ಕನ್ನಡಪ್ರಭ ವಾರ್ತೆ, ತರೀಕೆರೆ
ತ್ರಿಪದಿ ಕವಿ ಸರ್ವಜ್ಞ ಅತ್ಯಂತ ಶ್ರೇಷ್ಠ ಕವಿಗಳಲ್ಲಿ ಒಬ್ಬರು ಎಂದು ದಿಶಾ ಕಮಿಟಿ ಸದಸ್ಯೆ ರಾಜೇಶ್ವರಿ ರಾಜಶೇಖರ್ ಹೇಳಿದ್ದಾರೆ.ತಾಲೂಕು ಕಚೇರಿಯಲ್ಲಿ ನಡೆದ 506ನೇ ಕವಿ ಸರ್ವಜ್ಞ ಜಯಂತಿಯಲ್ಲಿ ಮಾತನಾಡಿ ಸರ್ವಜ್ಞರ ವಚನಗಲ್ಲಿನ ಸರಳತೆ ತತ್ವ ಆದರ್ಶಗಳು ಇಂದಿನ- ಮುಂದಿನ ಪೀಳಿಗೆಗೆ ಆದರ್ಶ. ಸಮಾಜದ ಲೋಪ ದೋಷಗಳನ್ನು ತಿದ್ದಿ ತೀಡಿದ್ದರು, ಧರ್ಮ, ಅರ್ಥ, ಕಾಮ, ಮೋಕ್ಷ ಎಲ್ಲಾ ವಿಷಯಗಳು ಅವರ ಸಾಹಿತ್ಯದಲ್ಲಿ ಹಾಸು ಹೊಕ್ಕಾಗಿವೆ. ಆದ್ದರಿಂದ ಕನ್ನಡದ ಕವಿಗಳಲ್ಲಿ ಸರ್ವಜ್ಞ ಉನ್ನತ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.ಶಿರಸ್ತೇದಾರ್ ನಟರಾಜ್ ಮಾತನಾಡಿ ಸರ್ವಜ್ಞರು ದಾರ್ಶನಿಕ ಕವಿ ಅವರ ತ್ರಿಪದಿ ಮಾನವ ಜನಾಂಗಕ್ಕೆ ದಾರಿದೀಪ ಎಂದರು. ಸುರೇಶ್ ಮಾತನಾಡಿ ಕನ್ನಡ ಜನಪ್ರಿಯ ಕವಿ ಸರ್ವಜ್ಞರ ಜನಿಸಿರುವುದು ಕುಂಬಾರ ಜನಾಂಗದಲ್ಲಿ ಎಂಬುದು ನಮಗೆ ಹೆಮ್ಮೆಯ ಸಂಗತಿ ಅವರ ತತ್ವ ಆದರ್ಶ ಪಾಲಿಸೋಣ ಎಂದು ಹೇಳಿದರು.ಕುಂಬಾರ ಸಮಾಜದ ಅಧ್ಯಕ್ಷ ಈಶ್ವರಪ್ಪ, ರಾಜ್ಯ ಕುಂಬಾರ ಸಮಾಜ ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ, ಗ್ರಾಪಂ ಮಾಜಿ ಸದಸ್ಯ ಕಲ್ಲೇಶಪ್ಪ. ಕುಂಬಾರ ಸಮಾಜದ ಅಧ್ಯಕ್ಷ ರವಿ ಬೆಟ್ಟ ತಾವರೆಕೆರೆ, ರಾಜಶೇಖರ್ ಮತ್ತು ಕುಂಬಾರ ಸಮಾಜದ ಬಾಂಧವರು ಉಪಸ್ಥಿತರಿದ್ದರು. ಐಶ್ವರ್ಯ, ಮಂಜುನಾಥ್ ಇದ್ದರು.20ಕೆಟಿಆರ್.ಕೆ.6ಃ ತರೀಕೆರೆಯಲ್ಲಿ ನಡೆದ 506ನೇ ಕವಿ ಸರ್ವಜ್ಞರು ಜಯಂತಿಯಲ್ಲಿ ದಿಶಾ ಕಮಿಟಿ ಸದಸ್ಯ ರಾಜೇಶ್ವರಿ ರಾಜಶೇಖರ್, ಕುಂಬಾರ ಸಮಾಜದ ಅಧ್ಯಕ್ಷ ಈಶ್ವರಪ್ಪ, ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ ಮತ್ತಿತರರು ಇದ್ದರು.