ಮಹನೀಯರ ಹೋರಾಟ, ಪ್ರಾಣ ತ್ಯಾಗ, ಅಹಿಂಸಾ, ಶೌರ್ಯದಿಂದ ಸಿಕ್ಕ ಸ್ವಾತಂತ್ರ್ಯ: ಸಿದ್ದೇಗೌಡ

| Published : Aug 18 2025, 12:00 AM IST

ಮಹನೀಯರ ಹೋರಾಟ, ಪ್ರಾಣ ತ್ಯಾಗ, ಅಹಿಂಸಾ, ಶೌರ್ಯದಿಂದ ಸಿಕ್ಕ ಸ್ವಾತಂತ್ರ್ಯ: ಸಿದ್ದೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸೇವಾ ಮನೋಭಾವದ ಗುರಿ ಹೊಂದಿರುವ ಅಂಚೆ ಇಲಾಖೆಯು ಕೇಂದ್ರ ಸರ್ಕಾರದ ನಂಬಿಕೆಯುಳ್ಳ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಪತ್ರ ವ್ಯವಹಾರಗಳ ನೀಡುವ ಉತ್ತಮ ಸಂಸ್ಥೆಯಾಗಿದೆ. ಮಹಿಳೆಯರು ಮತ್ತು ಹಿರಿಯ ನಾಗರೀಕರಿಗೆ ವಿಶೇಷ ಸೌಲಭ್ಯಗಳಿಗೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಹಾತ್ಮ ಗಾಂಧೀಜಿ ಅವರ ಅಹಿಂಸಾ ತತ್ವ, ಸುಭಾಷ್‌ ಚಂದ್ರಬೋಸ್ ಅವರ ತ್ಯಾಗ ಮತ್ತು ಭಗತ್‌ಸಿಂಗ್‌ ಅವರ ಶೌರ್ಯದಿಂದ ಸ್ವಾತಂತ್ರ್ಯ ಭಾರತ ಉದಯವಾಗಿದೆ ಎಂದು ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಸಿದ್ದೇಗೌಡ ತಿಳಿಸಿದರು.

ಪಟ್ಟಣದ ಉಪ ಅಂಚೆ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಂಡಿರುವ ನಾವು ಅಜ್ಞಾನ, ಅನಾಚಾರಗಳನ್ನು ಹೋಗಲಾಡಿಸಿ ಭಾರತದ ಏಳ್ಗೆಗಾಗಿ ಶ್ರಮಿಸಬೇಕಿದೆ ಎಂದರು.

ಸೇವಾ ಮನೋಭಾವದ ಗುರಿ ಹೊಂದಿರುವ ಅಂಚೆ ಇಲಾಖೆಯು ಕೇಂದ್ರ ಸರ್ಕಾರದ ನಂಬಿಕೆಯುಳ್ಳ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಪತ್ರ ವ್ಯವಹಾರಗಳ ನೀಡುವ ಉತ್ತಮ ಸಂಸ್ಥೆಯಾಗಿದೆ. ಮಹಿಳೆಯರು ಮತ್ತು ಹಿರಿಯ ನಾಗರೀಕರಿಗೆ ವಿಶೇಷ ಸೌಲಭ್ಯಗಳಿಗೆ. ಅಲ್ಲದೆ ಹಲವು ರೀತಿಯ ಜನಪರ ಯೋಜನೆಗಳಿದ್ದು ಗ್ರಾಹಕರು ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿಮಾಡಿದರು.

ಉಪ ವಿಭಾಗೀಯ ಅಂಚೆ ನಿರೀಕ್ಷಕ ಭೀಮಪ್ಪ ಪವಾರ್ ಮಾತನಾಡಿ, ಪ್ರತಿಯೊಬ್ಬರೂ ದೇಶಕ್ಕಾಗಿ ಶ್ರಮಿಸಿ ಪ್ರಾಣತ್ಯಾಗ ಮಾಡಿರುವ ಮಹನೀಯರನ್ನು ಸ್ಮರಿಸುವ ಜೊತೆಗೆ ದೇಶಾಭಿಮಾನ ಮೈಗೂಡಿಸಿಕೊಳ್ಳಬೇಕು ಎಂದರು.

ಕಚೇರಿ ಅಧಿಕಾರಿ ಯೋಗೇಶ್ ಮೋಹನ್‌ಸಿಂಗ್ ಮಾತನಾಡಿದರು. ಇದೇ ವೇಳೆ ಕನ್ನಡಪ್ರಭ ತಾಲೂಕು ವರದಿಗಾರ ಕರಡಹಳ್ಳಿ ಸೀತಾರಾಮು ಅವರನ್ನು ಸನ್ಮಾನಿಸಲಾಯಿತು. ಕಚೇರಿ ಸಿಬ್ಬಂದಿಗಳಾದ ಜೆ.ಶ್ವೇತ, ರಾಹುಲ್‌ಕುಮಾರ್, ಚಂದ್ರಶೇಖರ್, ರಂಗನಾಥ್, ನವೀನ್‌ಕುಮಾರ್, ಜೆ.ಮುತ್ತು, ಸುರೇಶ್, ಗೌರಮ್ಮ, ರಾಜೇಂದ್ರ ಸೇರಿದಂತೆ ಹಲವರು ಇದ್ದರು.

ಪ್ರತಿಭಾಂಜಲಿಯಿಂದ ಸ್ವಾತಂತ್ರ್ಯ ಗೀತೋತ್ಸವ

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯಿಂದ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ವಾತಂತ್ರ್ಯ ಗೀತೋತ್ಸವ ಕಾರ್ಯಕ್ರಮವು ಪ್ರತಿಭಾಂಜಲಿ ಕಚೇರಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಅಲೈನ್ಸ್ ಇಂಟರ್‌ ನ್ಯಾಷನಲ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್‌ನ ಉಪಾಧ್ಯಕ್ಷ ಕೆ.ಟಿ.ಹನುಮಂತು ಗಿಟರ್ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಬ್ರಿಟಿಷರು ಭಾರತವನ್ನು 200 ವರ್ಷಗಳ ಕಾಲ ಆಳಿದರು. ಅವರನ್ನು ದೇಶ ಬಿಟ್ಟು ಓಡಿಸಲು ಸುಮಾರು 90 ವರ್ಷ ಹೋರಾಟ ನಡೆಸಬೇಕಾಯಿತು. ದೇಶ ಸ್ವತಂತ್ರಗೊಳ್ಳಲು ಲಕ್ಷಾಂತರ ಜನರ ತ್ಯಾಗ ಬಲಿದಾನವಾಗಿದೆ ಎಂದರು.

ಸ್ವಾತಂತ್ರ್ಯ ಗೀತೋತ್ಸವದಲ್ಲಿ ವರ್ಷಾ ಹೂಗಾರ್, ವಂದನಾ, ಭಾರತಿ, ಕರಣ್, ಶಶಿಕಲಾ, ಸರಿತಾ, ಕಾವ್ಯಶ್ರೀ, ವಿಶ್ವಾಸ್ ಧನಂಜಯ್ ಸಂತೋಷ್ ಸೇರಿದಂತೆ ಹಲವು ಗಾಯಕರು ಸ್ವಾತಂತ್ರ್ಯ ಗೀತೋತ್ಸವ ಹಾಡನ್ನು ಪ್ರಸ್ತುತಪಡಿಸಿದರು,

ಕಾರ್ಯಕ್ರಮದಲ್ಲಿ ಅಲಯನ್ಸ್ ಚಂದ್ರಶೇಖರ್ ಧರಸಗುಪ್ಪೆ ಧನಂಜಯ್ ಪ್ರತಿಭಾಂಜಲಿ ಡೇವಿಡ್ ಭಾಗವಹಿಸಿದ್ದರು.