ಪೆನ್‌ಡ್ರೈವ್‌: ಪ್ರಜ್ವಲ್‌ ನಿವಾಸ ಪರಿಶೀಲಿಸಿದ ಎಫ್‌ಎಸ್‌ಎಲ್‌

| Published : May 14 2024, 01:01 AM IST

ಪೆನ್‌ಡ್ರೈವ್‌: ಪ್ರಜ್ವಲ್‌ ನಿವಾಸ ಪರಿಶೀಲಿಸಿದ ಎಫ್‌ಎಸ್‌ಎಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪಕ್ಕದಲ್ಲೆ ಇರುವ ಲೋಕಸಭಾ ಸದಸ್ಯರ ನಿವಾಸವನ್ನು ಸೋಮವಾರ ಬೆಳಗಿನಿಂದಲೇ ಎಫ್‌ಎಸ್‌ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ತಂಡ ತಪಾಸಣೆ ನಡೆಸಿದೆ. ಸತತ ನಾಲ್ಕು ಗಂಟೆಗಳ ಕಾಲ ಸಂಸದರ ಮನೆಯ ಪರಿಶೀಲನೆ ನಡೆಸಿ ಅತ್ಯಾಚಾರ ಆರೋಪಕ್ಕೆ ಸಂಬಂಧಪಟ್ಟಂತೆ ಅನೇಕ ದಾಖಲೆಗಳನ್ನು ಸಂಗ್ರಹಿಸಿ ಅಧಿಕಾರಿಗಳು ಅಲ್ಲಿಂದ ಹೊರಟರು.

ಸತತ ನಾಲ್ಕು ಗಂಟೆ ಸಂಸದರ ಮನೆ ತಪಾಸಣೆ ನಡೆಸಿದ ಅಧಿಕಾರಿಗಳ ತಂಡ । ಪ್ರಕರಣ ಸಂಬಂಧಿತ ಪ್ರಮುಖ ದಾಖಲೆಗಳ ಸಂಗ್ರಹ

ಕನ್ನಡಪ್ರಭ ವಾರ್ತೆ ಹಾಸನ

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪಕ್ಕದಲ್ಲೆ ಇರುವ ಲೋಕಸಭಾ ಸದಸ್ಯರ ನಿವಾಸವನ್ನು ಸೋಮವಾರ ಬೆಳಗಿನಿಂದಲೇ ಎಫ್‌ಎಸ್‌ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ತಂಡ ತಪಾಸಣೆ ನಡೆಸಿದೆ.

ಸತತ ನಾಲ್ಕು ಗಂಟೆಗಳ ಕಾಲ ಸಂಸದರ ಮನೆಯ ಪರಿಶೀಲನೆ ನಡೆಸಿ ಅತ್ಯಾಚಾರ ಆರೋಪಕ್ಕೆ ಸಂಬಂಧಪಟ್ಟಂತೆ ಅನೇಕ ದಾಖಲೆಗಳನ್ನು ಸಂಗ್ರಹಿಸಿ ಅಧಿಕಾರಿಗಳು ಅಲ್ಲಿಂದ ಹೊರಟರು. ಹಿಂದೆ ಸಂತ್ರಸ್ತ ಮಹಿಳೆಯೊಬ್ಬರು ತನ್ನ ಮೇಲೆ ಸಂಸದರ ನಿವಾಸದಲ್ಲಿ ಅತ್ಯಾಚಾರ ನಡೆದಿದೆ ಎಂದು ಹೇಳಿಕೆ ನೀಡಿ ದೂರು ದಾಖಲಿಸಿದ್ದರು. ಮಹಿಳೆಯ ದೂರನ್ನು ಆಧರಿಸಿ ಎಫ್‌ಎಸ್‌ಎಲ್‌ ತಂಡ ಸ್ಥಳ ಪರಿಶೀಲನೆ ನಡೆಸಿದೆ.

ಸ್ಥಳ ಪರಿಶೀಲನೆ ಬಳಿಕ ಸಂಸದರ ನಿವಾಸವನ್ನು ಸೀಜ್ ಮಾಡಿ ಬೀಗ ಹಾಕಿ ಕೀಲಿಯನ್ನು ತಮ್ಮ ವಶಕ್ಕೆ ಪಡೆದ ಎಫ್‌ಎಸ್‌ಎಲ್ ಅಧಿಕಾರಿಗಳ ತಂಡ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿದೆ. ಮೇ.೪ ರಂದು ಸಂತ್ರಸ್ತ ಮಹಿಳೆ ಜತೆ ಎಸ್‌ಐಟಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು. ಅದಾದ ಬಳಿಕ ಮತ್ತೆ ಸೋಮವಾರ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಹೊಳೆನರಸೀಪುರದ ಚೆನ್ನಾಂಬಿಕ ನಿವಾಸದಲ್ಲಿ ಕೂಡ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತ ಮಹಿಳೆ ನೀಡಿದ ಹೇಳಿಕೆ ಆಧರಿಸಿ ಹಾಸನದ ಸಂಸದರ ನಿವಾಸದ ಪರಿಶೀಲನೆ ಬಳಿಕ ಹೊಳೆನರಸೀಪುರ ಚೆನ್ನಾಂಬಿಕ ನಿವಾಸಕ್ಕೆ ಕೂಡ ಎಫ್‌ಎಸ್‌ಎಲ್ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ತೆರಳಿದರು.