ನಾಪೋಕ್ಲು: ಉಚಿತ ಟೈಲರಿಂಗ್ ತರಬೇತಿ

| Published : Jul 02 2024, 01:37 AM IST

ಸಾರಾಂಶ

ಪುನಶ್ಚೇತನ ಸಂಸ್ಥೆಯ ಕಚೇರಿಯಲ್ಲಿ ಉಚಿತ ಟೈಲರಿಂಗ್‌ ತರಬೇತಿ ಕಾರ್ಯಕ್ರಮ ನಡೆಯಿತು. ಗ್ರಾ.ಪಂ. ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ ಬೇಬ ಮಾತನಾಡಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಹಲವಾರು ಸಮಾಜಮುಖಿ ಕೆಲಸ ಮಾಡುತ್ತಿರುವ ಪುನಶ್ಚೇತನ ಸಂಸ್ಥೆಯ ಕಾರ್ಯ ಸಮಾಜಕ್ಕೆ ಮಾದರಿ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ್ ಬೇಬ ಹೇಳಿದರು.

ಇಲ್ಲಿನ ಪುನಶ್ಚೇತನ ಸಂಸ್ಥೆಯ ಕಚೇರಿಯಲ್ಲಿ ಸೋಮವಾರ ಸಂಸ್ಥೆ ವತಿಯಿಂದ ಹೆಣ್ಣು ಮಕ್ಕಳಿಗೆ ಆಯೋಜಿಸಲಾಗಿದ್ದ ಉಚಿತ ಟೈಲರಿಂಗ್ ತರಬೇತಿಯ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಮಕ್ಕಳ, ಮಹಿಳೆಯರ ಅಭಿವೃದ್ಧಿಗಾಗಿ ಸಂಸ್ಥೆ ವಿಶೇಷ ಕಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.ಅವುಗಳ ಪ್ರಯೋಜನವನ್ನು ಹೊಂದಿಕೊಳ್ಳಬೇಕು ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಪ್ರತೀಪ ಬಿ.ಎಂ ಮಾತನಾಡಿ, ವಿಶೇಷ ಮಕ್ಕಳನ್ನ ಮುಖ್ಯವಾಹಿನಿಗೆ ತರುವುದರ ಜೊತೆಗೆ ಬಡ ಹೆಣ್ಣು ಮಕ್ಕಳಿಗೆ ಸ್ವಾವಲಂಬನೆ ಜೀವನ ನಡೆಸಲು ಟೈಲರಿಂಗ್ ತರಬೇತಿ ಕೊಡುತ್ತಿರುವುದು ಒಳ್ಳೆಯ ಉತ್ತಮ ವಿಚಾರ ಎಂದು ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಮುಖ್ಯಸ್ಥರಾದ ಬೊಪ್ಪಂಡ ಸೂರಜ್ ಗಣಪತಿ ಮತ್ತು ಬಾಳೆಯಡ ದಿವ್ಯ ಮಂದಪ್ಪ, ತರಬೇತಿ ಶಿಕ್ಷಕಿ ಅಶ್ವಿನಿ, ತರಬೇತಿ ವಿದ್ಯಾರ್ಥಿಗಳು, ವಿಶೇಷ ಮಕ್ಕಳು, ಸಂಸ್ಥೆಯ ಶಿಕ್ಷಕಿ ಅಸ್ಮ ಹಾಜರಿದ್ದರು.