ಸಾರಾಂಶ
ನಾಯಿಗಳು ಮತ್ತು ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕಾ ಅಭಿಯಾನ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಕುಶಾಲನಗರ ಪುರಸಭೆ ಆಶ್ರಯದಲ್ಲಿ ನಾಯಿಗಳು ಮತ್ತು ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕಾ ಅಭಿಯಾನ ಕಾರ್ಯಕ್ರಮ ನಡೆಯಿತು.ಕುಶಾಲನಗರ ಪಶು ವೈದ್ಯ ಚಿಕಿತ್ಸಾ ಕೇಂದ್ರದಲ್ಲಿ 105 ಸಾಕು ನಾಯಿಗಳು 10 ಬೀದಿ ನಾಯಿಗಳು ಮತ್ತು 20 ಬೆಕ್ಕುಗಳಿಗೆ ಉಚಿತ ಲಸಿಕೆ ನೀಡಲಾಯಿತು. ಬೆಳಗಿನಿಂದಲೇ ಸಾಕುಪ್ರಾಣಿಗಳ ಮಾಲೀಕರು ಪಶುವೈದ್ಯ ಆಸ್ಪತ್ರೆಗೆ ಆಗಮಿಸಿ ತಮ್ಮ ಸಾಕುಪ್ರಾಣಿಗಳಿಗೆ ಲಸಿಕೆ ಹಾಕಿಸಿಕೊಂಡರು. ಪ್ರಾಣಿ ಪ್ರೇಮಿಗಳು 10 ಬೀದಿ ನಾಯಿಗಳನ್ನು ತಂದು ಲಸಿಕೆ ಹಾಕಿಸಿದ ದೃಶ್ಯವು ಕಂಡು ಬಂತು.ಪಶು ವೈದ್ಯ ಇಲಾಖೆ ಡಾ ಸಂಜೀವ್ ಕುಮಾರ್ ಆರ್ ಶಿಂಧೆ, ಡಾ ಶಶಿಧರ್, ಕುಶಾಲನಗರ ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ಉದಯಕುಮಾರ್ ಮತ್ತು ಸಿಬ್ಬಂದಿ ಈ ಸಂದರ್ಭ ಇದ್ದರು.
;Resize=(128,128))
;Resize=(128,128))