ಗಣೇಶ ಹಬ್ಬಕ್ಕೆ ಹಣ್ಣು, ಹೂವು, ತರಕಾರಿ ಬೆಲೆ ಇಳಿಕೆ

| Published : Sep 06 2024, 01:09 AM IST

ಸಾರಾಂಶ

ಪಟ್ಟಣದಲ್ಲಿ ಜನರಿಂದ ಗಣೇಶ ಹಬ್ಬಕ್ಕೆ ಹೂವು- ಹಣ್ಣು ಹಾಗೂ ಪೂಜಾ ಸಾಮಗ್ರಿ, ಗಣೇಶ ಮೂರ್ತಿ ಖರೀದಿ ಜೋರಾಗಿತ್ತು.

ಗುಬ್ಬಿ: ಪಟ್ಟಣದಲ್ಲಿ ಜನರಿಂದ ಗಣೇಶ ಹಬ್ಬಕ್ಕೆ ಹೂವು- ಹಣ್ಣು ಹಾಗೂ ಪೂಜಾ ಸಾಮಗ್ರಿ, ಗಣೇಶ ಮೂರ್ತಿ ಖರೀದಿ ಜೋರಾಗಿತ್ತು.

ವರಮಹಾಲಕ್ಷ್ಮಿ ಹಬ್ಬದ ವೇಳೆ ಗಗನಕೇರಿದ್ದ ಹಣ್ಣು, ಹೂವು, ತರಕಾರಿ ಈ ಗೌರಿ -ಗಣೇಶ ಹಬ್ಬಕ್ಕೆ ಸ್ವಲ್ಪ ಕಡಿಮೆಯಾಗಿದೆ. ಮಲ್ಲಿಗೆ ಹೂವು ಕೆಜಿಗೆ 300 ರು.- 600 ರು.,ಸೇವಂತಿಗೆ ಕೆಜಿಗೆ 150 ರು.-200 ರು., ಸುಗಂಧರಾಜ ಕೆಜಿಗೆ 100 ರು.-200 ರು. ಮಾರಿಗೋಲ್ಡ್ ಕೆಜಿಗೆ 200 ರು.ಮಾರಾಟವಾಗಿದೆ.

ಬಾಳೆಹಣ್ಣು ಕೆಜಿಗೆ ₹120, ಸೇಬು ಕೆಜಿಗೆ ₹200, ಮೋಸಂಬಿ ಕೆಜಿಗೆ ₹100, ದ್ರಾಕ್ಷಿ ಕೆಜಿಗೆ ₹400, ಮರ ಸೇಬು ಕೆಜಿಗೆ ₹250, ಹಬ್ಬಕ್ಕೆ ಬೇಕಾದ ಮಾವಿನ ಸೊಪ್ಪು ಒಂದು ಕಟ್ಟಿಗೆ ₹10-₹20, ಬಾಳೆಕಂಡು ಜೋಡಿಗೆ ₹30- ₹20 ಮಾರಾಟವಾಗಿದೆ. ಮನೆಗಳಲ್ಲಿ ಇಟ್ಟು ಪೂಜೆ ಮಾಡುವ 2 ಅಡಿ ಗಣಪತಿಗೆ ₹250 -₹300, ಗೌರಿಗೆ ₹300- ₹350 ಮಾರಾಟವಾಗಿದೆ. ದೇವಾಲಯದಲ್ಲಿ ಪೂಜಿಸುವ ಹಾಗೂ ಬೀದಿ ಬೀದಿಗಳಲ್ಲಿ ಸಂಘ ಸಂಸ್ಥೆಗಳು ಪ್ರತಿ ವರ್ಷ ಕೂರಿಸುವ ಗಣಪನಿಗೆ 3 ಅಡಿ ಗಣಪನಿಗೆ ₹4000- ₹5000, 5 ಅಡಿ ಗಣಪ ₹8000 -₹10000 ಮಾರಾವಾಗಿದೆ ಎನ್ನಲಾಗಿದೆ.

ಮೂರ್ತಿ ತಯಾರಕ ಹಾಗೂ ಮಾರಾಟಗಾರ ಈಶ್ವರಿ ಮಾತನಾಡಿ, ಈ ಸಾರಿ ಮಾರಾಟಗಾರರ ಸಂಖ್ಯೆ ಜಾಸ್ತಿಯಾಗಿದೆ. ಮಾರಾಟಗಾರರಿಗೆ ಈ ಬಾರಿ ಲಾಭದಾಯಕ ವ್ಯಾಪಾರ ಆಗಬಹುದು ಎಂದು ತಿಳಿಸಿದ್ದಾರೆ.