ಆಗಾಗ ಹೃದಯ ಪರೀಕ್ಷೆ ಅಗತ್ಯ: ಡಾ.ಗುರುರಾಜ್‌

| Published : Jul 21 2024, 01:16 AM IST

ಆಗಾಗ ಹೃದಯ ಪರೀಕ್ಷೆ ಅಗತ್ಯ: ಡಾ.ಗುರುರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಅತಿಯಾದ ಒತ್ತಡದ ಜೀವನ ಮಧ್ಯೆ ಆರೋಗ್ಯದ ಕಾಳಜಿ ವಹಿಸಲೇಬೇಕು. ಇಲ್ಲದಿದ್ದರೆ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಪತ್ರಿಯೊಬ್ಬರು ಆಗಾಗ ಹೃದಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ದಾವಣಗೆರೆ ಎಸ್.ಎಸ್. ನಾರಾಯಣ ಆಸ್ವತ್ರೆ ಹೃದ್ರೋಗ ತಜ್ಞ ಡಾ.ಗುರುರಾಜ್ ಹೇಳಿದ್ದಾರೆ.

- ಜಗಳೂರು ಆರೋಗ್ಯ ಇಲಾಖೆ ಸಭಾಂಗಣದಲ್ಲಿ ಹೃದಯ ತಪಾಸಣಾ ಶಿಬಿರ- - - ಕನ್ನಡಪ್ರಭ ವಾರ್ತೆ ಜಗಳೂರು

ಅತಿಯಾದ ಒತ್ತಡದ ಜೀವನ ಮಧ್ಯೆ ಆರೋಗ್ಯದ ಕಾಳಜಿ ವಹಿಸಲೇಬೇಕು. ಇಲ್ಲದಿದ್ದರೆ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಪತ್ರಿಯೊಬ್ಬರು ಆಗಾಗ ಹೃದಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ದಾವಣಗೆರೆ ಎಸ್.ಎಸ್. ನಾರಾಯಣ ಆಸ್ವತ್ರೆ ಹೃದ್ರೋಗ ತಜ್ಞ ಡಾ.ಗುರುರಾಜ್ ಹೇಳಿದರು.

ಪಟ್ಟಣದ ಆರೋಗ್ಯ ಇಲಾಖೆ ಸಭಾಂಗಣದಲ್ಲಿ ಶನಿವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಎಸ್.ಎಸ್. ನಾರಾಯಣ ಹೃದಯಾಲಯ ಆಸ್ವತ್ರೆ ದಾವಣಗೆರೆ, ಜಗಳೂರು ಪಟ್ಟಣ ಪಂಚಾಯಿತಿ, ಆರೋಗ್ಯ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಹೃದಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಪೀಳಿಗೆ ಅತಿಯಾದ ಕೊಲೆಸ್ಟ್ರಾಲ್ ಆಹಾರ ಸೇವೆನೆ, ದೈಹಿಕ ದಂಡನೆ ಇಲ್ಲದ ಒತ್ತಡಗಳ ಜೀವನ ನಡೆಸುತ್ತಿದೆ. ಜೊತೆಗೆ ಅತಿಯಾದ ಮದ್ಯಪಾನ, ಧೂಮಪಾನ, ಗುಟ್ಕಾ ಸೇವನೆ ಹೃದಯಕ್ಕೆ ಮಾರಕ. ಹೃದಯ ಕಾಯಿಲೆಗಳಿಂದ ದೂರವಿರಲು ಮಿತಆಹಾರ, ವ್ಯಾಯಾಮ ಯೋಗ ಮತ್ತು ಆರೋಗ್ಯಕರ ಜೀವನ ಮುಖ್ಯ. ಈ ನಿಟ್ಟಿನಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಸಾಮಾಜಿಕ ಜವಾಬ್ದಾರಿಯಿಂದ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಆಯುಷ್‌ ಇಲಾಖೆ ವೈದ್ಯೆ ಡಾ.ಶ್ವೇತ ಮಾತನಾಡಿ, ವ್ಯಕ್ತಿಯ ದೈಹಿಕ, ಮಾನಸಿಕ ಸಮತೋಲನ ಆರೋಗ್ಯಕ್ಕೆ ಯೋಗ ಉತ್ತಮ ಚಿಕಿತ್ಸೆಯಾಗಿದೆ. ಪತ್ರಿನಿತ್ಯ ಕನಿಷ್ಠ ೪೫ ನಿಮಿಷಗಳ ನಡಿಗೆ, ವ್ಯಾಯಾಮ, ಯೋಗ ಮಾಡಬೇಕು. ತಾಜಾ ಹಾಗೂ ಮಿತ ಪೌಷ್ಠಿಕ ಆಹಾರ ಸೇವನೆ ಮಾಡಬೇಕು. ಪ್ರತಿ ತಿಂಗಳು ಇಂತಹ ಶಿಬಿರಗಳು ನಡೆದರೆ ಜನರಿಗೆ ಉತ್ತಮ ಅನುಕೂಲ ಎಂದು ಹೇಳಿದರು.

70ಕ್ಕೂ ಅಧಿಕ ಜನರು ಶಿಬಿರದಲ್ಲಿ ಭಾಗವಹಿಸಿ, ಆರೋಗ್ಯ ತಪಾಸಣೆಗೆ ಒಳಗಾದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ತಾಲೂಕು ಆರೋಗ್ಯ ಅಧಿಕಾರಿ ಡಾ.ವಿಶ್ವನಾಥ್, ಪೌರಕಾರ್ಮಿಕರ ಸಂಘ ಅಧ್ಯಕ್ಷ ಚಿನ್ನಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ನಾಯ್ಕ್, ಗ್ರಾಪಂ ಮಾಜಿ ಉಪಾಧ್ಯಕ್ಷರು ಮರೇನಹಳ್ಳಿ ಎಂ.ಎಸ್. ನಜೀರ್ ಅಹಮದ್, ಆರೋಗ್ಯ ನಿರೀಕ್ಷಕ ಪ್ರಶಾಂತ್, ಪತ್ರಕರ್ತರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಲೋಕೇಶ್, ಪದಾಧಿಕಾರಿಗಳಾದ ಜಗದೀಶ್, ಸೋಮನಗೌಡ, ಜೆ.ಒ. ರವಿಕುಮಾರ್, ಒ.ಮಂಜಣ್ಣ, ಎಂ.ಸಿ. ಬಸವರಾಜ್, ಸಯೀದ್ ವಾಸಿಂ, ಶಿವಲಿಂಗಪ್ಪ, ಎ.ಎಂ. ಮಂಜಯ್ಯ, ಮಹಾಂತೇಶ್ ಬ್ರಮ್ಮ, ಸಿದ್ದಮ್ಮನಹಳ್ಳಿ ಬಸವರಾಜ್, ಧನ್ಯಕುಮಾರ್, ಉಜ್ಜಿನಪ್ಪ ಇತರರು ಉಪಸ್ಥಿತರಿದ್ದರು.

- - -

ಬಾಕ್ಸ್‌ * ಕ್ಯಾನ್ಸರ್‌, ಕಾನೂನು ಅರಿವು ಕಾರ್ಯಕ್ರಮ ಜಗಳೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್. ಚಿದಾನಂದ್ ಮಾತನಾಡಿ, ಪತ್ರಕರ್ತರು ಸಹ ನಿತ್ಯ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಿಮ್ಮನ್ನೆ ನಂಬಿಕೊಂಡು ಕುಟುಂಬಗಳು ಇವೆ. ಯಾವುದೇ ದುಶ್ಚಟ ಇದ್ದಲ್ಲಿ ನಿಲ್ಲಿಸಿದರೆ ಅನಾಹುತಗಳ ತಪ್ಪಿಸಬಹುದು ಎಂದರು.

ಪತ್ರಕರ್ತರ ಸಂಘದ ಮನವಿ ಮೇರೆಗೆ ಎಸ್.ಎಸ್. ನಾರಾಯಣ ಆಸ್ವತ್ರೆ ವೈದ್ಯರು ಸ್ಪಂದಿಸಿ, ಉಚಿತ ಹೃದಯ ತಪಾಸಣೆ ಶಿಬಿರ ನಡೆಸಿದರು. ಅವರ ಜೊತೆಗೆ ಪಟ್ಟಣ ಪಂಚಾಯಿತಿ, ಆರೋಗ್ಯ ಇಲಾಖೆ, ಪತ್ರಕರ್ತರ ಸಂಘದ ಸದಸ್ಯರು ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಸಂಬಂಧಿತ ಆರೋಗ್ಯ ಶಿಬಿರ ಹಾಗೂ ಭಾರತೀಯ ದಂಡ ಸಹಿತೆ ನೂತನ ಕಾನೂನುಗಳ ಬಗ್ಗೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.

- - - -20ಜೆ.ಎಲ್.ಆರ್1:

ಜಗಳೂರಿನಲ್ಲಿ ಹೃದಯ ತಪಾಸಣಾ ಶಿಬಿರವನ್ನು ದಾವಣಗೆರೆ ಎಸ್.ಎಸ್. ನಾರಾಯಣ ಆಸ್ವತ್ರೆ ಹೃದ್ರೋಗ ತಜ್ಞ ಡಾ.ಗುರುರಾಜ್ ಉದ್ಘಾಟಿಸಿದರು.