ಭತ್ತದ ಕೃಷಿಗೆ ಎದುರಾದ ಬಹಳಷ್ಟು ಸಮಸ್ಯೆ ಸವಾಲುಗಳಿಂದ ಭತ್ತದ ಕೃಷಿ ಜಿಲ್ಲೆಯಲ್ಲಿ ಕಡಿಮೆಯಾಗಿದೆ, ಕೃಷಿ ಸಂಸ್ಕೃತಿಯ ಹಿನ್ನೆಲೆಯ ಕೈಲ್ ಪೋಳ್ದ್ ಹಬ್ಬವನ್ನು ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸಾಮೂಹಿಕವಾಗಿ ಆಚರಣೆ ಮಾಡುತ್ತಾ ಬರಲಾಗುತ್ತಿದೆ. ಮುಂದಿನ ಪೀಳಿಗೆಗೆ ಹಬ್ಬದ ಮಹತ್ವವನ್ನು ತಿಳಿಸಲು ಆಚರಣೆ ಮಾಡುವುದು ಮುಖ್ಯವಾಗಿದೆ ಎಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಹಾಗೂ ಕುಟ್ಟ ಕೊಡವ ಸಮಾಜದ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಭತ್ತದ ಕೃಷಿಗೆ ಎದುರಾದ ಬಹಳಷ್ಟು ಸಮಸ್ಯೆ ಸವಾಲುಗಳಿಂದ ಭತ್ತದ ಕೃಷಿ ಜಿಲ್ಲೆಯಲ್ಲಿ ಕಡಿಮೆಯಾಗಿದೆ, ಕೃಷಿ ಸಂಸ್ಕೃತಿಯ ಹಿನ್ನೆಲೆಯ ಕೈಲ್ ಪೋಳ್ದ್ ಹಬ್ಬವನ್ನು ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸಾಮೂಹಿಕವಾಗಿ ಆಚರಣೆ ಮಾಡುತ್ತಾ ಬರಲಾಗುತ್ತಿದೆ. ಮುಂದಿನ ಪೀಳಿಗೆಗೆ ಹಬ್ಬದ ಮಹತ್ವವನ್ನು ತಿಳಿಸಲು ಆಚರಣೆ ಮಾಡುವುದು ಮುಖ್ಯವಾಗಿದೆ ಎಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಹಾಗೂ ಕುಟ್ಟ ಕೊಡವ ಸಮಾಜದ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಅಭಿಪ್ರಾಯಪಟ್ಟರು.ಅವರು ಕುಟ್ಟ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಕೈಲ್ ಪೋಳ್ದ್ ನಮ್ಮೆ ಒತ್ತೋರ್ಮೆ ಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದ ಮುಖ್ಯ ಅತಿಥಿ, ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಐತಿಚಂದ ರಮೇಶ್ ಉತ್ತಪ್ಪ ಅವರು ಮಾತನಾಡಿ ಪ್ರಪಂಚದಲ್ಲಿ ವಿವಿಧ ಜನಾಂಗ ಧರ್ಮದವರು ಬೇರೆ ಬೇರೆ ದೇವರನ್ನು ಪೂಜೆ ಮಾಡುವ ಆಧ್ಯಾತ್ಮಿಕ- ಧಾರ್ಮಿಕ ಪದ್ಧತಿ ನಂಬಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ, ದೇವರನ್ನು ಕಾಣಲು ಸಾಧ್ಯವಿಲ್ಲ ಆದರೆ ಕೊಡವರು ತಂದೆ ತಾಯಿ ಹಾಗೂ ಪೂರ್ವಿಕರೇ ತಮ್ಮ ದೇವರೆಂದು ಪೂಜಿಸುವ ಪದ್ಧತಿ ಹೊಂದಿದ್ದಾರೆ. ಕೊಡವರು ತಮಗೆ ಜನ್ಮ ನೀಡಿದ ತಂದೆ ತಾಯಿ, ತಮ್ಮನ್ನು ಸಾಕಿದ ತಂದೆ- ತಾಯಿ, ಅಜ್ಜ -ಅಜ್ಜಿ ಹೀಗೆ ಪೂರ್ವಿಕರನ್ನು ಪೂಜೆ ಮಾಡುವ ಧಾರ್ಮಿಕ ಪದ್ಧತಿ ವಿಶೇಷ ಶಕ್ತಿಯಾಗಿದೆ. ನಮಗೆ ಮಾರ್ಗದರ್ಶನ ಹಾಗೂ ಅಗತ್ಯ ಬಂದಾಗ ನಮ್ಮ ಪೂರ್ವಿಕರ ಆಶೀರ್ವಾದದ ಮೊರೆ ಹೋಗುತ್ತೇವೆ. ಕೊಡವರಲ್ಲಿ ವ್ಯಕ್ತಿಯೊಬ್ಬರು ಸತ್ತಾಗ "ಮಾದಪಾಟ್ " ಮೂಲಕ ದೇವರಲ್ಲಿಗೆ ಸೇರಿಸಿ ದೇವರ ಶಕ್ತಿ ನೀಡಿ ಅವರನ್ನು ದೇವರ ರೂಪವಾಗಿ ಪೂಜಿಸುವ ನಂಬುವ ಆಧ್ಯಾತ್ಮಿಕ ನಂಬಿಕೆ ಇದೆ. ಇದು ವಿಶ್ವದಲ್ಲಿ ವಿಶೇಷ ಪಟ್ಟದಾಗಿದೆ ಎಂದು ಹೇಳಿದರು. ಕೊಡವ ಸಂಸ್ಕೃತಿ ಹಾಗೂ ಪರಂಪರೆ ಗಳನ್ನು ನಾವು ಉಳಿಸಿಕೊಂಡು ಹೋಗುವುದು ಅತ್ಯಂತ ಮಹತ್ವದಾಗಿದೆ ಎಂದು ಅಭಿಪ್ರಾಯಪಟ್ಟರು.ಮತ್ತೋರ್ವ ಮುಖ್ಯ ಅತಿಥಿ ಜಬ್ಭೂಮಿ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕ ಚೊಟ್ಟೆಕ್''''''''ಮಾಡ ರಾಜೀವ್ ಬೋಪಯ್ಯ ಮಾತನಾಡಿದರು.ವೇದಿಕೆ ಕಾರ್ಯಕ್ರಮಕ್ಕೆ ಮೊದಲು ಸಾಂಪ್ರದಾಯಿಕವಾಗಿ ಕೋವಿಗಳಿಗೆ ಆಯುಧ ಪೂಜೆಯನ್ನು ನಡೆಸಲಾಯಿತು ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾದ ಕ್ರೀಡಾ ಕಾರ್ಯಕ್ರಮ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ ನಡೆಯಿತು, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಸಮಾಜದ ಅಧ್ಯಕ್ಷ ವಿಷ್ಣು ಕಾರ್ಯಪ್ಪ ಉದ್ಘಾಟಿಸಿದರು.
ಪಾಯಿಂಟ್ 22 ಶೂಟಿಂಗ್ ಸ್ಪರ್ಧೆಯಲ್ಲಿ ಕೊಂಗಾoಡ ಸುರೇಶ ದೇವಯ್ಯ-ಕೇಚಮಾಡ ವಾಸು ಉತ್ತಪ್ಪ ಜಂಟಿಯಾಗಿ ಪ್ರಥಮ, ಕಳ್ಳಿಚಂಡ ರತನ್, ಮುಕ್ಕಾಟಿರ ವಿವನ್ ಗಣಪತಿ -ಜಂಟಿಯಾಗಿ ದ್ವಿತೀಯ, ತೀತಿರ ಸೂರಜ್ ತೃತೀಯ ಸ್ಥಾನ ಪಡೆದರು.ಮಹಿಳೆಯರ ರೋಲಿಂಗ್ ಬಾಲ್ ಸ್ಪರ್ಧೆಯಲ್ಲಿ ಕಾಳಮಂಡ ನೀತು ಪ್ರಥಮ, ಮಲ್ಲoಗಡ ರಮ್ಯಾ ಬೆಳ್ಯಪ್ಪ ದ್ವಿತೀಯ ಸ್ಥಾನ ಮತ್ತು ಪುರುಷರ ವಿಭಾಗದಲ್ಲಿ ಮಚ್ಚಮಾಡ ತನವ್ ಪ್ರಥಮ ಸ್ಥಾನ ಪಡೆದರು. ಸಾಹಿತಿ ರಮೇಶ್ ಉತ್ತಪ್ಪ ಅವರನ್ನು ಸನ್ಮಾನಿಸಲಾಯಿತು. ಕೇಚಮಾಡ ಬೀನಾ ಉತ್ತಪ್ಪ ಪ್ರಾರ್ಥಿಸಿ, ಉಳುವಂಗಡ ಲೋಹಿತ್ ಭೀಮಯ್ಯ ಜಬ್ಬೂಮಿ ಗೀತೆ ಹಾಡಿದರು. ಖಜಾಂಚಿ ಮಚ್ಚಮಾಡ ಸುಬ್ರಮಣಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.ವೇದಿಕೆಯಲ್ಲಿ ಉಪಾಧ್ಯಕ್ಷ ಹೊಟ್ಟೇoಗಡ ರಮೇಶ್, ಕಾರ್ಯದರ್ಶಿ ಕೊಂಗಾಂಡ ಸುರೇಶ್ ದೇವಯ್ಯ, ಉಪ ಕಾರ್ಯದರ್ಶಿ ತೀತಿರ ಮಂದಣ್ಣ,ಖಜಾಂಚಿ ಮಚ್ಚಮಾಡ ಸುಬ್ರಮಣಿ ನಿರ್ದೇಶಕರುಗಳಾದ ಕೋದಂಡ ಲೀಲಾ ಕಾರ್ಯಪ್ಪ, ತೀತಿರ ಕಬೀರ್ ತಿಮ್ಮಯ್ಯ, ಚೆಪ್ಪುಡೀರ ಪಾರ್ಥ, ಬಾಚರಣಿಯಂಡ ಪ್ರಕಾಶ್, ಕೋಟ್ರಮಾಡ ನಳಿನಿ, ಜಾಗದಾನಿಗಳಾದ ಮುಕ್ಕಾಟಿರ ರಾಜ ಮಂದಣ್ಣ, ಚೆಕ್ಕೆರ ರಾಬಿನ್ ಕಾರ್ಯಪ್ಪ, ಹಾಗೂ ಸಾಂಸ್ಕೃತಿಕ ಮತ್ತು ಮಹಿಳಾ ಸಂಘದ ಪದಾಧಿಕಾರಿಗಳಾದ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ, ಮುಕ್ಕಾಟಿರ ಅರ್ಚನಾ ಮಾದಪ್ಪ, ತೀತಿರ ರೇನಾ ನವೀನ್, ಕೊಳೆರ ಲೀಲಾ ಅಪ್ಪಣ್ಣ, ಚೆಪ್ಪುಡೀರ ಚೇತನಾ ಬೋಪಣ್ಣ,ಅಜ್ಜಮಾಡ ವನಿತಾ ಮತ್ತಿತರರು ಹಾಜರಿದ್ದರು.