ಶಾಲೆ ಜೀರ್ಣೋದ್ದಾರಕ್ಕೆ ಸಂಪೂರ್ಣ ಸಹಕಾರ: ಜಿ.ಎಚ್.ಶ್ರೀನಿವಾಸ್

| Published : Jul 14 2024, 01:42 AM IST

ಶಾಲೆ ಜೀರ್ಣೋದ್ದಾರಕ್ಕೆ ಸಂಪೂರ್ಣ ಸಹಕಾರ: ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಕರಕುಚ್ಚಿ ಗ್ರಾಮದ ಸರ್ಕಾರಿ ಶಾಲೆ ಜೀರ್ಣೋದ್ದಾರಕ್ಕೆ ಮುಂಬರುವ ದಿನಗಳಲ್ಲಿ ಸಂಪೂರ್ಣ ಸಹಕಾರ ಇರುತ್ತದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಕರಕುಚ್ಚಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಂಗ್ಲಮಾಧ್ಯಮ ತರಗತಿಗೆ ಚಾಲನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಕರಕುಚ್ಚಿ ಗ್ರಾಮದ ಸರ್ಕಾರಿ ಶಾಲೆ ಜೀರ್ಣೋದ್ದಾರಕ್ಕೆ ಮುಂಬರುವ ದಿನಗಳಲ್ಲಿ ಸಂಪೂರ್ಣ ಸಹಕಾರ ಇರುತ್ತದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ತಾಲೂಕಿನ ಕರಕುಚ್ಚಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆಂಗ್ಲ ಮಾಧ್ಯಮ ತರಗತಿಗೆ ಚಾಲನೆ ನೀಡಿ ಮಾತನಾಡಿದರು. ಕರಕುಚ್ಚಿಯಂತಹ ಗ್ರಾಮದಲ್ಲಿ ಅಳಿವಿನಂಚಿನಲ್ಲಿದ್ದ ಶಾಲೆಯನ್ನು ಉಳಿಸಿಕೊಳ್ಳಲು ಗ್ರಾಮಸ್ಥರು ಸಂಘಟಿತರಾಗಿ ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ನಿರ್ಮಿಸಿಕೊಂಡು, ಆ ಮೂಲಕ ಸರ್ಕಾರಿ ಶಾಲೆ ಜೀರ್ಣೋದ್ಧಾರ ಮಾಡುತ್ತಿದ್ದಾರೆ. ಇದು ಪ್ರಶಂಸೆ ಮಾಡುವ ಮತ್ತು ಹೆಮ್ಮೆ ಪಡುವ ವಿಚಾರ. ಈಗಾಗಲೇ ಶಾಲೆಯಲ್ಲಿ ನರ್ಸರಿ ತರಗತಿ ಆರಂಭಿಸಿದ್ದು ಶಾಲೆಗೆ ಬೇಕಾದ ಪೂರಕ ವ್ಯವಸ್ಥೆ ರೂಪಿಸಿಕೊಂಡಿದ್ದು ಮಕ್ಕಳ ಸಂಖ್ಯೆಯಲ್ಲಿ ಗಣನೀಯ ವಾಗಿ ಹೆಚ್ಚಳವಾಗಿದೆ ಎಂದು ಹೇಳಿದರು.

ಇದೀಗ ಈ ಶಾಲೆಗೆ ಆಂಗ್ಲಮಾಧ್ಯಮ ಬೋಧನೆಗೆ ಅವಕಾಶ ಸಿಕ್ಕಿದೆ. ಇದೇ ರೀತಿ ಈ ಸರ್ಕಾರಿ ಶಾಲೆ ಉಳಿವಿಗೆ ಇವರ ಶ್ರಮ ಮುಂದುವರೆಯಲಿ ಶಾಲಾ ಸಿಬ್ಬಂದಿ ಹಾಗೂ ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸಿದ ದಾನಿಗಳನ್ನು ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಶಾಲೆಗೆ 100 ಲೀ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ನ ಅಧ್ಯಕ್ಷ ಎನ್ . ವಿ. ಅರುಣ್ ಕುಮಾರ್ ರವರ ತಂದೆ ತಾಯಿ ದಿ. ನೀಲಾಂಬಿಕ ವೀರಭದ್ರಪ್ಪ ಸ್ಮರಣಾರ್ಥ ದಾವಣಗೆರೆ ಕೆ. ಜಿ. ಭಾರತಿಮಲ್ಲಪ್ಪ ಕೊಡುಗೆಯಾಗಿ ನೀಡಿದ್ದ ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಜಿ. ಎಚ್. ಶ್ರೀನಿವಾಸ್ ಉದ್ಘಾಟನೆ ಮಾಡಿದರು.

ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ನ ಅಧ್ಯಕ್ಷ ಎನ್. ವಿ . ಅರುಣ್ ಕುಮಾರ್, ಗ್ರಾ ಪಂ ಅಧ್ಯಕ್ಷ ಮೋಹನ್ ಕುಮಾರ್, ಎಸ್ ಡಿ ಎಮ್ ಸಿ ಅಧ್ಯಕ್ಷೆ ಪುಷ್ಪ, ಮುಖಂಡರಾದ ವಿಜಯಾಬಾಯಿ, ಠಾಕ್ರ್ಯನಾಯ್ಕ, ಷಣ್ಮುಖಪ್ಪ, ಗ್ರಾ ಪಂ ಸದಸ್ಯರು, ಶಿಕ್ಷಕರು ಮತ್ತಿತರು ಉಪಸ್ಥಿತರಿದ್ದರು.

13ಕೆಟಿಆರ್.ಕೆ.8ಃ

ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಆಂಗ್ಲಮಾಧ್ಯಮ ತರಗತಿಗೆ ಚಾಲನೆ ನೀಡಿದರು. ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ನ ಅಧ್ಯಕ್ಷ ಎನ್. ವಿ . ಅರುಣ್ ಕುಮಾರ್ ಮತ್ತಿತರರು ಇದ್ದರು.