ಸಾರಾಂಶ
ಶರಣ ಸಂಸ್ಕ್ರತಿ ಉತ್ಸವ ಗಡಿನಾಡು ನುಡಿ ಹಬ್ಬಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾಹಿತಿ ನೀಡಿದರು.
ಅಥಣಿ: ಪಟ್ಟಣದ ಮೋಟಗಿಮಠದ ಲಿಂ.ಚನ್ನಬಸವ ಶಿವಯೋಗಿಗಳ 99ನೇ ಸ್ಮರಣೋತ್ಸವದ ಅಂಗವಾಗಿ ಶರಣ ಸಂಸ್ಕ್ರತಿ ಉತ್ಸವ ಗಡಿನಾಡು ನುಡಿ ಹಬ್ಬವನ್ನು ಜ.23 ರಿಂದ 25 ರವರೆಗೆ ಆಚರಿಸಲಾಗುವುದು ಎಂದು ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ನುಡಿದರು.
ಶರಣ ಸಂಸ್ಕ್ರತಿ ಉತ್ಸವ ಗಡಿನಾಡು ನುಡಿ ಹಬ್ಬಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇದೇ ಸಮಯದಲ್ಲಿ ಭಾವೈಕ್ಯತೆಯ ಬೆಳದಿಂಗಳ ಇನ್ನೂರರ ಸಂಭ್ರಮವನ್ನು ಮತ್ತು ಸುಕುಮಾರ ದರ್ಶನ ಪ್ರವಚನ ಕಾರ್ಯಕ್ರಮವನ್ನು ಜ.17 ರಂದು ಸಂಜೆ 6 ಗಂಟೆ ಆರಂಭ ಮಾಡಲಾಗುವುದು. ಜ.17 ರಿಂದ 23 ರವರೆಗೆ ಪ್ರವಚಣ ನುಡಿಯನ್ನು ಹಂದಿಗುಂದದ ಶಿವಾನಂದ ಮಹಾಸ್ವಾಮೀಜಿಯವರು ನಡೆಸಿಕೊಡುವರು. ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನಮಠದ ಚಂದ್ರಶೇಖರ ಸ್ವಾಮೀಜಿ ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.ಈ ಸಮಯದಲ್ಲಿ ಎಸ್.ಕೆ.ಬುಟಾಳೆ, ಮುರುಗೇಪ್ಪ ತೋದಲಬಾಗಿ, ಪ್ರಕಾಶ ಪಾಟೀಲ, ಅರುಣ ಯಲಗುದ್ರಿ, ಕೆ.ಎ.ವನಜೋಳ, ಸಂಜು ತೆಲಸಂಗ, ಶಿವುಕುಮಾರ ತೆಲಸಂಗ, ವಿಜಯ ನೇಮಗೌಡರ, ಡಾ.ಮಾಹಚಿತೇಶ ಉಕ್ಕಲಿ ಮುಂತಾದವರು ಮಾತನಾಡಿದರು.