ಸಾರಾಂಶ
ಗಡಿನಾಡು ಕೋಚಿಂಗ್ ಸೆಂಟರ್‌ನ ನಿರ್ದೇಶಕರಾದ ಲಕ್ಷ್ಮಣ ಮಲ್ಲಪ್ಪ ಅಷ್ಟಗಿ ನೇತೃತ್ವದಲ್ಲಿ ಮತ್ತು ರಾಮನಗರ ಪಿಎಸೈ ಬಸ್ಸು ಮಬನೂರ್ ಮತ್ತು ಕಲಘಟಗಿ ಪಿಎಸೈ ಬಸ್ಸು ಯದ್ದಲಗುಡ್ಡ ಅನುಭವ ಸಂಪನ್ಮೂಲ ವ್ಯಕ್ತಿಗಳಿಂದ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ನಡೆಯುವ ಕಾರ್ಯಾಗಾರದಲ್ಲಿ ಪರೀಕ್ಷೆಗಳ ತಯಾರಿ ಹಾಗೂ ಅಗತ್ಯ ಮಾಹಿತಿಗಳನ್ನು ನೀಡಲಾಗುವುದು.
ಬೆಳಗಾವಿ: ಕೆಎಎಸ್, ಪಿಎಸೈ ಮತ್ತು ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ನಗರದ ಗಡಿನಾಡು ಕೋಚಿಂಗ್ ಸೆಂಟರ್ ವತಿಯಿಂದ ಉಚಿತ ತರಬೇತಿ ಕಾರ್ಯಾಗಾರ ನ.10 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಗಡಿನಾಡು ಕೋಚಿಂಗ್ ಸೆಂಟರ್‌ನ ನಿರ್ದೇಶಕರಾದ ಲಕ್ಷ್ಮಣ ಮಲ್ಲಪ್ಪ ಅಷ್ಟಗಿ ನೇತೃತ್ವದಲ್ಲಿ ಮತ್ತು ರಾಮನಗರ ಪಿಎಸೈ ಬಸ್ಸು ಮಬನೂರ್ ಮತ್ತು ಕಲಘಟಗಿ ಪಿಎಸೈ ಬಸ್ಸು ಯದ್ದಲಗುಡ್ಡ ಅನುಭವ ಸಂಪನ್ಮೂಲ ವ್ಯಕ್ತಿಗಳಿಂದ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ನಡೆಯುವ ಕಾರ್ಯಾಗಾರದಲ್ಲಿ ಪರೀಕ್ಷೆಗಳ ತಯಾರಿ ಹಾಗೂ ಅಗತ್ಯ ಮಾಹಿತಿಗಳನ್ನು ನೀಡಲಾಗುವುದು.ಎಸ್ಸೆಸ್ಸೆಲ್ಸಿ ಪಾಸಾಗಿದ್ದು, 18 ವರ್ಷ ಮೇಲ್ಪಟ್ಟರು ಭಾಗವಹಿಸಬಹುದು. ಕಾರ್ಯಾಗಾರವು ನಡೆಯುವ ಸ್ಥಳ: ಗಡಿನಾಡು ಕೋಚಿಂಗ್ ಸೆಂಟರ್, ಸಿಬಿಟಿ ಹತ್ತಿರ ಫಾರೆಸ್ಟ್ ಆಫೀಸ್ ಎದುರಿಗೆ ಶೆಟ್ಟಿಗಲ್ಲಿ ಕಾರ್ನರ್ ಬೆಳಗಾವಿ. ತರಬೇತಿಗೆ ಭಾಗವಹಿಸುವ ಆಸಕ್ತರು ಮಾಹಿತಿಗಾಗಿ ಮೊ.8105838913 ಸಂಪರ್ಕಿಸಬಹುದು.