ಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಸಹಕಾರ: ಅಸ್ಕಿ

| Published : Sep 23 2024, 01:30 AM IST

ಸಾರಾಂಶ

ತಾಲೂಕು ಕೇಂದ್ರವಾದ ಮೇಲೆ ಪಟ್ಟಣದಲ್ಲಿ ನಡೆಯುತ್ತಿರುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಅಸ್ಕಿ ಫೌಂಡೇಶನ್‌ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಫೌಂಡೇಶನ್‌ ಅಧ್ಯಕ್ಷ ಸಿ.ಬಿ.ಅಸ್ಕಿ(ಕೊಣ್ಣೂರ) ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ತಾಲೂಕು ಕೇಂದ್ರವಾದ ಮೇಲೆ ಪಟ್ಟಣದಲ್ಲಿ ನಡೆಯುತ್ತಿರುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಅಸ್ಕಿ ಫೌಂಡೇಶನ್‌ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಫೌಂಡೇಶನ್‌ ಅಧ್ಯಕ್ಷ ಸಿ.ಬಿ.ಅಸ್ಕಿ(ಕೊಣ್ಣೂರ) ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿಗೆ ಆಗಮಿಸಿದ್ದ ವೇಳೆ ಸಮ್ಮೇಳನದ ಪೂರ್ವ ತಯಾರಿ ಕುರಿತು ಉಸ್ತುವಾರಿಗಳೊಂದಿಗೆ ಚರ್ಚಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಜಾನಪದ ಸಾಹಿತ್ಯ ಮುಖ್ಯಪಾತ್ರ ವಹಿಸಿದೆ. ತಾಳಿಕೋಟೆ ಐತಿಹಾಸಿಕ ನಗರಿ ತಾಲೂಕು ಕೇಂದ್ರವಾದ ಬಳಿಕ ಮೊದಲನೇಯ ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು. ಸಮ್ಮೇಳನದ ಯಶಸ್ವಿಗೆ ಎಲ್ಲ ರೀತಿಯಿಂದ ಸಹಾಯ ಸಹಕಾರ ನೀಡಲಿದೆ. ಕಸಾಪ ನೂತನ ಅಧ್ಯಕ್ಷ ಆರ್.ಎಲ್.ಕೊಪ್ಪದ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಾಗಿದ್ದು ಅವರ ನೇತೃತ್ವದಲ್ಲಿ ತಾಯಿ ಭುವನೇಶ್ವರಿಯ ತೇರನ್ನು ಎಳೆಯೋಣ ಎಂದು ಕೋರಿದರು.ಈ ವೇಳೆ ಪರಿಷತ್‌ನಿಂದ ಸಿ.ಬಿ.ಅಸ್ಕಿ, ಮಡುಸಾಹುಕಾರ ಬಿರಾದಾರ, ಪತ್ರಕರ್ತ ಅಂಬಾಜಿ ಘೋರ್ಪಡೆ ಅವರನ್ನು ಕನ್ನಡದ ಶಾಲು ಹಾಕಿ ಸತ್ಕರಿಸಲಾಯಿತು. ಕಸಾಪದ ಆರ್.ವಿ.ಜಾಲವಾದಿ, ಜೈಭೀಮ ಮುತ್ತಗಿ, ಪ್ರಕಾಶ ಹಜೇರಿ, ಮುತ್ತು ಕಶೆಟ್ಟಿ, ರಾಜು ವಿಜಾಪೂರ, ಮಲ್ಲನಗೌಡ ಹಂದ್ರಾಳ, ಮಾನಸಿಂಗ್ ಕೊಕಟನೂರ, ಮಹಾಂತೇಶ ಮುರಾಳ, ಬಿ.ಆರ್.ಪೊಲೀಸ್‌ಪಾಟೀಲ, ಕೊರವಾರ, ಪ್ರಭುಗೌಡ ಚೌದ್ರಿ, ಎಚ್.ಬಿ.ನಾಯಕ, ಬಿ.ಬಿ.ಬಿರಾದಾರ, ವೀರೇಶ ಕವಡಿಮಟ್ಟಿ, ಜಗದೀಶ ಬಿಳೇಭಾವಿ, ಕೆ.ಕಿಶೋರಕುಮಾರ, ಡಾ.ನಜೀರ ಕೋಳ್ಯಾಳ, ಶಿವಾನಂದ ಹೂಗಾರ ಇತರರು ಇದ್ದರು.