ಕೆನರಾ ಬ್ಯಾಂಕ್‌ನ ಉಚಿತ ಸೌಲಭ್ಯ ಸದುಪಯೋಗ ಪಡೆದುಕೊಳ್ಳಿ

| Published : Nov 23 2024, 12:31 AM IST

ಕೆನರಾ ಬ್ಯಾಂಕ್‌ನ ಉಚಿತ ಸೌಲಭ್ಯ ಸದುಪಯೋಗ ಪಡೆದುಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳಲ್ಕೆರೆ: ಕೆನರಾ ಬ್ಯಾಂಕಿನ ಉಳಿತಾಯ ಖಾತೆ ಹೊಂದಿರುವ ಮಹಿಳೆಯರಿಗೆ ಉಚಿತ ಅಪಘಾತ ವಿಮೆ , ಕ್ಯಾನ್ಸರ್‌ ಚಿಕಿತ್ಸೆಗೆ ಪರಿಹಾರ ಸೇರಿದಂತೆ ಅನೇಕ ಉಚಿತ ಸೌಲಭ್ಯಗಳಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಮಗಿರಿ ಕೆನರಾಬ್ಯಾಂಕ್‌ ವ್ಯವಸ್ಥಾಪಕ ಟಿ.ಬಿ.ತೇಜಸ್ವಿ ಮನವಿ ಮಾಡಿದರು.

ಹೊಳಲ್ಕೆರೆ: ಕೆನರಾ ಬ್ಯಾಂಕಿನ ಉಳಿತಾಯ ಖಾತೆ ಹೊಂದಿರುವ ಮಹಿಳೆಯರಿಗೆ ಉಚಿತ ಅಪಘಾತ ವಿಮೆ , ಕ್ಯಾನ್ಸರ್‌ ಚಿಕಿತ್ಸೆಗೆ ಪರಿಹಾರ ಸೇರಿದಂತೆ ಅನೇಕ ಉಚಿತ ಸೌಲಭ್ಯಗಳಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಮಗಿರಿ ಕೆನರಾಬ್ಯಾಂಕ್‌ ವ್ಯವಸ್ಥಾಪಕ ಟಿ.ಬಿ.ತೇಜಸ್ವಿ ಮನವಿ ಮಾಡಿದರು.ತಾಲೂಕಿನ ರಾಮಗಿರಿ ಕೆನರಾ ಬ್ಯಾಂಕಿನಲ್ಲಿ ಹಮ್ಮಿಕೊಂಡಿದ್ದ 119ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇಂದಿನ ದಿನಮಾನಗಳಲ್ಲಿ ಮಹಿಳೆಯರ ಸಂಕಷ್ಟಗಳನ್ನು ಅರಿತು ಅವರ ಹಿತದೃಷ್ಟಿಯನ್ನು ಮುಂದಿಟ್ಟುಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಕೆನರಾ ಬ್ಯಾಂಕ್‌ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಕೆಲವು ಉಚಿತ ಸೌಲಭ್ಯಗಳನ್ನು ನೀಡಲು ಕೆನರಾ ಬ್ಯಾಂಕ್‌ ಮುಂದಾಗಿದೆ ಎಂದರು.

ಉಳಿತಾಯ ಖಾತೆಯಲ್ಲಿ ಕನಿಷ್ಠ ಐದು ಸಾವಿರಗಳು ಇರುವಂತೆ ನೋಡಿಕೊಳ್ಳಬೇಕು. ಅಂತಹ ಗ್ರಾಹಕರಿಗೆ ಯಾವುದೇ ಪ್ರೀಮಿಯಮ್‌ ಕನೆಕ್ಟ್ ಮಾಡಿಕೊಳ್ಳಲು 9 ಲಕ್ಷ ಅಪಘಾತ ವಿಮೆ, 3 ಲಕ್ಷದವರೆಗೆ ಕ್ಯಾನ್ಸರ್‌ ಚಿಕಿತ್ಸೆಯ ವೆಚ್ಚವನ್ನು ಭರಿಸುವ ಯೋಜನೆ ಇದಾಗಿದೆ. ಇದೇ ರೀತಿ ಇನ್ನೂ ಅನೇಕ ಸೌಲಭ್ಯಗಳನ್ನು ಮಹಿಳೆಯರಿಗೆ ನೀಡುತ್ತಿದ್ದು, ಪ್ರತಿಯೊಬ್ಬ ಮಹಿಳಿಯರು ಇದರ ಸದುಪಯೋಗ ಪಡೆಯಬಹುದಾಗಿದೆ ಎಂದರು.ಇದೇ ವೇಳೆ ನಿವೃತ್ತ ಹೊಂದಿದ ಮಹಾ ಪ್ರಬಂಧಕ ಲಿಂಗರಾಜ್‌ ಹಾಗೂ ರಾಮಗಿರಿ ಸಿಬ್ಬಂದಿ ನರಸಿಂಹಪ್ಪ ರವರನ್ನು ಅಭಿನಂದಿಸಲಾಯಿತು.

ಕೆನರಾ ಬ್ಯಾಂಕ್‌ ಸಿಬ್ಬಂದಿಗಳಾದ ಟಿ.ಭೀಮಶೇಖರ್‌, ವೆಂಕಟೇಶ್‌, ಪವನ್‌ ಕುಮಾರ್‌, ಮದುಕುಮಾರ್‌, ರವಿ ಹಾಗೂ ಗ್ರಾಹಕರು ಇದ್ದರು.