ಬೀರೂರು, ಮೆಸ್ಕಾಂ ಮಂಡಳಿಯಲ್ಲಿ ಬೀರೂರು ಉಪವಿಭಾಗದಲ್ಲಿ ಎಷ್ಟು ಆರ್.ಆರ್. ನಂಬರ್ ಗಳಿವೆಯೋ ಅಷ್ಟು ಸಮಪರ್ಕಕ ವಿದ್ಯುತ್ ನೀಡುತ್ತಿದೆ. ಆದರೆ ಕೆಲ ರೈತರು ಅನಧಿಕೃತವಾಗಿ ಅಕ್ರಮ ಸಂಪರ್ಕ ಪಡೆದ ಕಾರಣ ನಿಜವಾದ ಇಲಾಖೆಗೆ ಒಳಪಡುವ ರೈತರಿಗೆ ಸಮರ್ಪಕ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಮೆಸ್ಕಾಂ ಅಧೀಕ್ಷಕದೆ ಎಂಜಿನಿಯರ್ ಮಂಜುನಾಥ್ ಬೇಸರ ವ್ಯಕ್ತ ಪಡಿಸಿದರು.
ಬೀರೂರು ಉಪವಿಭಾಗದ ಮೆಸ್ಕಾಂ ಜನಸಂಪರ್ಕ ಸಭೆ : ಹೊಗರೇಹಳ್ಳಿ ಭಾಗಕ್ಕೆ ಸಮರ್ಪಕ ವಿದ್ಯುತ್ ನೀಡಿ: ರೈತರ ಆಗ್ರಹ
ಕನ್ನಡಪ್ರಭ ವಾರ್ತೆ, ಬೀರೂರುಮೆಸ್ಕಾಂ ಮಂಡಳಿಯಲ್ಲಿ ಬೀರೂರು ಉಪವಿಭಾಗದಲ್ಲಿ ಎಷ್ಟು ಆರ್.ಆರ್. ನಂಬರ್ ಗಳಿವೆಯೋ ಅಷ್ಟು ಸಮಪರ್ಕಕ ವಿದ್ಯುತ್ ನೀಡುತ್ತಿದೆ. ಆದರೆ ಕೆಲ ರೈತರು ಅನಧಿಕೃತವಾಗಿ ಅಕ್ರಮ ಸಂಪರ್ಕ ಪಡೆದ ಕಾರಣ ನಿಜವಾದ ಇಲಾಖೆಗೆ ಒಳಪಡುವ ರೈತರಿಗೆ ಸಮರ್ಪಕ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಮೆಸ್ಕಾಂ ಅಧೀಕ್ಷಕದೆ ಎಂಜಿನಿಯರ್ ಮಂಜುನಾಥ್ ಬೇಸರ ವ್ಯಕ್ತ ಪಡಿಸಿದರು.ಪಟ್ಟಣದ ಬೀರೂರು ಮೆಸ್ಕಾಂ ಉಪವಿಭಾಗದಲ್ಲಿ ಗುರುವಾರ ನಡೆದ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮೆಸ್ಕಾಂ ರೈತರ ಪರವಾಗಿ ಕೆಲಸ ಮಾಡುತ್ತಿದೆ. ಅದರಂತೆ ಸರ್ಕಾರ ರೈತರಿಗೆ 7 ಗಂಟೆ ವಿದ್ಯುತ್ ನೀಡಲು ಸೂಚಿಸಿದೆ. ಆದರೆ ಅನಧಿಕೃತ ಬಳಕೆದಾರ ರೈತರು ಇಲಾಖೆಗೆ ಬಂದು ಸಕ್ರಮಗೊಳಿಸಿದರೆ ಮಾತ್ರ ವಿದ್ಯುತ್ ನಿಲುಗಡೆ ಸೇರಿದಂತೆ ಮತ್ತಿತರರ ರೈತರ ಸಮಸ್ಯೆ ಬಗೆಹರಿಸಬಹುದು. ಅಧಿಕೃತ ಐಪಿ ಸೆಟ್ ಹೊಂದಿರುವ ರೈತರು ತಮ್ಮ ಅಕ್ಕ-ಪಕ್ಕದ ರೈತರುಗಳೇನಾದರೂ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರೆ, ಅಂತವರ ಮನವೊಲಿಸಿ ಸಕ್ರಮ ಮಾಡಿಕೊಳ್ಳುವಂತೆ ತಿಳಿಹೇಳಬೇಕು ಎಂದರು.ಈ ಹಂತದಲ್ಲಿ ಮಾತನಾಡಿದ ಹಿರೇನಲ್ಲೂರಿನ ರೈತ ಈಶ್ವರಪ್ಪ, ಸರ್ಕಾರ ಮತ್ತು ರೈತರ ಇಕ್ಕಟ್ಟಿನ ಸಮಸ್ಯೆಗಳಲ್ಲಿ ಅಧಿಕಾರಿ ಗಳು ಕಾರ್ಯನಿರ್ವಹಿಸುತ್ತಿರುವುದು ನಮಗೆ ಗೊತ್ತಿದೆ. ಆದರೆ ಅಕ್ರಮ ವಿದ್ಯುತ್ ಪಡೆದ ರೈತರನ್ನು ಗುರುತಿಸಿ, ಅಂತವ ರಿಗೆ ತಿಳುವಳಿಕೆ ನೋಟಿಸ್ ನೀಡಿ, ಇಲಾಖೆ ರಿಯಾಯಿತಿ ದರದಲ್ಲಿ ಕಟ್ಟಿಕೊಂಡು ಸಕ್ರಮವಾಗಿಸಲು ಅಧಿಕಾರಿಗಳು ಮುಂದಾಗ ಬೇಕು ಎಂದು ತಿಳಿಸಿದರು.ಬೆಳಗಿನ 3 ಗಂಟೆಗೆ ರೈತರಿಗೆ ವಿದ್ಯುತ್ ನೀಡುತ್ತೀರಾ, ನಾವು ಹೇಗೆ ಜಮೀನುಗಳಿಗೆ ತೆರಳಲು ಸಾಧ್ಯ, ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದೆ. ಆದಷ್ಟು 9ರಿಂದ 1ರವರೆಗೆ ವಿದ್ಯುತ್ ನೀಡಿದರೆ ಅನುಕೂಲ ಎಂದು ರೈತರು ಹೇಳಿದರು.ಎಇಇ ವೀಣಾ, ಬೆಳಗಿನ ಸಮಯದಲ್ಲಿ ನಿಮಗೆ ನೀಡಬೇಕಾದ ಸಮರ್ಪಕ ವಿದ್ಯುತ್ ನೀಡಲು ಸಾಧ್ಯವಾಗದು. ಎಲ್ಲಾ ಕಡೆ ವಿದ್ಯುತ್ ಸರಬರಾಜು ಪಡೆಯುತ್ತಿರುತ್ತಾರೆ. ಇದನ್ನು ಮನಗಂಡು ಬೆಳಗಿನ ಜಾವ ರೈತರಿಗೆ ವಿದ್ಯುತ್ ನೀಡಲಾಗುತ್ತಿದೆ ಎಂದರು.ಪುರಸಭೆ ಮಾಜಿ ಸದಸ್ಯ ಲಕ್ಷ್ಮಣ ಮಾತನಾಡಿ ,ವಾರ್ಡ.ನಂ13ರಲ್ಲಿ ತಾಮ್ರದ ವಿದ್ಯುತ್ ಲೈನ್ ಇದ್ದು ಕಂಬಗಳು ಶಿಥಿಲವಾಗಿವೆ. ಇರದಿಂದ ಪದೇ ಪದೇ ವಿದ್ಯುತ್ ಕೈಡುತ್ತಿದೆ. ಜನರು ಈ ಸಮಸ್ಯೆಯಿಂದ ಬೇಸತ್ತಿದ್ದಾರೆ. ಹಲವು ಸಭೆ ಗಳಲ್ಲಿ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದರು ಸಹ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಇದಕ್ಕೆ ಉತ್ತರಿಸಿದ ಮೆಸ್ಕಾಂ ಎಇ ವಿಜಯಕುಮಾರ್, ಈಗಾಗಲೇ ಇದರ ಎಷ್ಟಿಮೇಷನ್ ತಯಾರಾಗಿದ್ದು ಶೀಘ್ರ ಕಂಬ ಮತ್ತು ಕಬ್ಬಿಣದ ಕಂಬಗಳನ್ನು ಬದಲಾಯಿಸುವುದು ಎಂದರು.- ಬಾಕ್ಸ್:-ಮರ್ಪಕ ವಿದ್ಯುತ್ ಪೂರೈಸುವಲ್ಲಿ ವಿಫಲಹೊಗರೇಹಳ್ಳಿ, ಬಳ್ಳಿಗನೂರು, ಆಲದಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಾಗಕ್ಕೆ ಹಲವು ವರ್ಷಗಳಿಂದ ಮೆಸ್ಕಾಂ ಇಲಾಖೆ ಸರಿಯಾಗಿ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ವಿಫಲವಾಗಿದೆ. ರೈತರ ಬಾಳಲ್ಲಿ ಅಧಿಕಾರಿಗಳೇಕೆ ಆಟವಾಡುತ್ತಿ ದ್ದೀರಾ ರೈತರು ಆಹಾರ ಉತ್ಪಾದನೆ ಮಾಡದಿದ್ದರೆ ಮಣ್ಣು ತಿನ್ನುವ ಪರಿಸ್ಥಿತಿ ಬರುತ್ತದೆ. ಸರ್ಕಾರ ನಮಗೆ ನೀಡುವ 7ಗಂಟೆ ವಿದ್ಯುತ್ ನೀಡಿ ಇಲ್ಲವಾದರೇ ರೈತರೆಲ್ಲ ಪ್ರತಿಭಟನೆ ಮಾಡಬೇಕಾಗುತ್ತದೆ.ನಮಗೆ ಬೀರೂರಿನಿಂದ ಲಿಂಗದಹಳ್ಳಿವರೆಗೂ ಪ್ರತ್ಯೇಕ ಎಲ್.ಟಿ ಲೈನ್ ನೀಡಿದ್ದರೂ ಸಹ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಹೀಗಾದರೇ ರೈತರ ಪಾಡೇನು ಎಂದು ರೈತ ಮನು ಆಕ್ರೋಶ ವ್ಯಕ್ತಡಿಸಿದರು.ಇದಕ್ಕೆ ಉತ್ತರಿಸಿದ ಎಇಇ ವೀಣಾ, ಈ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಸಬೇಕಾದರೆ ಬಳ್ಳಿಗನೂರು ಭಾಗಕ್ಕೆ ಉಪ ವಿದ್ಯುತ್ ಕೇಂದ್ರ ಸ್ಥಾಪಿಸಬೇಕು. ಇಲಾಖೆಯಿಂದ ಅನುಮತಿ ದೊರೆತಿದ್ದು, ಸರ್ಕಾರ ಜಾಗ ನೀಡಿದರೆ ಉಪ ವಿದ್ಯುತ್ ಕೇಂದ್ರ ನಿರ್ಮಾಣ ಮಾಡಲು ನಾವು ತಯಾರಿದ್ದೇವೆ. ಈ ಸಂಬಂಧ ತಹಸೀಲ್ದಾರ್ ಜೊತೆಯೂ ಪತ್ರವ್ಯವಹಾರ ಮಾಡಲಿದೆ. ರೈತರ ಹಿತ ಕಾಪಾಡುವುದು ನಮ್ಮ ಇಲಾಖೆ ಧರ್ಮ ಎಂದರು.ಈ ಸಂದರ್ಭದಲ್ಲಿ ಸಹಾಯಕ ತಾಂತ್ರಿಕ ಎಂಜಿನಿಯರ್ ಯತೀಶ್, ಹಿರೇನಲ್ಲೂರು ಜೆಇ ಕಿಶೋರ್ ಕುಮಾರ್, ಯಗಟಿ ಜೆಇ ರಮೇಶ್, ರೈತರುಗಳಾದ ರಾಮಚಂದ್ರಪ್ಪ, ಗುರುಮೂರ್ತಿ, ತಿಮ್ಮಯ್ಯ. ಸೋಮಶೇಖರ್ ಸೇರಿದಂತೆ ಮತ್ತಿತರರು ಇದ್ದರು.27 ಬೀರೂರು 1ಬೀರೂರು ಪಟ್ಟಣದ ಬೀರೂರು ಮೆಸ್ಕಾಂ ಉಪವಿಭಾಗದಲ್ಲಿ ಗುರುವಾರ ನಡೆದ ಜನಸಂಪರ್ಕ ಸಭೆ ಅಧ್ಯಕ್ಷತೆಯನ್ನು ಜಿಲ್ಲಾ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ಮಂಜುನಾಥ್ ವಹಿಸಿದ್ದರು. ಎಇಇ ವೀಣಾ, ಮೆಸ್ಕಾಂ ಎಇ ವಿಜಯಕುಮಾರ್, ಎಂಜಿನಿಯರ್ ಯತೀಶ್, ಹಿರೇನಲ್ಲೂರು ಜೆಇ ಕಿಶೋರ್ ಕುಮಾರ್, ಯಗಟಿ ಜೆಇ ರಮೇಶ್ ಮತ್ತಿತರಿದ್ದರು.