ಸಾರಾಂಶ
ಉಚಿತ ಸಂಸ್ಕೃತ ಸಂಭಾಷಣಾ ಶಿಬಿರಕ್ಕೆ ಚಾಲನೆ ನೀಡಲಾಯಿತು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ಎನ್. ಚಂದ್ರಮೋಹನ್ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರ ಸಂಸ್ಕೃತ ಭಾರತಿ ಮತ್ತು ರಂಗಭಾರತಿ ಕಲಾಮಂದಿರಂ ಸಹಯೋಗದೊಂದಿಗೆ ಉಚಿತ ಸಂಸ್ಕೃತ ಸಂಭಾಷಣಾ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಕುಶಾಲನಗರದ ರಂಗಭಾರತಿ ಕಲಾಮಂದಿರಂನಲ್ಲಿ ಹತ್ತು ದಿನಗಳ ಕಾಲ ನಡೆಯಲಿರುವ ಶಿಬಿರಕ್ಕೆ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ ಎನ್ ಚಂದ್ರಮೋಹನ್ ಚಾಲನೆ ನೀಡಿದರು.ಈ ಸಂದರ್ಭ ಮಾತನಾಡಿದ ಅವರು, ಯಾವುದೇ ಅಧ್ಯಯನಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ. ಹುಟ್ಟಿನಿಂದ ಸಾವು ತನಕ ನಿರಂತರ ಕಲಿಕೆಯ ಅಗತ್ಯತೆ ಇರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಉದ್ಯಮಿ ಹಾಗೂ ಸಂಸ್ಕೃತ ವಿದ್ವಾಂಸರಾಗಿರುವ ವೇದ ವಿಜ್ಞಾನ ಗುರುಕುಲದ ಶಶಾಂಕ್ ಹತ್ವಾರ್ ಸಂಸ್ಕೃತ ಪದಗಳನ್ನು ಬಳಸುವ ಮೂಲಕ ಶಿಬಿರಾರ್ಥಿಗಳ ಪರಿಚಯ ಮಾತುಗಳೊಂದಿಗೆ ಹತ್ತು ದಿನಗಳ ಕಾಲ ನಡೆಯುವ ಉಚಿತ ತರಗತಿ ಆರಂಭಿಸಿದರು. ಸಂಸ್ಕೃತ ಭಾರತಿ ಮಂಗಳೂರು ವಿಭಾಗ ಸಂಯೋಜಕ ಮಧುಸೂದನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಭಾರತಿಯ ಕಾರ್ಯದರ್ಶಿ ದೀಪ ಕಾರ್ಯಕ್ರಮ ನಿರೂಪಿಸಿದರು. ರಶ್ಮಿ ಸಂಜಯ್ ಪ್ರಾರ್ಥಿಸಿದರು.ಶಿಕ್ಷಕಿ ಕೃತಿಕ ಅವರಿಂದ ಸ್ವಾಗತ, ಮಧುಸೂದನ್ ವಂದಿಸಿದರು.