ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ದಿ ಕಾಸ್ಮೋಪಾಲಿಟನ್ ಕ್ಲಬ್‌ನಲ್ಲಿ ಸ್ವಾತಂತ್ರ್ಯೋತ್ಸವ ಆಯೋಜಿಸಲಾಗಿತ್ತು.ಕ್ಲಬ್ಬಿನ 150 ಮಂದಿ ಸದಸ್ಯರು ಮತ್ತು ಕುಟುಂಬ ವರ್ಗದವರು ಪಾಲ್ಗೊಂಡಿದ್ದರು. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಾಕಥಾನ್ ಆಯೋಜಿಸಲಾಗಿತ್ತು. ಕ್ಲಬ್ನ ಆವರಣದಿಂದ ಆರಂಭವಾದ ವಾಕಥಾನ್, ಎಂ.ಎನ್. ಜೋಯಿಸ್ ವೃತ್ತ, ರಾಮಸ್ವಾಮಿ ವೃತ್ತ, ಆರ್.ಟಿ.ಒ ವೃತ್ತ, ನ್ಯಾಯಾಲಯ, ಪ್ರಾಚ್ಯವಸ್ತು ಸಂಗ್ರಹಾಲಯದ ಮೂಲಕ ಮತ್ತೆ ಕ್ಲಬ್ ತಲುಪಿತು.
ಸದ್ವಿದ್ಯಾ ಶಿಕ್ಷಣ ಸಂಸ್ಥೆ:ನಾರಾಯಣಶಾಸ್ತ್ರಿ ರಸ್ತೆಯ ಸದ್ವಿದ್ಯಾ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನ ಆಯೋಜಿಸಲಾಗಿತ್ತು. ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಎಸ್.ಕೆ.ನರಹರಿ ಬಾಬು ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ನಾಗ್ ಶರತ್ ಧ್ವಜಾರೋಹಣ ನೆರವೇರಿಸಿದರು. ಗೌರವ ಸಹ ಕಾರ್ಯದರ್ಶಿ ಕೆ.ಎಸ್. ಹಿರಿಯಣ್ಣ ಇದ್ದರು.
ಶ್ರೀಕಾಂತ ವಿದ್ಯಾಸಂಸ್ಥೆ:ಶಂಕರಮಠ ಬಡಾವಣೆಯ ಶ್ರೀಕಾಂತ ವಿದ್ಯಾಸಂಸ್ಥೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೆ.ಎನ್. ವರದರಾಜ ಅಯ್ಯಂಗಾರ್ ಮೆಮೇರಿಯ ಲ್ ಟ್ರಸ್ಟಿನ ಖಜಾಂಚಿ ಎನ್.ಎಸ್. ರಂಗರಾಜನ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಕೆ.ಪಿ. ಪರಮಶಿವಯ್ಯ ಧ್ವಜಾರೋಹಣ ನೆರವೇರಿಸಿದರು.
ಮಹಾಜನ ವಿದ್ಯಾಸಂಸ್ಥೆ:ನಗರದ ಮಹಾಜನ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಮೈಸೂರು ವಿವಿ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ. ಕೃಷ್ಣ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಟಿ. ವಿಜಯಲಕ್ಷ್ಮೀ ಮುರಳೀಧರ್, ಅಧ್ಯಕ್ಷ ಟಿ. ಮುರಳೀಧರ ಭಾಗವತ್ ಪಾಲ್ಗೊಂಡಿದ್ದರು.
ಐಎಸ್.ಟಿಡಿ:ಇಂಡಿಯನ್ ಸೊಸೈಟಿ ಫಾರ್ ಟ್ರೈನಿಂಗ್ ಅಂಡ್ ಡೆಲಪ್‌ಮೆಂಟ್ ಮೈಸೂರು ಶಾಖೆ ಮತ್ತು ಸಪ್ನಾ ಬುಕ್ ಹೌಸ್ ಸಹಯೋಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಯೋಜಿಸಲಾಗಿತ್ತು. ಐಎಸ್.ಟಿ.ಡಿ ಮೈಸೂರು ವಲಯ ಅಧ್ಯಕ್ಷ ರಾಜೀವ್ .ಪಿ.ಸಾರಥಿ ಮತ್ತು ಅಮಯ್, ಆಯುರ್ವೇದ ಆಸ್ಪತ್ರೆಯ ಸಿಇಒ ಎಂ.ಎಲ್. ನಾಗೇಶ್, ಬುಕ್ ಹೌಸಿನ ನಿರ್ದೇಶಕರು ಪಾಲ್ಗೊಂಡಿದ್ದರು.
ಸುಯೋಗ್ ಆಸ್ಪತ್ರೆ:ರಾಮಕೃಷ್ಣ ನಗರದ ಸುಯೋಗ್ ಆಸ್ಪತ್ರೆ ಮತ್ತು ಸುಯೋಗ್ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸಮೂಹ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಧ್ವಜಾರೋಹಣ ನೆರವೇರಿಸಿದರು. ಡಾ. ಸುಯೋಕಗ್ ಯೋಗಣ್ಣ, ಡಾ. ಸೀಮಾ ಯೋಗಣ್ಣ, ಸುಧಾ ಯೋಗಣ್ಣ, ಡಾ. ರಾಜೇಂದ್ರ ಪ್ರಸಾದ್, ಡಾ. ಯಶಿತಾ ರಾಜ್ಪಾಲ್ಗೊಂಡಿದ್ದರು.
ಅಮರಶಿಲ್ಪಿ ವೇದಿಕೆ:ಮೈಸೂರು ಜಿಲ್ಲಾ ಅಮರಶಿಲ್ಪಿ ವೇದಿಕೆ ವತಿಯಿಂದ ಲಕ್ಷ್ಮೀಕಾಂತನಗರದಲ್ಲಿ ನಡೆದ ಸ್ವತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯೆ ಲಕ್ಷ್ಮೀ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು..
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ವತಿಯಿಂದ ಕುರುಬಾರಹಳ್ಳಿಯ ರಾಯಣ್ಣ ವೃತ್ತದಲ್ಲಿ ರಾಯಣ್ಣನವರ ಜಯಂತ್ಯುತ್ಸವ ಆಚರಿಸಲಾಯಿತು. ಸಂಗೊಳ್ಳಿರಾಯಣ್ಣ ವೃತ್ತದಿಂದ ಕುರುಬರಹಳ್ಳಿಯ ಪ್ರಮುಖ ಬೀದಿಗಳಲ್ಲಿ ರಾಯಣ್ಣನವರ ಮೆರವಣಿಗೆ ನಡೆಸಲಾಯಿತು ಎಂದು ವೇದಿಕೆಯ ಪುನೀತ್ ರಾಯಣ್ಣ ತಿಳಿಸಿದ್ದಾರೆ.
ಶಾರದಾ ವಿಲಾಸ ಶಿಕ್ಷಣ ಸಂಸ್ಥೆ:ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ ಸ್ವಾತಂತ್ರ್ಯೋತ್ಸವದಲ್ಲಿ ಸಂಸ್ಥೆ ಅಧ್ಯಕ್ಷ ಬಿ.ಎಂ. ಸುಬ್ರಾಯ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಪಿಸಿಸಿಎಫ್ ಟಿ.ಎಸ್. ಅಶೋಕ್ ಕುಮಾರ್ ಅತಿಥಿಯಾಗಿದ್ದರು. ಗೌರವ ಕಾರ್ಯದರ್ಶಿ ಎನ್. ಚಂದ್ರಶೇಖರ್ ಇದ್ದರು.
ಟಿಎನ್ ಎನ್ ಆದರ್ಶ ವಿದ್ಯಾರ್ಥಿ ನಿಲಯ:ಎನ್.ಆರ್. ಮೊಹಲ್ಲಾದ ಟಿಎನ್ಎನ್ಆದರ್ಶ ವಿದ್ಯಾರ್ಥಿ ನಿಲಯದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಕೀಲ ಎಂ. ಪ್ರಫುಲ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯದರ್ಶಿ ಎಂ. ಪಾಟೀಲ್, ಖಜಾಂಚಿ ಪುಟ್ಟರಾಜು ಮತ್ತು ನಿಲಯದ ಪಾಲಕ ಬಿ. ಪ್ರಸಾದ್ ಮೊದಲಾದವರು ಇದ್ದರು.