ಸೂರಿಂಜೆಯಲ್ಲಿ ಸ್ನೇಹ ಸಮ್ಮಿಲನ ಕೂಟ

| Published : Apr 21 2025, 12:48 AM IST

ಸಾರಾಂಶ

ಸುರತ್ಕಲ್ ಸ್ಪೋರ್ಟ್ಸ್‌ ಮತ್ತು ಕಲ್ಚರಲ್ ಕ್ಲಬ್ ನ ಆಶ್ರಯದಲ್ಲಿ ಸುರತ್ಕಲ್ ನಲ್ಲಿ ನಡೆದ ಲೆಜಂಡ್ಸ್ ಕ್ರಿಕೆಟ್ ಲೀಗ್ ಸೀಸನ್ 4 ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟದ ಯಶಸ್ಸಿನ ಹಿನ್ನಲೆಯಲ್ಲಿ ಸೂರಿಂಜೆಯಲ್ಲಿ ಮನೋಹರ್ ಶೆಟ್ಟಿಯವರ ಮನೆಯಲ್ಲಿ ಸ್ನೇಹ ಸಮ್ಮಿಲನ ಕೂಟ ನಡೆಯಿತು.

ಕನ್ನಡಪ್ರಭವಾರ್ತೆ ಮೂಲ್ಕಿ

ಕ್ರೀಡೆಯಿಂದ ಮನಸ್ಸು ಹಗುರಗೊಳ್ಳುವ ಜೊತೆಗೆ ಕ್ರೀಡೆ ವ್ಯಾಯಾಮಕ್ಕೂ ಸಹಕಾರಿಯಾಗುತ್ತದೆ ಎಂದು ವಿರಾಜಪೇಟೆ ಡಿವೈಎಸ್ ಪಿ ಮಹೇಶ್ ಕುಮಾರ್ ಹೇಳಿದರು.

ಸುರತ್ಕಲ್ ಸ್ಪೋರ್ಟ್ಸ್‌ ಮತ್ತು ಕಲ್ಚರಲ್ ಕ್ಲಬ್ ನ ಆಶ್ರಯದಲ್ಲಿ ಸುರತ್ಕಲ್ ನಲ್ಲಿ ನಡೆದ ಲೆಜಂಡ್ಸ್ ಕ್ರಿಕೆಟ್ ಲೀಗ್ ಸೀಸನ್ 4 ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟದ ಯಶಸ್ಸಿನ ಹಿನ್ನಲೆಯಲ್ಲಿ ಸೂರಿಂಜೆಯಲ್ಲಿ ಮನೋಹರ್ ಶೆಟ್ಟಿಯವರ ಮನೆಯಲ್ಲಿ ನಡೆದ ಸ್ನೇಹ ಸಮ್ಮಿಲನ ಕೂಟದಲ್ಲಿ ಅವರು ಮಾತನಾಡಿದರು.

ಮುಂದಿನ‌ ದಿನಗಳಲ್ಲಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಮಹಿಳಾ ವಿಭಾಗವನ್ನೂ ರಚಿಸಬೇಕು ಎಂದು ಹೇಳಿದರು.

ಸ್ಪೋರ್ಟ್ಸ್‌ ಕ್ಲಬ್ ನ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸಂಚಾಲಕ ಮನೋಹರ ಶೆಟ್ಟಿ ಸೂರಿಂಜೆ, ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಕಾರ್ಯದರ್ಶಿ ಕಿರಣ್ ಅಚಾರ್ಯ ಸುರತ್ಕಲ್, ನಾಗರಾಜ್ ಕಡಂಬೋಡಿ, ಕೇಸರಿ ಮನೋಹರ ಶೆಟ್ಟಿ, ಸುಧಾಕರ ಪೂಂಜ, ಪುಷ್ಪರಾಜ್ ಶೆಟ್ಟಿ ಮಧ್ಯ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ ಮತ್ತಿತರರು ಉಪಸ್ಥಿತರಿದ್ದರು.

ಸುರತ್ಕಲ್ ಸ್ಪೋರ್ಟ್ಸ್‌ ಮತ್ತು ಕಲ್ಚರಲ್ ಕ್ಲಬ್ ನ ಸದಸ್ಯರು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಕಿರಣ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.