ಸಾರಾಂಶ
ಎಸ್.ಪಿ. ಉದಯಶಂಕರ್ ಸಾಂಕೇತಿಕವಾಗಿ ಸ್ವರ್ಣಜ್ಯೋತಿ ಸ್ವೀಕರಿಸಿದರು.
ಕನ್ನಡಪ್ರಭ ವಾರ್ತೆ ಸುತ್ತೂರು
ಸುತ್ತೂರಿನ ಕೆವಿಕೆಯಲ್ಲಿ ಸ್ವರ್ಣಜಯಂತಿ ಮಹೋತ್ಸವವನ್ನು ಮಂಗಳವಾರ ಆಚರಿಸಿದರು. ಸದರಿ ಸುವರ್ಣ ಮಹೋತ್ಸವದ ಜ್ಯೋತಿಯು ಮಂಗಳವಾರ ಕೊಡಗು ಜಿಲ್ಲೆಯ ಗೋಣಿಕೊಪ್ಪ ಕೆವಿಕೆಯಿಂದ ಸುತ್ತೂರು ಕೆವಿಕೆಯ ಬಂದು ಸೇರಿತು. ಸುವರ್ಣ ಮಹೋತ್ಸವದ ಜ್ಯೋತಿಯನ್ನು ಸುತ್ತೂರಿನ ಶ್ರೀ ಗದ್ದುಗೆಯ ಮುಂಭಾಗ ಜೆಎಸ್‌ಎಸ್ ಸಂಸ್ಥೆಗಳ ಆಡಳಿತಾಧಿಕಾರಿ ಎಸ್.ಪಿ. ಉದಯಶಂಕರ್ ಸಾಂಕೇತಿಕವಾಗಿ ಸ್ವರ್ಣಜ್ಯೋತಿ ಸ್ವೀಕರಿಸಿದರು. ನಂತರ ಕೆವಿಕೆಯ ಮುಖ್ಯಸ್ಥರಾದ ಡಾ.ಬಿ.ಎನ್. ಜ್ಞಾನೇಶ್ ಹಾಗೂ ಸಿಬ್ಬಂದಿ ಜ್ಯೋತಿಯನ್ನು ಕೆವಿಕೆಗೆ ತಂದರು.ನಂತರ ನಡೆದ ಸಮಾರಂಭದಲ್ಲಿ ಕೊಡಗು ಕೆವಿಕೆಯ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು, ರೈತರು ಹಾಗೂ ರೈತ ಮಹಿಳೆಯರು ಪಾಲ್ಗೊಂಡಿದ್ದರು.
ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಕೆವಿಕೆಯ ಸ್ವರ್ಣ ಮಹೋತ್ಸವವನ್ನು ರಾಷ್ಟ್ರೀಯ ಕೆವಿಕೆಗಳ ಸಮ್ಮೇಳನದಲ್ಲಿ ಆಚರಿಸಲು ನಿರ್ಧರಿಸಿದೆ. ಐಸಿಎಆರ್ ಮಹಾನಿರ್ದೇಶಕರು ಎಲ್ಲ 11 ವಲಯದ ಟಿಎಆರ್.ಐ ಯಿಂದ ಸ್ವರ್ಣ ಮಹೋತ್ಸವದ ಜ್ಯೋತಿಯು, ಎಲ್ಲ ಕೆವಿಕೆಗಳಲ್ಲಿ ಸಂಚರಿಸಿ ನವದೆಹಲಿಗೆ ತಲುಪಲು ಸೂಚಿಸಿದ್ದಾರೆ.