ಮೂರ್ನಾಡುನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

| Published : Mar 04 2025, 12:31 AM IST

ಸಾರಾಂಶ

ಮೂರ್ನಾಡುನಲ್ಲಿ ಹೆಲ್ತ್‌ಫಸ್ಟ್‌ ಆಸ್ಪತ್ರೆ ಮೂರ್ನಾಡು ಇದರ ವತಿಯಿಂದ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಮೂರ್ನಾಡುನಲ್ಲಿ ಹೆಲ್ತ್ ಫಸ್ಟ್ ಆಸ್ಪತ್ರೆ ಮೂರ್ನಾಡು ಇದರ ವತಿಯಿಂದ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಹೆಲ್ತ್ ಫಸ್ಟ್ ಆಸ್ಪತ್ರೆಯಲ್ಲಿ ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಅಧಿಕ ರಕ್ತದೊತ್ತಡ, ಶ್ವಾಸಕೋಶದ ತಪಾಸಣೆ, ಪೌಷ್ಟಿಕಾಂಶದ ಮೌಲ್ಯಮಾಪನ, ಬಿಎಂಐ, ಡಯಾಬಿಟಿಸ್ ಮತ್ತು ಸ್ತನ ಕ್ಯಾನ್ಸರ್ ತಪಾಸಣೆ, ಮಹಿಳೆಯರ ಆರೋಗ್ಯ, ದೃಷ್ಟಿ ತಪಾಸಣೆ ಹಾಗೂ ಮಾರ್ಗದರ್ಶನವನ್ನು ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ನೀಡಿದರು.

ಈ ಸಂದರ್ಭ ಜನರಲ್ ಸರ್ಜನ್ ಡಾ. ಧನಶ್ರೀ ಬಿ.ವಿ. ಉಚಿತ ವೈದ್ಯಕೀಯ ಸಮಾಲೋಚನೆ ನೀಡಿದರು.

ಕಾರ್ಯಕ್ರಮದಲ್ಲಿ ಮೂರ್ನಾಡು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಕಣ್ಣು ಅಪ್ಪಚ್ಚು, ಕಾರ್ಯದರ್ಶಿ ಪಿ ಎಂ ಅಪ್ಪನ, ಖಜಾಂಜಿ ಅರುಣ್ ಅಪ್ಪಚ್ಚು, ಕೊಡವ ಪೊಮ್ಮಕ್ಕಡ ಕೂಟದ ಅಧ್ಯಕ್ಷರಾದ ರೇಖಾ ತಮ್ಮಯ್ಯ, ಕಾರ್ಯದರ್ಶಿ ಗೀತಾ ಪವಿತ್ರ ಹಾಗೂ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.