ಸೇವಾ ಸಂಸ್ಥೆಗಳಿಗೆ ಸ್ನೇಹ-ಸೇವೆಯೇ ಗುರಿ: ಡಾ.ನಾಗರಾಜು

| Published : Apr 28 2024, 01:17 AM IST

ಸಾರಾಂಶ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇವಾ ಸಂಸ್ಥೆಗಳಾದ ರೆಡ್‌ಕ್ರಾಸ್, ರೋಟರಿ, ಅಲಯನ್ಸ್, ಲಯನ್ಸ್ ಸೇರಿ ಹಲವು ಸೇವಾಸಂಸ್ಥೆಗಳಿವೆ, ಇವು ಸ್ನೇಹ-ಸೇವೆ ಧ್ಯೇಯದಿಂದ ನೂರಾರು ವರ್ಷಗಳ ಕಾಲ ಬದುಕಿ ಬಾಳುತ್ತಿವೆ.

ಅಲಯನ್ಸ್ ಸಂಸ್ಥೆಗಳ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧನೆ । ಸೇವಾ ಚಟುವಟಿಕೆಗಳ ಕಾರ್ಯಕ್ರಮಕ್ಕೆ ಚಾಲನೆಕನ್ನಡಪ್ರಭ ವಾರ್ತೆ ಮಂಡ್ಯ

ಜಗತ್ತಿನಲ್ಲಿ ಸೇವಾ ಸಂಸ್ಥೆಗಳು ಸ್ನೇಹ-ಸೇವೆ ಮಾಡುವ ಧ್ಯೇಯ ಹೊಂದಿರುವುದರಿಂದ ನೂರಾರು ವರ್ಷ ಬದುಕಿ, ಬೆಳೆಯುತ್ತಿವೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜು ವಿ.ಭೈರಿ ಹೇಳಿದರು.ನಗರದ ಕರ್ನಾಟಕ ಸಂಘದ ಕೆ.ವಿ.ಎಸ್ ಭವನದಲ್ಲಿ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಆಫ್ ಅಸೋಸಿಯೇಷನ್ ಜಿಲ್ಲೆ ೨೬೮ ಎಸ್ ಮಂಡ್ಯ ಆಯೋಜಿಸಿದ್ದ ಮಂಡ್ಯ ಅಲಯನ್ಸ್ ಸಂಸ್ಥೆಗಳ ೨೦೨೪-೨೫ ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧನೆ ಮತ್ತು ಹೊಸ ಸಂಸ್ಥೆಗಳ ಉದ್ಘಾಟನೆ ಹಾಗೂ ಸೇವಾ ಚಟುವಟಿಕೆಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇವಾ ಸಂಸ್ಥೆಗಳಾದ ರೆಡ್‌ಕ್ರಾಸ್, ರೋಟರಿ, ಅಲಯನ್ಸ್, ಲಯನ್ಸ್ ಸೇರಿ ಹಲವು ಸೇವಾಸಂಸ್ಥೆಗಳಿವೆ, ಇವು ಸ್ನೇಹ-ಸೇವೆ ಧ್ಯೇಯದಿಂದ ನೂರಾರು ವರ್ಷಗಳ ಕಾಲ ಬದುಕಿ ಬಾಳುತ್ತಿವೆ ಎಂದು ನುಡಿದರು.ಅಲಯನ್ಸ್ ಸಂಸ್ಥೆ ಪ್ರಾರಂಭ ಮಾಡಿದ್ದೇ ಸ್ನೇಹ ಮತ್ತು ಸೇವಾಕಾರ್ಯಕ್ಕಾಗಿ. ಇಲ್ಲಿ ಚುನಾವಣೆ ಮಧ್ಯ ಬರಬಾರದು, ರಾಜಕೀಯ ಬೆರೆಯಬಾರದು. ನಮ್ಮ ಹಣದಿಂದ ಸೇವಾಕಾರ್ಯ ಮಾಡಿ ಸಮಾಜಕ್ಕೆ ಸೇವೆ ಸಲ್ಲಿಸುವುದು ತೃಪ್ತಿಗಾಗಿ, ಆತ್ಮಸಂತೋಷಕ್ಕಾಗಿ ಎಂದು ಹೇಳಿದರು.ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು ಮಾತನಾಡಿ, ಮುಂದಿನ ದಿನಗಳಲ್ಲಿ ಅಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಉತ್ತಮ ಸೇವಾಕಾರ್ಯ ಮಾಡಿ, ತಮ್ಮ ಹುಟ್ಟುಹಬ್ಬ, ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಗಳನ್ನು ಆಚರಿಸಿ, ಪರಿಸರ, ಆರೋಗ್ಯ ಸೇವೆಗೆ ಹೆಚ್ಚು ಮಹತ್ವ ನೀಡುವಂತೆ ತಿಳಿಸಿದರು.ವಿವಿಧ ಸೇವಾ ಕಾರ್ಯಗಳಿಗೆ ಚಾಲನೆ ನೀಡಲಾಯಿತು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಬಡ ವಿದ್ಯಾರ್ಥಿಗಳಿಗೆ ಮತ್ತು ವಿಕಲಚೇತನರಿಗೆ ಆರ್ಥಿಕ ನೆರವು ನೀಡಲಾಯಿತು.ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಮಾಜಿ ನಿರ್ದೇಶಕ ಜಿ.ಪಿ.ದಿವಾಕರ್, ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಜಂತಾ ರಂಗಸ್ವಾಮಿ, ಕೆ.ಮುನಿಯಪ್ಪ, ೧ನೇ ಉಪ ರಾಜ್ಯಪಾಲ ಎಚ್.ಮಾದೇಗೌಡ, ೨ನೇ ಉಪ ರಾಜ್ಯಪಾಲ ಕೆ.ಆರ್.ಶಶಿಧರ ಈಚಗೆರೆ, ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ.ಎಸ್ ಚಂದ್ರಶೇಖರ್, ಜಿಲ್ಲಾ ಸಂಪುಟ ಖಜಂಚಿ ಟಿ.ಎನ್.ರಕ್ಷಿತ್ ರಾಜ್, ಪಿಆರ್‌ಒ ಅಪ್ಪಾಜಿ, ಜಿಲ್ಲಾ ರಾಯಭಾರಿ ಎಸ್.ಜೆ.ಮಂಜುನಾಥ್, ಪಿಎಸ್‌ಟಿ ಫಾರಂ ಚೇರ್ಮನ್ ಡಾ.ವೈ.ಎಚ್.ರತ್ನಮ್ಮ, ಪ್ರಾಂತೀಯ ಅಧ್ಯಕ್ಷ ಜಲಜಾಕ್ಷಿ, ವಲಯ ಅಧ್ಯಕ್ಷ ಆರ್.ಮಹೇಶ್, ಎಂ.ಲೋಕೇಶ್, ಮಹಾಲಕ್ಷ್ಮೀ ಇತರರಿದ್ದರು.------------------------೨೭ಕೆಎಂಎನ್‌ಡಿ-೧ಮಂಡ್ಯದ ಕರ್ನಾಟಕ ಸಂಘದ ಕೆ.ವಿ.ಎಸ್ ಭವನದಲ್ಲಿ ಮಂಡ್ಯ ಅಲಯನ್ಸ್ ಸಂಸ್ಥೆಗಳ ೨೦೨೪-೨೫ ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನಡೆಯಿತು.