ಸಾರಾಂಶ
ಡಿ.೧೯ರ ಗುರುವಾರದಿಂದ ೨೩ರ ಸೋಮವಾರದವರೆಗೆ ಶ್ರೀ ಕ್ಷೇತ್ರ ಶಕಟಪುರದಲ್ಲಿ ಶ್ರೀ ಜಗದ್ಗುರು ಬದರಿ ಶಂಕರಾಚಾರ್ಯ ಸಂಸ್ಥಾನ ಶಕಟಪುರ ಶ್ರೀವಿದ್ಯಾಪೀಠದ ಮಹಾಸ್ವಾಮಿಗಳಾದ ಶ್ರೀಶ್ರೀ ಕೃಷ್ಣಾನಂದತೀರ್ಥ ಮಹಾಸ್ವಾಮಿಗಳ ಜನ್ಮಜಯಂತಿ ಮಹೋತ್ಸವ ನಡೆಯಲಿದೆ.
ಕೊಪ್ಪ: ಡಿ.೧೯ರ ಗುರುವಾರದಿಂದ ೨೩ರ ಸೋಮವಾರದವರೆಗೆ ಶ್ರೀ ಕ್ಷೇತ್ರ ಶಕಟಪುರದಲ್ಲಿ ಶ್ರೀ ಜಗದ್ಗುರು ಬದರಿ ಶಂಕರಾಚಾರ್ಯ ಸಂಸ್ಥಾನ ಶಕಟಪುರ ಶ್ರೀವಿದ್ಯಾಪೀಠದ ಮಹಾಸ್ವಾಮಿಗಳಾದ ಶ್ರೀಶ್ರೀ ಕೃಷ್ಣಾನಂದತೀರ್ಥ ಮಹಾಸ್ವಾಮಿಗಳ ಜನ್ಮಜಯಂತಿ ಮಹೋತ್ಸವ ನಡೆಯಲಿದೆ.
ಈ ಸಂಬಂಧ ಶ್ರೀಮಠದಲ್ಲಿ ೫ ದಿನಗಳ ಕಾಲ ಪ್ರತಿದಿನ ಬೆಳಗ್ಗೆ ೭ರಿಂದ ೧೧ಗಂಟೆಯವರೆಗೆ ವಿಶೇಷ ಮಹಾಯಾಗಗಳು, ಧಾರ್ಮಿಕ ಪೂಜಾಕಾರ್ಯಕ್ರಮಗಳು ನಡೆಯಲಿವೆ. ಡಿ.೧೯ರ ಗುರುವಾರ ಶ್ರೀಮಹಾಗಣಪತಿ ಹೋಮ, ಶ್ರೀಲಕ್ಷ್ಮೀನಾರಾಯಣ ಪುರಶ್ಚರಣೆ ಪ್ರಾರಂಭ, ೨೦ರ ಶುಕ್ರವಾರ ಸಹಸ್ರ ಕಮಲಗಳಿಂದ ಶ್ರೀಸೂಕ್ತ ಮಹಾಹೋಮ, ೨೧ರ ಶನಿವಾರ ಶ್ರೀ ಲಕ್ಷ್ಮೀನಾರಾಯಣ ಹೃದಯಹೋಮ, ೨೨ರ ಭಾನುವಾರ ಜನ್ಮಜಯಂತಿ ಪ್ರಯುಕ್ತ ಶ್ರೀ ಮೃತ್ಯುಂಜಯ ಹೋಮ, ನವಗ್ರಹ-ನಕ್ಷತ್ರ ಹೋಮ, ಆಯುಷ್ಯ ಹೋಮ, ಶ್ರೀಲಕ್ಷ್ಮೀ ನೃಸಿಂಹ ಹೋಮ, ೨೩ರ ಸೋಮವಾರ ಶ್ರೀವಿದ್ಯಾಲಲಿತ ಮಹಾಯಾಗ, ೨೨ರ ಭಾನುವಾರ ಜನ್ಮಜಯಂತಿ ಮಹೋತ್ಸವದ ವಿಶೇಷ ಸಮಾರಂಭ ಜರುಗಲಿದೆ.ಬೆಳಗ್ಗೆ ೭ಕ್ಕೆ ಶಿಷ್ಯರಿಗೆ ಜಗದ್ಗುರುಗಳ ದರ್ಶನ, ಲಕ್ಷ್ಮೀನಾರಾಯಣ ಹೃದಯ, ಶ್ರೀಮೃತ್ಯುಂಜಯ, ಆಯುಷ್ಯಹೋಮಗಳ ಪ್ರಾರಂಭ, ಬೆಳಗ್ಗೆ ೧೦ಕ್ಕೆ ದೀಪಾರಾಧನೆ, ಭಿಕ್ಷಾವಂದನೆ, ತೀರ್ಥಪ್ರಸಾದ, ಶ್ರೀಆಚಾರ್ಯ ಮಹಾಸ್ವಾಮಿಗಳಿಂದ ಆಶೀರ್ವಚನ, ೧೧ಕ್ಕೆ ಮಹಾಯಾಗಗಳ ಪೂರ್ಣಾಹುತಿ, ಮಧ್ಯಾಹ್ನ ೧೨ಕ್ಕೆ ಶ್ರೀ ಜಗದ್ಗುರು ಮಹಾಸ್ವಾಮಿಗಳಿಗೆ ಶಿಷ್ಯ-ಭಕ್ತ ಜನತೆಯಿಂದ ಫಲ-ತಾಂಬೂಲ-ಮಹಾವಸ್ತ್ರ-ಗುರುದಕ್ಷಿಣ ಗೌರವ ಸಮರ್ಪಣೆ, ಮಧ್ಯಾಹ್ನ ೧ಕ್ಕೆ ಅನ್ನಸಂತರ್ಪಣೆ, ೬-೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.