ಸಾರಾಂಶ
ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ವತಿಯಿಂದ ಯು. ಪದ್ಮನಾಭ ಕಾಮತ್, ಮಧು ಪಾಟಿಲ್ ಮತ್ತು ಸೋಮಶೇಖರ ಸುರತ್ಕಲ್ ಇವರ ಪ್ರಾಯೋಜಕತ್ವದಲ್ಲಿ ಉಡುಪಿ ಅಜ್ಜರಕಾಡಿನ ಟ್ರಾಕ್ ಫೀಲ್ಡ್ ಅಥ್ಲೆಟಿಕ್ ಕ್ಲಬ್ ಇದರ 50 ಅಥ್ಲಿಟ್ಸ್‌ಗಳಿಗೆ ಟಿ - ಶರ್ಟ್ ವಿತರಿಸಲಾಯಿತು
ಕನ್ನಡಪ್ರಭ ವಾರ್ತೆ ಉಡುಪಿ
ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ವತಿಯಿಂದ ಯು. ಪದ್ಮನಾಭ ಕಾಮತ್, ಮಧು ಪಾಟಿಲ್ ಮತ್ತು ಸೋಮಶೇಖರ ಸುರತ್ಕಲ್ ಇವರ ಪ್ರಾಯೋಜಕತ್ವದಲ್ಲಿ ಉಡುಪಿ ಅಜ್ಜರಕಾಡಿನ ಟ್ರಾಕ್ ಫೀಲ್ಡ್ ಅಥ್ಲೆಟಿಕ್ ಕ್ಲಬ್ ಇದರ 50 ಅಥ್ಲಿಟ್ಸ್‌ಗಳಿಗೆ ಟಿ - ಶರ್ಟ್ ವಿತರಿಸಲಾಯಿತು ಉಡುಪಿ ಅಜ್ಜರಕಾಡು ಮಹತ್ಮಾ ಗಾಂಧಿ ಸ್ಮಾರಕ ಕ್ರೀಡಾಂಗಣದಲ್ಲಿ ಜರಗಿದ ಸರಳ ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರು, ಸಂಸ್ಥೆಯ ಗೌರವಾಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ಅವರು ಕ್ರೀಡಾ ಪಟುಗಳಿಗೆ ಟೀ- ಶರ್ಟ್ ವಿತರಿಸಿದರು. ಕ್ರೀಡಾ ತರಬೇತುದಾರರಾದ ಝಹೀರ್ ಅಬ್ಬಾಸ್, ಪ್ರಾಯೋಜಕರಾದ ಮಧು ಪಾಟೀಲ್, ಯು.ಪದ್ಮನಾಭ ಕಾಮತ್, ಸೋಮಶೇಖರ ಸುರತ್ಕಲ್, ಸಂಸ್ಥೆಯ ಅಧ್ಯಕ್ಷರಾದ ಗಿರೀಶ್ ಗುಡ್ಡೆಯಂಗಡಿ, ಪ್ರಧಾನ ಕಾರ್ಯದರ್ಶಿ ಸುವೇಲ್ ರಹಮತ್, ಕೋಶಾಧಿಕಾರಿ ಸತೀಶ್ ಡಿ. ಸಾಲ್ಯಾನ್, ಕಾರ್ಯದರ್ಶಿಗಳಾದ ಆಶಾ ವಾಸು, ಶ್ರೀಧರ ಮಾಬಿಯಾನ್, ನಿರ್ದೇಶಕರಾದ ಶರತ್ ಕುಮಾರ್ ಸದಸ್ಯರಾದ ಅಜಿತ್ ಮೆಂಡನ್, ಪ್ರೇಮ್ ಮಿನೇಜಸ್, ಶೇಖರ ಕೆ. ಕೋಟ್ಯಾನ್ ಮೊದಲಾದವರು ಇದ್ದರು.