ಎಂಎಸ್‌ಆರ್‌ಎಸ್‌ ಕಾಲೇಜಿನ ೧೯೯೩ರ ಬಿ.ಕಾಂ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

| Published : May 15 2025, 01:36 AM IST

ಎಂಎಸ್‌ಆರ್‌ಎಸ್‌ ಕಾಲೇಜಿನ ೧೯೯೩ರ ಬಿ.ಕಾಂ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ
Share this Article
  • FB
  • TW
  • Linkdin
  • Email

ಸಾರಾಂಶ

ಶಿರ್ವದ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನ ೧೯೯೩ನೇ ಶೈಕ್ಷಣಿಕ ವರ್ಷದ ಬಿ.ಕಾಂ ಹಳೆವಿದ್ಯಾರ್ಥಿಗಳ ಸ್ನೇಹಸಮ್ಮಿಲನ ಕಾರ್ಯಕ್ರಮ ಕಾಲೇಜಿನಲ್ಲಿ ಜರುಗಿತು. ಸಂದರ್ಭದ ಸವಿನೆನಪಿಗೆ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಬಳಕೆಗಾಗಿ ಹಳೆವಿದ್ಯಾರ್ಥಿಗಳು ಕಂಪ್ಯೂಟರ್ ಪ್ರೊಜೆಕ್ಟರ್‌ನ್ನು ಕೊಡುಗೆಯಾಗಿ ನೀಡಿದರು.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಶಿರ್ವದ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನ ೧೯೯೩ನೇ ಶೈಕ್ಷಣಿಕ ವರ್ಷದ ಬಿ.ಕಾಂ ಹಳೆವಿದ್ಯಾರ್ಥಿಗಳ ಸ್ನೇಹಸಮ್ಮಿಲನ ಕಾರ್ಯಕ್ರಮ ಕಾಲೇಜಿನಲ್ಲಿ ಜರುಗಿತು.

ಈ ಅರ್ಥಪೂರ್ಣ ಸಂದರ್ಭದ ಸವಿನೆನಪಿಗೆ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಬಳಕೆಗಾಗಿ ಹಳೆವಿದ್ಯಾರ್ಥಿಗಳು ಕಂಪ್ಯೂಟರ್ ಪ್ರೊಜೆಕ್ಟರ್‌ನ್ನು ಕೊಡುಗೆಯಾಗಿ ನೀಡಿದರು.ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಮಿಥುನ್ ಚಕ್ರವರ್ತಿ ವಹಿಸಿಕೊಂಡಿದ್ದರು. ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಅಗಲಿದ ಪ್ರಾಧ್ಯಾಪಕರ ಚೇತನಕ್ಕೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪ್ರಾಧ್ಯಾಪಕರನ್ನು ಹಾಗೂ ಶಿಕ್ಷಕೇತರ ವೃಂದದವರನ್ನು ಸನ್ಮಾನಿಸಲಾಯಿತು. ಪ್ರಾಧ್ಯಾಪಕರಾದ ಡಾ.ಸುಧಾಕರ ಮಾರ್ಲ, ಪ್ರೊ. ಸುಬ್ರಮಣ್ಯ ಭಟ್, ಪ್ರೊ. ಶಾರದ, ಪ್ರೊ. ರಘುರಾಮ ಶೆಟ್ಟಿ, ಪ್ರೊ.ಟಿ.ಮುರುಗೇಶಿ ಹಾಗೂ ಪ್ರೊ. ಪುರುಷೋತ್ತಮ ಬಲ್ಯಾಯ, ಹಳೆ ವಿದ್ಯಾರ್ಥಿಗಳ ಕೃತಜ್ಞತಾ ಭಾವವನ್ನು ವ್ಯಕ್ತಪಡಿಸುವ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣ ಮತ್ತು ಸುದೀರ್ಘ ಅಧ್ಯಾಪನ ವೃತ್ತಿಗೆ ಸಾರ್ಥಕ್ಯವನ್ನು ತಂದುಕೊಡುತ್ತದೆ ಎಂದು ಶುಭ ಹಾರೈಸಿ, ಇಂತಹ ಕಾರ್ಯಕ್ರಮದ ಆಯೋಜನೆಯನ್ನು ಮಾಡಿದ ಹಳೆ ವಿದ್ಯಾರ್ಥಿ ಮನೋಹರ್ ಶೆಟ್ಟಿ ಮುಂಬೈ ಇವರ ಪ್ರಯತ್ನವನ್ನು ಶ್ಲಾಘಿಸಿದರು.ಹಳೆವಿದ್ಯಾರ್ಥಿಗಳಾದ ಜಗದೀಶ್ ಶೆಟ್ಟಿ, ಉದಯ ಶೆಟ್ಟಿ, ಸತೀಶ್ ಶೆಟ್ಟಿ, ರಫೀಕ್ ಎ.ಆರ್. ಅನಿಸಿಕೆ ಹಂಚಿಕೊಂಡರು. ಸಂಗೀತಾ ಶೆಟ್ಟಿ, ಉಷಾ ಪ್ರಾರ್ಥಿಸಿದರು. ರಮಾನಂದ ಕಾಮತ್ ಸ್ವಾಗತಿಸಿದರು. ದಿವಾಕರ ಪಾಟ್ಕರ್ ನಿರೂಪಿಸಿದರು. ಮನೋಹರ್ ಶೆಟ್ಟಿ ವಂದಿಸಿದರು.