ಗುತ್ತಲ: ದೇಶಕ್ಕೆ ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಬಲಿದಾನ ಮಾಡಿದ ಮಹನೀಯರು ಸದಾ ಸ್ಮರಣೀಯರು. ಸ್ವಾತಂತ್ರ್ಯ ಹೋರಾಟದ ಅರಿವು, ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಕಲ್ಮಠದ ಗುರುಸಿದ್ದ ಸ್ವಾಮೀಜಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದ ಬಳಿಯ ರುದ್ರಮುನಿ ಶಿವಯೋಗೀಶ್ವರ ವೃತ್ತದಲ್ಲಿ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ನಡೆದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಮುಕ್ತಿ ಹೊಂದಿ 80ನೇ ವಸಂತಗಳ ಆಚರಣೆ ಮಾಡುತ್ತಿರುವುದು ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುವಂತ ದಿನವಾಗಿದೆ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಕುಟುಂಬವನ್ನು, ಲೆಕ್ಕಿಸದೇ ಸ್ವಾತಂತ್ರ್ಯಕ್ಕಾಗಿ ಮಡಿದು ನಮಗೆ ಸ್ವಾತಂತ್ರ್ಯ ನೀಡಿರುವ ಹೋರಾಟಗಾರರನ್ನು ಸದಾ ಸ್ಮರಣೆ ಮಾಡುವ ಅವಶ್ಯಕತೆ ಇದೆ. ಸ್ವಾತಂತ್ರ್ಯ ಕ್ಕಾಗಿ ಅನೇಕ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ದೊರೆತಿದ್ದು ಅದನ್ನು ಉಳಿಸಿಕೊಂಡು ಹೋಗುವದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ವೀರರಾಣಿ ಕಿತ್ತೂರ ಚನ್ನಮ್ಮಳ ಬಲಗೈ ಬಂಟ ಕ್ರಾಂತಿವೀರ ಸಂಗೊಳ್ಳಿರಾಯಣ್ಣನ ಜಯಂತಿ ಅಚರಣೆಯೊಂದಿಗೆ ಅಂತಹ ನಾಯಕರ ರಾಷ್ಟ್ರಾಭಿಮಾನದ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಪಿಎಸ್‌ಐ ಪರಶುರಾಮ ಲಮಾಣಿ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ವಿಶ್ವದಲ್ಲಿಯೇ ಏಕೈಕ ರಾಷ್ಟ್ರ ಭಾರತ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಭಾರತ ದೇಶ ವಿಶಿಷ್ಟವಾಗಿದೆ, ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟಿಷರನ್ನು ಭಾರತೀಯ ಕೆಚ್ಚದೆಯ ಹೋರಾಟಗಾರರ ತ್ಯಾಗ, ಹೋರಾಟ, ಸತ್ಯಾಗ್ರಹದ ಫಲ ನಾವು ಸ್ವಾತಂತ್ರ್ಯ ಪಡೆದೆವು, ಅಂದಿನ ಹೋರಾಟಗಾರರಲ್ಲಿ ಜಾತಿ ಭೇದಭಾವವಿಲ್ಲದೇ ಎಲ್ಲರೂ ಒಗ್ಗಟ್ಟಾಗಿದ್ದರು. ಅದರಂತೆ ಪ್ರಸ್ತುತ ದಿನಗಳಲ್ಲಿ ಜಾತೀ, ಮತ, ಪಂಥಗಳನ್ನು ಬಿಟ್ಟು ನಾವೆಲ್ಲರೂ ಒಂದೇ ಭಾರತೀಯರು ಎಂಬ ಭಾವನೆ ಇರಬೇಕು ಎಂದರು

ರುದ್ರಮುನಿ ಶಿವಯೋಗೀಶ್ವರ ವೃತ್ತದಲ್ಲಿ ಅನೇಕ ಶಾಲಾ, ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರ ನಾಯಕರ ಛದ್ಮವೇಷ, ದೇಶಭಕ್ತಿಗೇತೆಗಳಿಗೆ ನೃತ್ಯ ಪ್ರದರ್ಶನ, ಲೇಝೀಂ, ಡಂಬೆಲ್ಸಗಳ ನೃತ್ಯ, ಸ್ವಾತಂತ್ರ್ಯದ ಘೋಷಣೆಗಳು 80ನೇ ಸ್ವಾತಂತ್ರ್ಯೋತ್ಸವದ ಮೆರಗು ಹೆಚ್ಚಿಸಿತು.

ಧ್ವಜಾರೋಹಣದಲ್ಲಿ ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಸಾಲಗೇರಿ, ಸೇಂಟ್‌ಫೌಲ್ ಶಿಕ್ಷಣ ಸಂಸ್ಥೆಯ ತೇಜರಾಜ ಜಾನ್ಮನೆ, ಚೇತನಾ ಆರ್. ಜಾನ್ಮನೆ, ಆರ್.ಕೆ. ಶಿಕ್ಷಣ ಸಂಸ್ಥೆಯ ಡಾ. ಕೆ,ಎಚ್. ನಾಯ್ಕ್, ಡಾ. ಉಷಾರಾಣಿ, ಕೆ.ಎಚ್ ನಾಯ್ಕ, ವರ್ತಕರಾದ ಜೆ.ಎಂ. ಕೂಡಲಮಠ, ಬಸವರಾಜ ಜವಾಯಿ, ರಮೇಶ ಮಠದ, ಲಿಂಗೇಶ ಬೆನ್ನೂರ, ಪಿ.ಎನ್. ಹೇಮಗಿರಿಮಠ, ರಾಜು ಬಡಿಗೇರ, ಶಂಕ್ರಪ್ಪ ಗೌಳಿ, ಹಿಂದು ಜಾಗರಣ ವೇದಿಕೆ ಸದಸ್ಯರಾದ ಮಂಜುನಾಥ ಯರವಿನತಲಿ, ಕುಮಾರ ಚಿಗರಿ, ಗುರುಪ್ರಸಾದ ಸಾಗರ, ನವೀನ ದಾಮೋದರ, ರಾಜು ಚನ್ನದಾಸರ, ರಾಜಶೇಖರ ಕೂಡಲಮಠ, ಮೃತ್ಯುಂಜಯ ರಿತ್ತಿಮಠ, ಡಾ.ಕಿರಣಕುಮಾರ ಬಡಪ್ಪನವರ, ಭಾಷಾಸಾಬ ಮುಜಾವರ, ದಾದಾಪೀರ ಮುಜಾವರ, ವೀರಯ್ಯ ಪ್ರಸಾಧಿಮಠ, ಪ್ರಸನ್ನ ಜಾನ್ಮನೆ, ರಜತ ಶಾಡಂಬಿ ಹಾಗೂ ಶಾಲಾ ಮಕ್ಕಳು, ಶಿಕ್ಷಕರು ಸೇರಿದಂತೆ ಅನೇಕರಿದ್ದರು.