ಸಾರಾಂಶ
ಚಿತ್ರದುರ್ಗ: ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್, ಮಹಿಳಾ ಪತಂಜಲಿ ಯೋಗ ಸಮಿತಿ, ಯುವ ಭಾರತ್ ಪತಂಜಲಿ ಕಿಸಾನ್ ಸೇವಾ ಸಮಿತಿ ವತಿಯಿಂದ 15 ದಿನಗಳ ಉಚಿತ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ತರಬೇತಿ ಶಿಬಿರವನ್ನು ಸೆ.22 ರಿಂದ ಅ.6 ರವರೆಗೆ ಬೆಳಿಗ್ಗೆ 5.30 ರಿಂದ 7 ಗಂಟೆಯವರೆಗೆ ಚಿತ್ರದುರ್ಗ ನಗರದ ಪಿಳ್ಳೇಕೆರೆನಹಳ್ಳಿ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದೆ. ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸುವರು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಬಿಲ್ಡರ್ ಅಸೋಸಿಯೇಷನ್ ಛೇರ‍್ಮನ್ ಎಂ.ಕೆ. ಅನಂತರೆಡ್ಡಿ , ಜಿಪಂ ನಿವೃತ್ತ ಇಂಜಿನಿಯರ್ ಬಿ. ಶರಣಪ್ಪ ಭಾಗವಹಿಸುವರು. ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಎಂ.ವಿ. ದೇವಾನಂದ ನಾಯ್ಕ್ ಉಪಸ್ಥಿತರಿರುವರು. ಯೋಗ ಶಿಕ್ಷಕರಾದ ಜಿ. ಶ್ರೀನಿವಾಸ್, ಶ್ರೀಧರ್, ಲಲಿತಾ ಬೇದ್ರೆ, ವೀರೇಶ್, ತಿಪ್ಪೇಸ್ವಾಮಿ, ನಾಗೇಶ್, ಬಸವರಾಜ್ ಶಿಬಿರ ನಡೆಸಿಕೊಡುವರು. ಹೆಚ್ಚಿನ ಮಾಹಿತಿಗಾಗಿ ಸಂಘಟನಾ ಕಾರ್ಯದರ್ಶಿ ಜಿ.ಎಸ್. ಗುರುಮೂರ್ತಿ ಅವರ ಮೊಬೈಲ್ ಸಂಖ್ಯೆ 9449145416, ಖಜಾಂಚಿ ನವೀನ್ 9901585905 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.