ತಾಲೂಕಿನ ಬೆಂಗಳೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸ್ಥಾಪನೆಗೊಂಡು 2 ವರ್ಷ ಕಳೆದಿದ್ದು, ಚನ್ನಗಿರಿ ತಾಲೂಕಿನ ಜನರು ವಿವಿಧ ಕೆಲಸಗಳನ್ನು ಅರಸಿ ಬೆಂಗಳೂರಿನಲ್ಲಿ ನೆಲೆಸಿರುವವರು ಸಂಘಟನೆಗೊಂಡು ಚನ್ನಗಿರಿ ತಾಲೂಕಿನಿಂದ ಉದ್ಯೋಗಗಳನ್ನು ಅರಸಿ ಮತ್ತು ಶಿಕ್ಷಣಕ್ಕಾಗಿ ಬರುವಂತವರಿಗೆ ಶಿಕ್ಷಣ, ಉದ್ಯೋಗಗಳನ್ನು ಕೊಡಿಸುವಂತಹ ಕೆಲಸ ಮಾಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎ.ಸಿ. ಚಿನ್ಮಯಾನಂದ ಚನ್ನಗಿರಿಯಲ್ಲಿ ಹೇಳಿದ್ದಾರೆ.

ಚನ್ನಗಿರಿ: ತಾಲೂಕಿನ ಬೆಂಗಳೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸ್ಥಾಪನೆಗೊಂಡು 2 ವರ್ಷ ಕಳೆದಿದ್ದು, ಚನ್ನಗಿರಿ ತಾಲೂಕಿನ ಜನರು ವಿವಿಧ ಕೆಲಸಗಳನ್ನು ಅರಸಿ ಬೆಂಗಳೂರಿನಲ್ಲಿ ನೆಲೆಸಿರುವವರು ಸಂಘಟನೆಗೊಂಡು ಚನ್ನಗಿರಿ ತಾಲೂಕಿನಿಂದ ಉದ್ಯೋಗಗಳನ್ನು ಅರಸಿ ಮತ್ತು ಶಿಕ್ಷಣಕ್ಕಾಗಿ ಬರುವಂತವರಿಗೆ ಶಿಕ್ಷಣ, ಉದ್ಯೋಗಗಳನ್ನು ಕೊಡಿಸುವಂತಹ ಕೆಲಸ ಮಾಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎ.ಸಿ. ಚಿನ್ಮಯಾನಂದ ಹೇಳಿದರು.

ಮಂಗಳವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಚನ್ನಗಿರಿ ತಾಲೂಕಿನ ಸುಮಾರು 25 ಸಾವಿರಕ್ಕೂ ಅಧಿಕ ಜನರು ವಾಸವಿದ್ದಾರೆ. ಸುಮಾರು 5 ಸಾವಿರ ಕುಟುಂಬಗಳಿದ್ದು, ಪ್ರಸ್ತುತ 500 ಜನರ ಸದಸ್ಯರನ್ನು ನೋಂದಣಿ ಮಾಡಿಸಲಾಗಿದೆ ಎಂದರು.

ಮುಂಬರುವ ಜ.11ರಂದು ಭಾನುವಾರ ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ತಾಲೂಕಿನ ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಚಿನ್ಮಯಾನಂದ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ನಿರ್ದೇಶಕ ದಿವಾಕರ, ಶಾಸಕ ಬಸವರಾಜ ವಿ. ಶಿವಗಂಗಾ, ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ, ವಿ.ಪ. ಸದಸ್ಯ ಡಾ.ಧನಂಜಯ ಸರ್ಜಿ, ಜೀವವೈವಿಧ್ಯ ನಿಗಮ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ್, ತುಮ್ ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ದಾವಣಗೆರೆ ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ತಾಲೂಕಿನ 30 ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಮಂಜುನಾಥ್, ಧನ್ಯಕುಮಾರ್, ಪ್ರಮೋದ್ ಹಾಜರಿದ್ದರು.

- - -

-23ಕೆಸಿಎನ್‌ಜಿ1: