ಜನರಿಗೆ ಮನವಿ ಮಾಡಿದರು.ಬಾಲ್ಯ ವಿವಾಹ ಹಾಗೂ 2ನೇ ಮದುವೆಗೆ ಅವಕಾಶ ಇರುವುದಿಲ್ಲ, ವಿವಾಹ ಬಯಸುವ ವರನಿಗೆ 21 ವರ್ಷ, ವಧುವಿಗೆ 18 ವರ್ಷ ಪೂರ್ಣಗೊಂಡಿರಬೇಕು, ಈ ದಾಖಲಾತಿ ಹಾಗೂ ಭಾವಚಿತ್ರಗಳೊಂದಿಗೆ ದಾಖಲೆಗಳನ್ನು ನೋಂದಾಯಿಸಕೊಳ್ಳಬೇಕು. ಹೆಚ್ಚಿನ ವಿವರಗಳಿಗಾಗಿ ಮೊ.9742535977, 9739448958, 9741102857 ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.ಕಾರ್ಯದರ್ಶಿ ಶ್ರೀನಿವಾಸ್ ಪ್ರಸಾದ್, ಖಜಾಂಚಿ ಪರಮೇಶ್, ನಿರ್ದೇಶಕರಾದ ವೃಷಬೇಂದ್ರ, ಭೈರವ, ಶಿವನಪ್ಪ ಇದ್ದರು.