ಸಾರಾಂಶ
ಪರೀಕ್ಷೆಗೆ ಹಾಜರಾದ ೧೦೭ ವಿದ್ಯಾರ್ಥಿಗಳಲ್ಲಿ ೧೯ ವಿದ್ಯಾರ್ಥಿಗಳು ೬೧೩ (೯೮%) ಕ್ಕಿಂತಅಧಿಕ ಅಂಕಗಳನ್ನು, ೪೧ ವಿದ್ಯಾರ್ಥಿಗಳು ೬೦೦ (೯೬%) ಕ್ಕೂ ಹೆಚ್ಚು ಅಂಕಗಳನ್ನು, ೪೩ ವಿದ್ಯಾರ್ಥಿಗಳು ೫೯೫ (೯೫%) ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿರುತ್ತಾರೆ. ೭೫ (೭೦.೦೯%) ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿತೇರ್ಗಡೆ ಹೊಂದಿರುತ್ತಾರೆ. ೮೯ ಉತ್ತರಪತ್ರಿಕೆಗಳಲ್ಲಿ ೧೦೦ಕ್ಕೆ ೧೦೦ ಅಂಕಗಳ ಸಾಧನೆ ಮಾಡಿರುತ್ತಾರೆ. ಸಾಧಕರನ್ನು ಸಂಸ್ಥೆಯ ಅಧ್ಯಕ್ಷರು, ಟ್ರಸ್ಟಿಗಳು, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರ್ಕಳ೨೦೨೪-೨೫ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಗಣಿತ ನಗರದ ಸ್ವಸ್ತಿ ಕಾಮತ್ ೬೨೫ ರಲ್ಲಿ ೬೨೫ ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.
ಲಿಖಿತ್ ಡಿ ಶೆಟ್ಟಿ ೬೨೧ ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಸ್ಥಾನ ಹಾಗೂ ರಾಜ್ಯಕ್ಕೆ ಐದನೇ ಸ್ಥಾನ, ಮಿಶಾಲ್ ಅಸ್ಸಾದಿ ಮತ್ತು ವೇದಿಕಾ ೬೨೦ಅಂಕಗಳೊಂದಿಗೆ ಶಾಲೆಗೆ ತೃತೀಯ ಹಾಗೂ ರಾಜ್ಯಕ್ಕೆ ಆರನೇ ಸ್ಥಾನ ಪಡೆದುಕೊಂಡಿರುತ್ತಾರೆ. ರಾಜ್ಯಮಟ್ಟದ ಮೊದಲ ಹತ್ತು ಸ್ಥಾನಗಳಲ್ಲಿ ಸಂಸ್ಥೆಯ ೧೫ ವಿದ್ಯಾರ್ಥಿಗಳು ಗುರುತಿಸಿಕೊಂಡಿರುತ್ತಾರೆ.ಪರೀಕ್ಷೆಗೆ ಹಾಜರಾದ ೧೦೭ ವಿದ್ಯಾರ್ಥಿಗಳಲ್ಲಿ ೧೯ ವಿದ್ಯಾರ್ಥಿಗಳು ೬೧೩ (೯೮%) ಕ್ಕಿಂತಅಧಿಕ ಅಂಕಗಳನ್ನು, ೪೧ ವಿದ್ಯಾರ್ಥಿಗಳು ೬೦೦ (೯೬%) ಕ್ಕೂ ಹೆಚ್ಚು ಅಂಕಗಳನ್ನು, ೪೩ ವಿದ್ಯಾರ್ಥಿಗಳು ೫೯೫ (೯೫%) ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿರುತ್ತಾರೆ. ೭೫ (೭೦.೦೯%) ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿತೇರ್ಗಡೆ ಹೊಂದಿರುತ್ತಾರೆ. ೮೯ ಉತ್ತರಪತ್ರಿಕೆಗಳಲ್ಲಿ ೧೦೦ಕ್ಕೆ ೧೦೦ ಅಂಕಗಳ ಸಾಧನೆ ಮಾಡಿರುತ್ತಾರೆ. ಸಾಧಕರನ್ನು ಸಂಸ್ಥೆಯ ಅಧ್ಯಕ್ಷರು, ಟ್ರಸ್ಟಿಗಳು, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.