ಕಳ್ಳನಿಂದ ₹4.72 ಮೌಲ್ಯದ ಸ್ವತ್ತು ವಶ

| Published : Jan 02 2025, 12:33 AM IST

ಸಾರಾಂಶ

ಹಳ್ಳಿಹಾಳ್ ಮಟ್ಟಿಕ್ಯಾಂಪ್‌ನಲ್ಲಿ ಕವಿತಾ ಶಿವಕುಮಾರ್‌ ಎಂಬವರ ಮನೆಗೆ ಹಿಂಬಾಗಿಲಿನಿಂದ ನುಗ್ಗಿ ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ಕಳವು ಮಾಡಿದ್ದ ಆರೋಪಿಯನ್ನು ತಾಲೂಕಿನ ಮಲೇಬೆನ್ನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ: ಹಳ್ಳಿಹಾಳ್ ಮಟ್ಟಿಕ್ಯಾಂಪ್‌ನಲ್ಲಿ ಕವಿತಾ ಶಿವಕುಮಾರ್‌ ಎಂಬವರ ಮನೆಗೆ ಹಿಂಬಾಗಿಲಿನಿಂದ ನುಗ್ಗಿ ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ಕಳವು ಮಾಡಿದ್ದ ಆರೋಪಿಯನ್ನು ತಾಲೂಕಿನ ಮಲೇಬೆನ್ನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹರಿಹರ ತಾಲೂಕಿನ ಹಳ್ಳಿಹಾಳ್ ಮಟ್ಟಿಕ್ಯಾಂಪ್‌ನ ನಿವಾಸಿ, ಗೂಡ್ಸ್ ವಾಹನ ಚಾಲಕ ಎನ್‌.ಮಂಜುನಾಥ ಬಂಧಿತ ಆರೋಪಿ. ಒಟ್ಟು 80 ಗ್ರಾಂ ಚಿನ್ನಾಭರಣ, ₹40 ಸಾವಿರ ನಗದು ಸೇರಿದಂತೆ ₹4.40 ಲಕ್ಷ ಮೌಲ್ಯದ ಸ್ವತ್ತು ಕಳವು ಮಾಡಿದ್ದ ಆರೋಪಿಯನ್ನು ಕೃತ್ಯಕ್ಕೆ ಬಳಸಿದ್ದ ₹2.5 ಲಕ್ಷ ಮೌಲ್ಯದ ಗೂಡ್ಸ್ ವಾಹನ ಸೇರಿದಂತೆ ₹4.72 ಲಕ್ಷ ಮೌಲ್ಯದ ಸ್ವತ್ತಿನ ಸಮೇತ ಬಂಧಿಸಲಾಗಿದೆ.

ಬಂಧಿತನಿಂದ ₹1.98 ಲಕ್ಷ ಮೌಲ್ಯದ ಒಟ್ಟು 38 ಗ್ರಾಂ ಚಿನ್ನದ ಆಭರಣ, 23,500 ರು. ನಗದು, ಕೃತ್ಯಕ್ಕೆ ಬಳಸಿದ್ದ 2.5 ಲಕ್ಷ ಮೌಲ್ಯದ ಟಾಟಾ ಗೂಡ್ಸ್‌ ವಾಹನ ಸಮೇತ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

- - - -1ಕೆಡಿವಿಜಿ9:

ಹರಿಹರ ತಾಲೂಕಿನ ಮಲೇಬೆನ್ನೂರು ಠಾಣೆ ಪೊಲೀಸರು ಕಳ್ಳನನ್ನು ₹4.72 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಿರುವುದು.