ಸಾರಾಂಶ
ಧಾರವಾಡ:
ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಅಂಗವಾಗಿ ಹುಬ್ಬಳ್ಳಿ ಧಾರವಾಡ ಮಹಾನಗರಗಳ ಉದ್ಯಾನ ಸ್ಪರ್ಧೆ ಫಲಿತಾಂಶವನ್ನು ತೋಟಗಾರಿಕೆ ಇಲಾಖೆ ಪ್ರಕಟಿಸಿದೆ.ಸಾರ್ವಜನಿಕ ಚಿಕ್ಕ ಉದ್ಯಾನದಲ್ಲಿ ಮಹಾನಗರ ಪಾಲಿಕೆ ಹುಬ್ಬಳ್ಳಿ ಮುಖ್ಯ ಕಚೇರಿ ಚಾಂಪಿಯನ್ ಹಾಗೂ ಶಿರೂರ ಪಾರ್ಕ್-1ನೇ ಹಂತ ಉದ್ಯಾನ ಮತ್ತು ಮಹಾನಗರ ಪಾಲಿಕೆ ಧಾರವಾಡ ಮುಖ್ಯ ಕಚೇರಿ ಪ್ರಥಮ ಸ್ಥಾನ ಪಡೆದಿವೆ.
ಸರ್ಕಾರಿ ಸಂಸ್ಥೆ ಚಿಕ್ಕ ಉದ್ಯಾನ ವಿಭಾಗದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಚಾಂಪಿಯನ್ ಹಾಗೂ ಕರ್ನಾಟಕ ವಿಶ್ವ ವಿದ್ಯಾಲಯ ಆಡಳಿತ ಕಚೇರಿಯ ಉದ್ಯಾನ ಪ್ರಥಮ ಸ್ಥಾನ ಪಡೆದಿವೆ. ಖಾಸಗಿ ಸಂಸ್ಥೆ ಚಿಕ್ಕ ಉದ್ಯಾನ ವಿಭಾಗದಲ್ಲಿ ಸತ್ತೂರಿನ ಎಸ್‌ಡಿಎಂ ಆಸ್ಪತ್ರೆ ಚಾಂಪಿಯನ್, ಕೆಎಲ್‌ಇ ಸಂಸ್ಥೆಯ ಕಾಡಸಿದ್ದೇಶ್ವರ ಕಲಾ ಕಾಲೇಜು, ಜೆಎಸ್‌ಎಸ್ ಕಾಲೇಜು ಮತ್ತು ಲೆಕ್ಕ ಪರಿಶೋಧಕರ ಸಂಸ್ಥೆ ಹುಬ್ಬಳ್ಳಿ ಪ್ರಥಮ ಸ್ಥಾನ ಪಡೆದಿವೆ.ಖಾಸಗಿ ಮನೆ ಹುಲ್ಲು ಹಾಸು ವಿಭಾಗದಲ್ಲಿ ಅರುಣಾ ಪ್ರಶಾಂತ ಬೆಲ್ಲದ ಚಾಂಪಿಯನ್ ಹಾಗೂ ಧಾರವಾಡದ ಶೇಖರ್ ಕುಂದಗೋಳ ಪ್ರಥಮ ಸ್ಥಾನ, ಕಾರ್ಖಾನೆ ದೊಡ್ಡ ಉದ್ಯಾನ ವಿಭಾಗದಲ್ಲಿ ಧಾರವಾಡದ ಹಿಂದೂಸ್ತಾನ್ ಪೆಟ್ರೋಲಿಯಂ ಲಿ. ಚಾಂಪಿಯನ್, ಬೈಲೂರು ಕೈಗಾರಿಕೆಯಲ್ಲಿರುವ ಯುಪ್ಲೆಕ್ಸ್ ಲಿ. , ಟಾಟಾ ಹಿಟಾಚಿ, ಪ್ರಜಾವಾಣಿ ಮತ್ತು ಯುಎನ್‌ಐ ಟ್ರೈಟೆಕ್ ಪ್ರೈ.ಲಿ. ಪ್ರಥಮ ಸ್ಥಾನ ಪಡೆದಿದ್ದಾರೆ.
ಸರ್ಕಾರಿ ಬಂಗ್ಲೆ ಉದ್ಯಾನ ವಿಭಾಗದಲ್ಲಿ ಕವಿವಿ ಕುಲಪತಿಗಳ ನಿವಾಸದ ಉದ್ಯಾನ ಚಾಂಪಿಯನ್ ಆದರೆ, ಕುಲಸಚಿವರ ನಿವಾಸದ ಉದ್ಯಾನ ಪ್ರಥಮ ಸ್ಥಾನ ಪಡೆದಿದೆ. ಇನ್ನು, ಖಾಸಗಿ ಮನೆ ಆವರಣದ ಉದ್ಯಾನದಲ್ಲಿ ಹುಬ್ಬಳ್ಳಿಯ ಮಹೇಂದ್ರ ಕೆ. ವಿಕಂಶಿ ಚಾಂಪಿಯನ್ ಹಾಗೂ ಧಾರವಾಡದ ಪಂಡಿತ ಎಸ್. ಮುಂಜಿ, ನವನಗರದ ರೇಣುಕಾ ಸುರೇಶ, ಹುಬ್ಬಳ್ಳಿ ಶೇಖರ ಕುಂದಗೋಳ, ಧಾರವಾಡದ ಅರುಣಾ ಪ್ರಶಾಂತ ಬೆಲ್ಲದ, ಧಾರವಾಡದ ಉಷಾ ಮಲ್ಲಿಕಾರ್ಜುನ ಹಡಗಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಔಷಧಿ ವನ ವಿಭಾಗದಲ್ಲಿ ಹುಬ್ಬಳ್ಳಿಯ ಸಂಜೀವಿನಿ ಆಯುರ್ವೇದಿಕ ಮೆಡಿಕಲ್ ಕಾಲೇಜು, ಆಸ್ಪತ್ರೆ ಚಾಂಪಿಯನ್ ಪಡೆದರೆ, ಕಾಡಸಿದ್ದೇಶ್ವರ ಕಾಲೇಜು, ಹುಬ್ಬಳ್ಳಿಯ ಕಿಮ್ಸ್, ಕೆಎಲ್‌ಇ ಸೊಸೈಟಿಯ ಫಾರ್ಮಸಿ ಕಾಲೇಜು ಹಾಗೂ ಕವಿವಿ ಕುಲಸಚಿವರ ಉದ್ಯಾನ ಪ್ರಥಮ ಸ್ಥಾನ ಪಡೆದಿವೆ. ಕ್ಯಾಕ್ಟಸ್ ವನ ವಿಭಾಗದಲ್ಲಿ ಪಂಡಿತ ಎಸ್. ಮುಂಜಿ ಚಾಂಪಿಯನ್ ಹಾಗೂ ಅಶೋಕ ನಗರದ ಪ್ರಸನ್ನ ಮೇವುಂಡ ಪ್ರಥಮ ಸ್ಥಾನ ಪಡೆದಿದ್ದಾರೆ. ಇನ್ನು ಹಲವು ವಿಭಾಗಗಳ ಫಲಿತಾಂಶವೂ ಪ್ರಕಟವಾಗಿದ್ದು, ತೋಟಗಾರಿಕೆ ಇಲಾಖೆ ಸಂಪರ್ಕಿಸಬಹುದು.
ಸ್ಪರ್ಧೆಗೆ ನಿರ್ಣಾಯಕರಾಗಿ ತೋಟಗಾರಿಕೆ ನಿವೃತ್ತ ಉಪ ನಿರ್ದೇಶಕ ಸಿ.ಕೆ. ಹೆರಕಲ್ಲ, ನಿವೃತ್ತ ಪ್ರಾಧ್ಯಾಪಕ ಡಾ. ಬಿ.ಡಿ. ಹುದ್ದಾರ ನಿರ್ವಹಿಸಿದರು ಎಂದು ತೋಟಗಾರಿಕೆ ಉಪ ನಿರ್ದೇಶಕ ಕಾಶೀನಾಥ ಭದ್ರಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))