ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ: ಪೊಲೀಸ್ ತಂಡಕ್ಕೆ ಜಯ

| Published : Nov 28 2024, 12:35 AM IST

ಸಾರಾಂಶ

ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪತ್ರಕರ್ತರು ನೀಡಿದ ಸವಾಲನ್ನು ಬೆನ್ನತ್ತಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದ ತಂಡ ಸುಲಭವಾಗಿ ವಿಜಯಶಾಲಿಯಾಗಿ ಹೊರಹೊಮ್ಮಿತು. ಗುರಿ ತಲುಪಲು ಆರಂಭಿಕರಾಗಿ ಕಣಕ್ಕಿಳಿದ ಎಸ್ಪಿ ಪಂದ್ಯ ಮುಗಿಯುವವರೆಗೂ ಬ್ಯಾಟ್ ಬೀಸಿ ಗೆಲುವಿನ ನಗೆ ಬೀರಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ಪೊಲೀಸ್ ಕ್ರೀಡಾಕೂಟದ ಅಂಗವಾಗಿ ನಗರದ ಪಿಇಟಿ ಕ್ರೀಡಾಂಗಣದಲ್ಲಿ ಪೊಲೀಸರು ಮತ್ತು ಪತ್ರಕರ್ತರ ನಡುವೆ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಪಂದ್ಯಾವಳಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪತ್ರಕರ್ತರು ನೀಡಿದ ಸವಾಲನ್ನು ಬೆನ್ನತ್ತಿದ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರ ನೇತೃತ್ವದ ತಂಡ ಸುಲಭವಾಗಿ ವಿಜಯಶಾಲಿಯಾಗಿ ಹೊರಹೊಮ್ಮಿತು. ಗುರಿ ತಲುಪಲು ಆರಂಭಿಕರಾಗಿ ಕಣಕ್ಕಿಳಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಪಂದ್ಯ ಮುಗಿಯುವವರೆಗೂ ಬ್ಯಾಟ್ ಬೀಸಿ ಗೆಲುವಿನ ನಗೆ ಬೀರಿದರು.

ಪಂದ್ಯದಲ್ಲಿ ಅತಿಹೆಚ್ಚು ರನ್ ಗಳಿಸಿದ ವರದಿಗಾರ ನಂದನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಗಂಗಾಧರಸ್ವಾಮಿ, ತಿಮ್ಮಯ್ಯ, ಡಿವೈಎಸ್ಪಿ ರಮೇಶ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಉಭಯ ತಂಡಗಳನ್ನು ಪ್ರೋತ್ಸಾಹಿಸಿದರು.

ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗೆ ಧನುಶ್ರೀ ಆಯ್ಕೆ

ಮಂಡ್ಯ: ಮಂಡ್ಯ ಅರ್ಕೇಶ್ವರನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಧನುಶ್ರೀ ಚಿಕ್ಕೋಡಿ ಜಿಲ್ಲೆಯಲ್ಲಿ ನಡೆದ 2024-25ನೇ ಸಾಲಿನ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನದ ಮೂಲಕ ಬಾಲಕಿಯರ ವಿಭಾಗದಿಂದ ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಜಿಲ್ಲೆಯ ಸಂಸ್ಕಾರ ಕಬಡ್ಡಿ ಅಕಾಡೆಮಿ ವಿದ್ಯಾರ್ಥಿನಿ ಧನುಶ್ರೀ ಅವರನ್ನು ಅಕಾಡೆಮಿ ತರಬೇತುದಾರ ಚಂದ್ರಶೇಖರ್ ಬೇವಿನಹಳ್ಳಿ ಅಭಿನಂದಿಸಿದ್ದಾರೆ.