ಕುದೂರು: ಪ್ರತಿಯೊಂದು ವಸ್ತುವಿನಲ್ಲೂ ಭಗವಂತನನ್ನು ನೋಡುವ ಸಂಸ್ಕೃತಿ ನಮ್ಮದಾಗಿದೆ. ನಮ್ಮಗಳ ಇಂತಹ ಮನಸ್ಥಿತಿಯನ್ನು ರೂಢಿಸಿಕೊಂಡ ಭಾರತೀಯ ಪರಂಪರೆಗೆ ಇಡೀ ಜಗತ್ತು ಬೆರಗಾಗಿ ನೋಡುತ್ತಿದೆ ಎಂದು ಶಿವಗಂಗೆ ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್‍ಯ ಸ್ವಾಮೀಜಿ ಹೇಳಿದರು.
ಕುದೂರು ಗ್ರಾಮದ ಶ್ರೀ ಶಿವಕುಮಾರ ಸ್ವಾಮೀಜಿ ಬಸ್ ನಿಲ್ದಾಣದಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ಏರ್ಪಡಿಸಿದ್ದ ಹಿಂದೂ ಸಮಾಜೋತ್ಸವ ಮತ್ತು ಶೋಭಾಯಾತ್ರೆ ಕಾರ್‍ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಇಂದಿನ ಯುವಶಕ್ತಿಯ ಮೇಲೆ ದೊಡ್ಡ ಜವಾಬ್ಧಾರಿ ಇದೆ. ಆದರೆ ಬಹುತೇಕ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಡ್ರಗ್ ಎಂಬ ಪಿಡುಗು ಬಲಿಷ್ಟರಾಗಬೇಕಿದ್ದ ಯುವಕರನ್ನು ದುರ್ಬಲರನ್ನಾಗಿ ಮಾಡುತ್ತಿದೆ. ಇದಕ್ಕಾಗಿ ಮನೆ ಮತ್ತು ಸಮಾಜ ಎಚ್ಚರಗೊಂಡು ಯುವಕರನ್ನು ಬಲಿಷ್ಟ ದಾರಿಯ ಕಡೆಗೆ ಕರೆದೊಯ್ಯಬೇಕಾಗಿದೆ. ಸಮಷ್ಠಿಯ ಪ್ರಗತಿಯಾಗಲು ವ್ಯಕ್ತಿಯ ಪ್ರಗತಿಯಾಗಬೇಕು ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್‍ಯವಾಹಕ ನಾ.ತಿಪ್ಪೇಸ್ವಾಮಿ, ಭಾರತೀಯರು ಎಂದಿಗೂ ಇನ್ನೊಂದು ದೇಶದ ಮೇಲೆ ತನ್ನಿಂತಾನೆ ಧಾಳಿ ಮಾಡಿದ ಉದಾಹರಣೆಗಳಿಲ್ಲ. ನಮ್ಮಗಳ ಮೇಲೆ ಸಾಕಷ್ಟು ಆಕ್ರಮಣಗಳಾಗಿದ್ದರೂ ಸಂಸ್ಕೃತಿಯಿಂದ ಗೆದ್ದ ದೇಶವೇನಾದರೂ ಇದ್ದರೆ ಅದು ನಮ್ಮ ಭಾರತ ಮಾತ್ರ ಎಂದರು.
ಪಾಶ್ಚಿಮಾತ್ಯ ಅನುಕರಣೆಗಳಿಂದ ಭಾರತೀಯ ಮೌಲ್ಯಗಳು ಕುಸಿಯುತ್ತಿದ. ನಮ್ಮ ಮನೆಗಳಿಗೆ ನಮ್ಮ ಅನುಮತಿಯಿಲ್ಲದೆ ಡೇಗಳು ಬಂದು ಸೇರಿವೆ. ಅಂದರೆ ಮದರ್ಸ್ ಡೇ , ಫಾದರ್ಸ್ ಡೇ , ವ್ಯಾಲೆಂಟೈನ್ಸ್ ಡೇ. ನಿತ್ಯವೂ ತಂದೆ ತಾಯಿಗಳನ್ನು ಪೂಜಿಸುವ ನಾಡಿನ ನಮಗೆ ಒಂದು ದಿನ ತಾಯಿ ಮತ್ತು ತಂದೆಯನ್ನು ನೆನೆಯುವ ಹಬ್ಬಗಳು ಬೇಕೆ? ವ್ಯಕ್ತಿಯನ್ನು ದುರ್ಬಲಗೊಳಿಸುವ ಯಾವುದೇ ಆಚರಣೆಗಳನ್ನು ನಾನು ದಿಕ್ಕರಿಸುವ ಗುಣವನ್ನು ರೂಢಿಸಿಕೊಳ್ಳನೇಕು ಎಂದು ಹೇಳಿದರು.ಪಾಲನಹಳ್ಳಿ ಮಠದ ಶ್ರೀ ಸಿದ್ದರಾಜು ಸ್ವಾಮೀಜಿ ಮಾತನಾಡಿ, ಒಗ್ಗಟ್ಟಿನಲ್ಲಷ್ಟೇ ನಮ್ಮ ಬಲ ಚನ್ನಾಗಿ ಪ್ರದರ್ಶಿಸಬಹುದು. ಜೇನು ಹುಳು ಒಂದೇ ಒಂದು ಬಂದಾಗ ನಮಗೆ ಏನೂ ಗಾಬರಿಯಾಗುವುದಿಲ್ಲ. ಏಕೆಂದರೆ ಅದೊಂದು ಹುಳು ಎಂದು ಭಾವಿಸಿರುತ್ತೇವೆ. ಆದರೆ ಅದೇ ಜೇನುಹುಳು ಹಿಂಡುಹಿಂಡಾಗಿ ಬಂದಾಗ ಇದೇ ಜನ ಎದ್ದೆವೋ ಬಿದ್ದೆವೋ ಎಂದು ಓಡಿ ಅವುಗಳಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತೇವೆ. ಸಂಘಟನೆಗೆ ಇರುವ ಶಕ್ತಿ ಅಂತಹದ್ದು ಎಂದು ತಿಳಿಸಿದರು.
ಹೊಸಕೊಪ್ಪಲಿನ ಶೀ ಚೌಡೇಶ್ವರಿದೇವಿಶಕ್ತಿ ಮಠದ ಶ್ರೀ ಬಸವೇಶ್ವರ ಚೈತನ್ಯ ಸ್ವಾಮೀಜಿ ಮಾತನಾಡಿ, ದೇಶದೊಳಗಿನ ಶತೃ ಅತ್ಯಂತ ಅಪಾಯಕಾರಿ. ಮೊದಲು ಆತನನ್ನು ಬಗ್ಗು ಬಡಿಯಬೇಕು. ಸಮಾಜ ದುರ್ಬಲವಾಗಿದ್ದರೆ ನಮ್ಮಮೇಲೆ ಹೆಚ್ಚಿನ ದಾಳಿಗಳು ಆಗುತ್ತವೆ. ಬಲಿಷ್ಟವಾಗುವುದೊಂದೇ ಇದಕ್ಕಿರುವ ದಾರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಅಂಗಡಿಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದ ವರ್ತಕರು ಹಾಗೂ ಜನರು ಧ್ವಜ ಹಿಡಿದು ಗ್ರಾಮದ ಮುಖ್ಯಬೀದಿಗಳಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಭಾರತಮಾತೆ ಮತ್ತು ಶ್ರೀರಾಮದೇವರ ಮೂರ್ತಿಗಳನ್ನು ಬೆಳ್ಳಿರಥದಲ್ಲಿಟ್ಟು ಮೆರವಣಿಗೆ ಮಾಡಲಾಯಿತು.
ಕೆಂಪೇಗೌಡ ಯುವವಾಹಿನಿ ಸಂಸ್ಥೆಯ ಅಧ್ಯಕ್ಷ ಜಯಪ್ರಕಾಶ್‌ಗೌಡ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಟಿ.ವೆಂಕಟೇಶ್, ಯುವ ಮುಖಂಡ ಆರ್.ಮಂಜುನಾಥ್, ವರ್ತಕರ ಸಂಘದ ಅಧ್ಯಕ್ಷ ಕೃಷ್ಣಕುಮಾರ್, ಜಗದೀಶ್ ರಾಥೋಡ್, ಮಂಜೇಶ್, ಗೋವಿಂದರಾಜ್, ಹನುಮಂತೇಗೌಡ, ಡಾ.ಮಹದೇವ್, ಕು.ಮು.ದಯಾನಂದ್, ಹೊನ್ನರಾಜ್, ಬಾಲಕೃಷ್ಣ, ಕೇಶವಮೂರ್ತಿ, ಉದಯ್‌ಕುಮಾರ್ ಮತ್ತಿತರರು ಭಾಗವಹಿಸಿದ್ದರು.20ಕೆಆರ್ ಎಂಎನ್ 3,4.ಜೆಪಿಜಿ
3.ಕುದೂರು ಗ್ರಾಮದಲ್ಲಿ ಏರ್ಪಡಿಸದ್ದ ಹಿಂದೂ ಸಮಾಜೋತ್ಸವ ಕಾರ್‍ಯಕ್ರಮವನ್ನು ಶಿವಗಂಗೆ ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿಶಿವಾಚಾರ್‍ಯ ಸ್ವಾಮೀಜಿ, ಸಿದ್ದರಾಜು ಸ್ವಾಮೀಜಿ, ಬಸವೇಶ್ವರ ಚೈತನ್ಯ ಸ್ವಾಮೀಜಿ, ನಾ.ತಿಪ್ಪೇಸ್ವಾಮಿ ಉದ್ಘಾಟಿಸಿದರು.4.ಕುದೂರು ಗ್ರಾಮದಲ್ಲಿ ಹಿಂದೂ ಸಮಾಜೋತ್ಸವದ ಮೆರವಣಿಗೆ.