ಸಾರಾಂಶ
ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಸುಭದ್ರ ಹಾಗೂ ಸುಸ್ಥಿರ ಆಡಳಿತ ನಡೆಸಿದ ಮಹಿಳೆಯರು ಇತರರಿಗಿಂತ ಸಶಕ್ತರು ಎಂದು ರುಜುವಾತಾಗಿದೆ ಎಂದು ಅಕ್ಕನ ಬಳಗದ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು.
ಗಜೇಂದ್ರಗಡ: ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಸುಭದ್ರ ಹಾಗೂ ಸುಸ್ಥಿರ ಆಡಳಿತ ನಡೆಸಿದ ಮಹಿಳೆಯರು ಇತರರಿಗಿಂತ ಸಶಕ್ತರು ಎಂದು ರುಜುವಾತಾಗಿದೆ ಎಂದು ಅಕ್ಕನ ಬಳಗದ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು.
ಪಟ್ಟಣದ ರೋಣ ರಸ್ತೆಯ ಅಕ್ಕನ ಬಳಗದ ಕಾರ್ಯಾಲಯದ ಆವರಣದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಮನೆಯ ಜವಾಬ್ದಾರಿಯಿಂದ ಹಿಡಿದು ಆಡಳಿತ ವ್ಯವಸ್ಥೆಯ ಜವಾಬ್ದಾರಿಯನ್ನು ನಿರ್ವಹಿಸಿದ ಮಹಿಳೆಯರು ಶಿಕ್ಷಣ, ತಂತ್ರಜ್ಞಾನ ಹಾಗೂ ಆರೋಗ್ಯ ಸೇರಿ ಅನೇಕ ಕ್ಷೇತ್ರದಲ್ಲೂ ಸಹ ಅನನ್ಯ ಸಾಧನೆಯನ್ನು ಮಾಡಿದ್ದಾಳೆ. ಪ್ರತಿ ಯಶಸ್ವಿ ಪುರುಷರ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮಹಿಳೆಯರು ಹಳ್ಳಿಯಿಂದ ದಿಲ್ಲಿಯವರೆಗೆ ಆಡಳಿತವನ್ನು ನಡೆಸಿದ್ದಲ್ಲದೆ ನೆಲದಿಂದ ಹಿಡಿದು ಬಾಹ್ಯಾಕಾಶದಲ್ಲೂ ಸಹ ಸಾಧನೆ ಮಾಡಿದ್ದು ಹೆಮ್ಮೆಯ ವಿಷಯವಾಗಿದ್ದು, ಸಾಧಕಿಯರು ಮಹಿಳಾ ಸಮುದಾಯಕ್ಕೆ ಮಾದರಿಯಾಗಬೇಕು ಎಂದರು. ಮಹಿಳೆಯರು ಮನೆಗೆಲಸಗಳಿಗೆ ಸೀಮಿತವಾಗದೆ ಸಾಹಿತ್ಯ, ಸಂಗೀತ ಸೇರಿ ತಮ್ಮಿಷ್ಟದ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಡಾ. ರೇಷ್ಮಾ ಕೋಲಕಾರ, ಶಿಕ್ಷಕಿ ಕಸ್ತೂರಿ ಹಿರೇಮಠ ಮಾತನಾಡಿ, ಇತಿಹಾಸದ ಪುಟದಿಂದ ಹಿಡಿದು ಇಂದಿನವರೆಗೂ ಮಹಿಳೆಯರ ಧೈರ್ಯ, ತ್ಯಾಗ ಹಾಗೂ ತಾಳ್ಮೆ ಇತಿಹಾಸ ಸೃಷ್ಟಿಸಿವೆ. ಹೆಣ್ಣೆಂಬ ಕೀಳರಿಮೆ ಬಿಟ್ಟು ಎಲ್ಲಾ ಕ್ಷೇತ್ರಗಳಲ್ಲೂ ಶ್ರಮವಹಿಸಿದರೆ ಸಾಧನೆ ಕಟ್ಟಿಟ್ಟ ಬುತ್ತಿ ಎಂದರು.ಸುವರ್ಣಾ ನಂದಿಹಾಳ, ವನಜಾ ಮಾಳಗಿ, ಅನಸೂಯಾ ವಾಲಿ, ಗೀತಾ ಕಂಬಳ್ಯಾಳ, ಸುಜಾತ ಮುದಗಲ್, ರೇಣುಕಾ ಕರ್ಣೆ, ಅನುಪಮಾ ಪಲ್ಲೇದ, ವಿಜಯಬಾಯಿ ಬಾಗಮಾರ, ಪುರಸಭೆ ಸದಸ್ಯೆ ಲೀಲಾ ಸವಣೂರ, ವಿಜಯಲಕ್ಷ್ಮೀ ಚಟ್ಟೇರ, ಸಂಗೀತಾ ಗಾಣಗೇರ, ಸುಕನ್ಯಾ ಹೊಗರಿ, ವಾಣಿ ಲಿಂಗಶೆಟ್ಟರ, ಮಂಜುಳಾ ಕೋರಧ್ಯಾನಮಠ, ಸುಮಿತ್ರಾ ತೊಂಡಿಹಾಳ, ನೇತ್ರಾವತಿ ಹೊಸಂಗಡಿ, ಸುನಿತಾ ಹಲಬಾಗಿಲ, ಸುಮಾ ಲಕ್ಕುಂಡಿಮಠ ಸೇರಿ ಇತರರು ಇದ್ದರು.