ರೋಟರಿ ಸಂಸ್ಥೆಯಿಂದ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಾಲನೆ

| Published : Feb 17 2025, 12:32 AM IST

ಸಾರಾಂಶ

ರೋಟರಿ ಸಂಸ್ಥೆ ನಗರ ಪ್ರದೇಶಕ್ಕೆ ಮಾತ್ರ ಸಿಮೀತವಾಗದೇ ಹಳ್ಳಿಗರ ಕಷ್ಟ-ಸುಖಃಗಳಿಗೆ ಸದಾ ಸ್ಪಂದಿಸುತ್ತ ಜನಪಯೋಗಿ ಕೆಲಸಗಳನ್ನು ಮಾಡುತ್ತಿದೆ. ಭಾರತೀ ನಗರ ರೋಟರಿ ಸೆಂಟ್ರಲ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಗ್ರಾಮೀಣ ಭಾಗದ ಜನತೆಗೆ ಮತ್ತು ರೈತರಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ರೋಟರಿ ಸಂಸ್ಥೆಯಿಂದ ರೋಟರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಿಕ್ಕರಸಿನಕೆರೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಚಾಲನೆ ದೊರೆಯಿತು.

ಭಾರತೀನಗರ ರೋಟರಿ ಸೆಂಟ್ರಲ್, ಬೆಂಗಳೂರಿನ ರೋಟರಿ ಸಂಸ್ಥೆಗಳಾದ ಸೌತ್ ಎಂಡ್, ಸ್ಪಂದನ, ಸೌತ್ ಪೆರೇಡ್ ಮತ್ತು ಉಳ್ಳಾಲ ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ಹಳ್ಳಿ-ಹಬ್ಬ ಶಿರ್ಷಿಕೆಯಡಿ ಕಾರ್ಯಕ್ರಮಕ್ಕೆ ರೋಟರಿ ಜಿಲ್ಲಾ ಪಾಲಕ ಸತೀಶ್ ಮಾಧವನ್, ಮಹದೇವಪ್ರಸಾದ್ ಚಾಲನೆ ನೀಡಿದರು.

ಬಳಿಕ ಸತೀಶ್ ಮಾಧವನ್ ಮಾತನಾಡಿ, ರೋಟರಿ ಸಂಸ್ಥೆ ಹಲವು ದಶಕಗಳಿಂದ ಸಾಮಾಜಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಸಂಸ್ಥೆ ಜನ ಮನಸದಲ್ಲಿ ಅಚ್ಚಳಿಯಾಗಿ ಉಳಿದಿದೆ ಎಂದರು.

ರೋಟರಿ ಸಂಸ್ಥೆ ನಗರ ಪ್ರದೇಶಕ್ಕೆ ಮಾತ್ರ ಸಿಮೀತವಾಗದೇ ಹಳ್ಳಿಗರ ಕಷ್ಟ-ಸುಖಃಗಳಿಗೆ ಸದಾ ಸ್ಪಂದಿಸುತ್ತ ಜನಪಯೋಗಿ ಕೆಲಸಗಳನ್ನು ಮಾಡುತ್ತಿದೆ. ಭಾರತೀ ನಗರ ರೋಟರಿ ಸೆಂಟ್ರಲ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಗ್ರಾಮೀಣ ಭಾಗದ ಜನತೆಗೆ ಮತ್ತು ರೈತರಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಪ್ರತಿ ತಿಂಗಳ ಮೊದಲ ವಾರದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆಸಿ ಹಲವರಿಗೆ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಿಸಿ ಬಡವರಿಗೆ ನೆರವಾಗುತ್ತಿದೆ. ಇಂತಹ ಕೆಲಸಗಳು ನಿರಂತರವಾಗಿ ಮುಂದುವರಿಯಲಿ ಎಂದು ಹೇಳಿದರು.

ಈ ವೇಳೆ ವಿವಿಧ ಗ್ರಾಮಗಳ ಶಾಲೆಗಳಲ್ಲಿ ಮೆಣಸಗೆರೆಯ ಜ್ಞಾನ ಮುದ್ರಾ ವಿದ್ಯಾಮಂದಿರ ಸೇರಿದಂತೆ ಚಿಕ್ಕಅರಸಿನಕೆರೆ, ಭಾರತೀನಗರ, ಮಾರ್ಗನಹಳ್ಳಿ, ಮಾದರಹಳ್ಳಿ, ಕ್ಯಾತಘಟ್ಟ, ಕಾಡುಕೊತ್ತನಹಳ್ಳಿ, ಮಡೇನಹಳ್ಳಿ ಪ್ರೌಢಶಾಲೆಗಳಲ್ಲಿ ಶೌಚಾಲಯ ಶುದ್ಧಿ ಸಾಮಗ್ರಿ, ಸ್ಯಾನಿಟರಿ ಪ್ಯಾಡ್ ವಿತರಣೆ, ಹೆಣ್ಣು ಮಕ್ಕಳ ವೈಯಕ್ತಿಕ ಸ್ವಚ್ಛತೆ ಬಗ್ಗೆ, ವೃತ್ತಿ ಮಾರ್ಗದರ್ಶನ ಜರುಗಿತು.

ರೋಟರಿ ಭಾರತೀನಗರ ಸೆಂಟ್ರಲ್‌ನ ಅಧ್ಯಕ್ಷ ಎಸ್.ಕೆ. ಶಶಿಕುಮಾರ್ ಮಾತನಾಡಿ, ಬಡ ಮತ್ತು ಮದ್ಯಮ ವರ್ಗದ ಜನತೆ ಸೇರಿದಂತೆ ರೈತರಿಗೆ ಉಪಯೋಗವಾಗುವ ಕಾರ್ಯಕ್ರಮಗಳನ್ನು ಮೂರು ದಿನಗಳ ಕಾಲ ಹಮ್ಮಿ ಕೊಳ್ಳಲಾಗಿದೆ ಎಂದರು.

ಈ ವೇಳೆ ಲೆಪ್ಟಿನೆಂಟ್ ಗೌರ್ರ್‍‌ನರ್ ಕೆ.ಕುಮಾರರಾಜು, ಸಹಾಯಕ ಗೌರ್ನರ್ ಎಂ.ಆರ್. ಮಧು, ಕಾರ್ಯದರ್ಶಿ ಕರಡಕೆರೆ ಮರಿಸ್ವಾಮಿ, ಬಿ.ವಿ. ಮಧುಸೂಧನ್, ಡಾ. ಸೌಮ್ಯ ರಾಜೇಶ್, ಶಿವಮ್ಮ ಶಿವಕುಮಾರ್, ಶಿವರತ್ನಮ್ಮಣ್ಣಿ ಅರಸ್, ದೇವರಹಳ್ಳಿ ಶಿವರಾಮು, ಶಿವಲಿಂಗಯ್ಯ, ತೊರೆಚಾಕನಹಳ್ಳಿ ಕೆಂಪೇಗೌಡ, ನಂದೀಶ್, ಕೃಷ್ಣ, ಹಾಗಲಹಳ್ಳಿ ಶಿವಾನಂದ್, ಸೌತ್ ಎಂಡ್ ಅಧ್ಯಕ್ಷ ವಿಕ್ರಮ್ ರಾಜೇ ಅರಸ್, ಕಾರ್ಯದರ್ಶಿ ಸೌಮ್ಯ ಪ್ರಕಾಶ್ ಸನ್ನ, ರೋಟರಿ ಸ್ಪಂದನ ಅಧ್ಯಕ್ಷ ಕಿಸೋರ್, ಕಾರ್ಯದರ್ಶಿ ವಿಜಯ ಸಲಿಯಾನ, ರೋಟರಿ ಸೌತ್ ಪೆರೇಡ್ ಅಧ್ಯಕ್ಷ ರವಿ ಚಕ್ರವರ್ತಿ, ಕಾರ್ಯದರ್ಶಿ ಅರ್ಜುನ್, ಉಳ್ಳಾಲ ರೋಟರಿ ಅಧ್ಯಕ್ಷ ಕೆ.ಆರ್. ಸುರೇಂದ್ರ, ಕಾರ್ಯದರ್ಶಿ ಮಾಧವಿ ಶ್ರೀಕಾಂತ್ ಸೇರಿದಂತೆ ಮತ್ತಿತರಿದ್ದರು.