ಸಾರಾಂಶ
ಬಾಗಲಕೋಟೆ: ನಗರದ ಹೇಮ-ವೇಮ ಸಂಸ್ಥೆಯ ಸ್ನೇಹಕೂಟ ಕಾರ್ಯಕ್ರಮ ಜರುಗಿತು. ಶಾಸಕ ಎಚ್.ವೈ. ಮೇಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ,, ಇಂದು ಪರಸ್ಪರರಲ್ಲಿ ಪ್ರೀತಿ, ವಿಶ್ವಾಸಗಳು ಮಾಯಾವಾಗುತ್ತಿದ್ದು, ಸ್ನೇಹಕೂಟಗಳು ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ ಹೆಚ್ಚಿಸಿ ಬಾಂಧವ್ಯ ಗಟ್ಟಿಗೊಳಿಸುತ್ತವೆ ಎಂದರು.ಸೇವೆಯಿಂದ ನಿವೃತ್ತರಾದ ಸಿ.ಎಚ್. ಕಮಕೇರಿ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸ್ನೇಹಕೂಟಗಳು ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ ಹೆಚ್ಚಿಸಿ ಬಾಂಧವ್ಯ ಗಟ್ಟಿಗೊಳಿಸುತ್ತವೆ ಎಂದು ಶಾಸಕ ಎಚ್.ವೈ.ಮೇಟಿ ಹೇಳಿದ್ದಾರೆ.ಭಾನುವಾರ ಜರುಗಿದ ನಗರದ ಹೇಮ-ವೇಮ ಸಂಸ್ಥೆಯ ಸ್ನೇಹಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಇಂದು ಪರಸ್ಪರರಲ್ಲಿ ಪ್ರೀತಿ, ವಿಶ್ವಾಸಗಳು ಮಾಯಾವಾಗುತ್ತಿದ್ದು, ಸಾಮಾಜಿಕ ಬಾಂಧವ್ಯ ಕ್ಷೀಣಿಸುತ್ತಿದೆ ಎಂದರು.
ಸ್ನೇಹಕೂಟಗಳು ಆಗಾಗ ನಡೆಯುತ್ತಿದ್ದರೆ, ಎಲ್ಲರೂ ಒಂದೆಡೆ ಸೇರಿ ಕುಶಲೋಪರಿ ಹಂಚಿಕೊಳ್ಳಲು ಸಹಕಾರಿಯಾಗುತ್ತದೆ. ಇರುವ ಪ್ರೀತಿ, ವಿಶ್ವಾಸ, ಬಾಂಧವ್ಯಗಳು ಗಟ್ಟಿಗೊಳ್ಳುತ್ತವೆ ಎಂದ ಮೇಟಿ, ಹೇಮ-ವೇಮ ಸಂಸ್ಥೆಯ ಸಹಕಾರಕ್ಕೆ ಕೃತಜ್ಞನಾಗಿದ್ದು, ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಸಹಕರಿಸುವುದಾಗಿ ಹೇಳಿದರು.ಬೀಳಗಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಸಾಮಾಜಿಕ ಹೊಣೆಗಾರಿಕೆ ಅರಿತು ಎಲ್ಲರೂ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ಮಾಡಬೇಕಾದ ಅಗತ್ಯತೆಯಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಅವರನ್ನು ನಾಡಿನ ಆಸ್ತಿಯನ್ನಾಗಿ ಮಾಡಬೇಕಿದೆ ಎಂದರು.
ಸೇವೆಯಿಂದ ನಿವೃತ್ತರಾದ ಸಿ.ಎಚ್. ಕಮಕೇರಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಜಿ.ಆರ್. ಹಲಗಲಿ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ಎಲ್ಲರ ಸಹಕಾರ ಇರಲಿ ಎಂದರು. ಸಂಸ್ಥೆಯ ಅಧ್ಯಕ್ಷ ಆರ್.ಎಲ್. ಕಟಗೇರಿ, ಡಾ.ಸಿ.ಎಸ್. ಪಾಟೀಲ, ನಾರಾಯಣ ಹಾದಿಮನಿ, ಡಾ.ವ್ಹಿ.ಆರ್. ಸೋರಗಾಂವಿ, ವೆಂಕಟೇಶ ಕೇರಿ, ಎಸ್.ಎಸ್. ಹಳ್ಳೂರ, ಶ್ರೀಕಾಂತ ಪಾಟೀಲ, ಎಸ್.ಕೆ. ಯಡಹಳ್ಳಿ, ಬಿ.ಸಿ. ಕರಿಸೈಯಪ್ಪನವರ, ಬಿ.ಎಲ್. ಮಂಟೂರ ವೇದಿಕೆಯಲ್ಲಿದ್ದರು.