ಪ್ರುಟ್ಸ್ ಪಾರ್ಕ್ ಸ್ಥಾಪನೆ ಆಗಲಿ

| Published : Mar 24 2025, 12:34 AM IST

ಸಾರಾಂಶ

ತುಂಗಭದ್ರಾ ಜಲಾಶಯದ ಹೂಳು ತೆಗೆಯುವ ನಿಟ್ಟಿನಲ್ಲಿ ಸರ್ಕಾರ ಮುಂದಡಿ ಇಡಬೇಕು.

ಕೊಪ್ಪಳ: ರಾಜಶೇಖರ ಅಂಗಡಿ ವೇದಿಕೆ ಹಲಗೇರಿ

ಕೊಪ್ಪಳದಲ್ಲಿ ಪ್ರುಟ್ಸ್ ಪಾರ್ಕ್‌ ಸ್ಥಾಪನೆ ಆಗಬೇಕು ಎಂದು ಸಮ್ಮೇಳನಾಧ್ಯಕ್ಷೆ ಮಾಲಾ ಬಡಿಗೇರ ಆಶಯ ವ್ಯಕ್ತಪಡಿಸಿದರು.

ತಾಲೂಕಿನ ಹಲಗೇರಿ ಗ್ರಾಮದಲ್ಲಿ ಜರುಗಿದ ಕಸಾಪ ತಾಲೂಕು 10ನೇ ಸಮ್ಮೇಳನದ ಸರ್ವಾಧ್ಯಕ್ಷೆ ವಹಿಸಿ ಮಾತನಾಡಿದ ಅವರು, ಹಣ್ಣು ಬೆಳೆಯುವ ಕೃಷಿಕರನ್ನು ಪ್ರೋತ್ಸಾಹಿಸಲು ಇಲ್ಲಿ ಹಣ್ಣುಗಳ ಸಂಗ್ರಹಣೆ ಮತ್ತು ಸಂಸ್ಕರಣೆ ಘಟಕ ಸ್ಥಾಪಿಸಿ ಪ್ರುಟ್ಸ್ ಪಾರ್ಕ್ ಸ್ಥಾಪಿಸಬೇಕು. ಪಪ್ಪಾಯ, ಚಿಕ್ಕು, ದ್ರಾಕ್ಷಿ, ಮಾವು, ಬಾಳೆ, ಅಂಜೂರು, ಬೋರೆಹಣ್ಣು, ಡ್ರ್ಯಾಗನ್ ಪ್ರುಟ್‌, ವೀಳ್ಯದೆಲೆ ಬೆಳೆಯುವ ಪ್ರವೃತ್ತಿ, ಪ್ರಯೋಗಕ್ಕೆ ನಮ್ಮ ರೈತರು ತೆರೆದುಕೊಳ್ಳುತ್ತಿರುವ ಈ ತಾಲೂಕನ್ನು ಹಣ್ಣು ಬೆಳೆಯುವ ತಾಲೂಕು ಎಂದು ಸರ್ಕಾರ ಘೋಷಿಸಿ ಫ್ರುಟ್ಸ್ ಪಾರ್ಕ್ ಸ್ಥಾಪಿಸಬೇಕು. ತುಂಗಭದ್ರಾ ಜಲಾಶಯದ ಹೂಳು ತೆಗೆಯುವ ನಿಟ್ಟಿನಲ್ಲಿ ಸರ್ಕಾರ ಮುಂದಡಿ ಇಡಬೇಕು. ತುಂಗಭದ್ರಾ ಜಲಾಶಯದ ನೀರಿನ ಸಾಮರ್ಥ ಸರಿದೂಗಿಸಲು ನವಲಿ ಬಳಿ ₹25,601 ಕೋಟಿ ವ್ಯಯದಲ್ಲಿ ಸಮಾನಾಂತರ ಜಲಾಶಯ ಸ್ಥಾಪನೆ ಮುಖ್ಯಮಂತ್ರಿಯವರು ಆಯವ್ಯಯದಲ್ಲಿ ಘೋಷಿಸಿರುವುದನ್ನು ಸ್ವಾಗತಿಸುವುದಾಗಿ ತಿಳಿಸಿದರು.

ಶಾಸನಗಳಲ್ಲಿ ಉಲ್ಲೇಖವಾಗಿರುವ ಹಲಗೇರಿ ಗ್ರಾಮದ ಶಾಂಭವಿ ಸನ್ನಿಧಿ, ಕೊಪಣದ ಇತಿಹಾಸ, ಧಾರ್ಮಿಕ ಕ್ಷೇತ್ರ, ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು, ಕೊಪ್ಪಳದ ಸಾಹಿತ್ಯ ಸೇವೆ, ಬರಹಗಾರರು, ಸಂಘಟನೆಗಳು, ಪತ್ರಿಕೋದ್ಯಮ, ಜನಪರ ಚಳವಳಿಗಳು, ಶಿಕ್ಷಣ ಕ್ಷೇತ್ರ, ಸಂಗೀತ, ರಂಗಭೂಮಿ, ಚಲನಚಿತ್ರ ಹಾಗೂ ಕಿರುಚಿತ್ರ ಕ್ಷೇತ್ರದಲ್ಲಿ ಕೊಪ್ಪಳದ ಸಾಹಿತಿಗಳು, ಕಲಾವಿದರ ಕೊಡುಗೆ ಅಪಾರ ಎಂದರು.