ಸಾರಾಂಶ
ಶ್ರವಣ ದೋಷ ಹಾಗೂ ಕಿವುಡುತನದ ತಡೆಗಟ್ಟುವಿಕೆಗಾಗಿ ಜಾಗೃತಿ ಮೂಡಿಸಿ ನಿಯಂತ್ರಿಸಲು ಪ್ರತಿ ವರ್ಷ ಮಾ. ೩ರಂದು ವಿಶ್ವ ಶ್ರವಣ ದಿನ ಆಚರಿಸಲಾಗುತ್ತಿದೆ. ಕಿವಿ ದೋಷವಿದೆಯೆಂದು ಕಿವಿಯಲ್ಲಿ ಕಡ್ಡಿ ಹಾಕಬಾರದು, ಎಣ್ಣೆ ಹಾಕಬಾರದು, ನಕಲಿ ವೈದ್ಯರ ಬಳಿ ಹೋಗಿ ಕಿವಿಯಲ್ಲಿ ಗುಗ್ಗೆ ತೆಗೆಸಿಕೊಳ್ಳಬಾರದು.
ಕನಕಗಿರಿ:
ಶ್ರವಣ ದೋಷ ಹೊಂದಿರುವ ೬ ವರ್ಷದೊಳಗಿನ ಮಕ್ಕಳಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವೀಂದ್ರನಾಥ ಎಂ.ಎಚ್ ಹೇಳಿದರು.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಗಂಗಾವತಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕನಕಗಿರಿ ಸಹಯೋಗದಲ್ಲಿ ಸೋಮವಾರ ಇಲ್ಲಿನ ಸಂತೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಶ್ರವಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರವಣ ದೋಷ ಹಾಗೂ ಕಿವುಡುತನದ ತಡೆಗಟ್ಟುವಿಕೆಗಾಗಿ ಜಾಗೃತಿ ಮೂಡಿಸಿ ನಿಯಂತ್ರಿಸಲು ಪ್ರತಿ ವರ್ಷ ಮಾ. ೩ರಂದು ವಿಶ್ವ ಶ್ರವಣ ದಿನ ಆಚರಿಸಲಾಗುತ್ತಿದೆ. ಕಿವಿ ದೋಷವಿದೆಯೆಂದು ಕಿವಿಯಲ್ಲಿ ಕಡ್ಡಿ ಹಾಕಬಾರದು, ಎಣ್ಣೆ ಹಾಕಬಾರದು, ನಕಲಿ ವೈದ್ಯರ ಬಳಿ ಹೋಗಿ ಕಿವಿಯಲ್ಲಿ ಗುಗ್ಗೆ ತೆಗೆಸಿಕೊಳ್ಳಬಾರದು, ವೈದ್ಯರ ಸಲಹೆ ಇಲ್ಲದೆ ಕಿವಿಯಲ್ಲಿ ಏನು ಹಾಕಬಾರದು. ಕಲುಷಿತ ನೀರಿನಲ್ಲಿಯೂ ಈಜಬಾರದು. ಕಿವಿನೋವು, ಸೋರುವಿಕೆ ಕಂಡು ಬಂದರೆ ತಾಲೂಕು, ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಕಿವಿ, ಮೂಗು, ಗಂಟಲು ತಜ್ಞರನ್ನು ಸಂಪರ್ಕಿಸುವಂತೆ ತಿಳಿಸಿದರು.ಇಎನ್‌ಟಿ ವೈದ್ಯ ಡಾ. ಅವಿನಾಶ, ರಾಷ್ಟ್ರೀಯ ಶ್ರವಣ ದೋಷ ನಿವಾರಣ ಮತ್ತು ನಿಯಂತ್ರಣ ಕಾರ್ಯಕ್ರಮ ನವಜಾತು ಶಿಶುವಿನ ಕಿವಿಯ ಆರೈಕೆ ಮತ್ತು ಸದರಿ ಕಾರ್ಯಕ್ರಮದಡಿ ಸಿಗುವ ಸೇವಾ ಸೌಲಭ್ಯಗಳ ಮತ್ತು ಚಿಕಿತ್ಸೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಟಿಎಚ್‌ಒ ಡಾ. ಗೌರಿಶಂಕರ, ಪಪಂ ಅಧ್ಯಕ್ಷೆ ಹುಸೇನ್‌ಬೀ ಚಳ್ಳಮರದ, ಉಪಾದ್ಯಕ್ಷ ಕಂಠಿರಂಗ ನಾಯಕ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ರಾಜೇಶ ಬೆಲ್ಲಂಕೊಂಡಿ, ಹನುಮೇಶ, ಸಾಧೀಕ ಪಾಷಾ, ಆಡಳಿತ ವೈದ್ಯಾಧಿಕಾರಿ ಡಾ. ಸಹನಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ, ಆರೋಗ್ಯ ನಿರೀಕ್ಷಣಾಧಿಕಾರಿ ರಮೇಶ, ಆಪ್ತ ಸಮಾಲೋಚಕ ಸಿದ್ದರಾಮಪ್ಪ ಚಳ್ಳೂರು ಇದ್ದರು.