ಸಾರಾಂಶ
ರೈತರ, ಗೋಮಾಳ, ಮಠ-ಮಂದಿರಗಳು, ಸಾರ್ವಜನಿಕ ಆಸ್ತಿಗಳನ್ನು ಬಿಡದ ವಕ್ಫ್ ರಾಜ್ಯದ ಐತಿಹಾಸಿಕ ಪರಂಪರೆಯ ತಾಣಾ ಶ್ರೀರಂಗಪಟ್ಟಣದ ಪ್ರಾಚ್ಯವಸ್ತು ಸಂಗ್ರಹಾಲಯ ಸೇರಿದಂತೆ ತಾಲುಕಿನ ಸುಮಾರು 70ಕ್ಕು ಹೆಚ್ಚು ರೈತರ ಜಮೀನುಗಳಲ್ಲಿ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್‌ಗೆ ಆರ್‌ಟಿಸಿ ಕಲಂ 11ರಲ್ಲಿ ಬದಲಾವಣೆಗೊಂಡಿದೆ.
ಕನ್ನಪಪ್ರಭ ವಾರ್ತೆ ಶ್ರೀರಂಗಪಟ್ಟಣ
ವಕ್ಫ್ ವಿರೋಧಿಸಿ ಜ.20 ರಂದು ಶ್ರೀರಂಗಪಟ್ಟಣ ತಾಲೂಕಿನ ರೈತ ಹಿತ ರಕ್ಷಣಾ ವೇದಿಕೆ ಕರೆದಿರುವ ಬಂದ್ ಹಾಗೂ ಹೋರಾಟಕ್ಕೆ ಸಂಪೂರ್ಣ ಬೆಂಬಲವಿರುವುದಾಗಿ ವಕ್ಫ್ ವಿರೋಧಿ ರೈತ ಒಕ್ಕೂಟದ ಸಂಚಾಲಕ ರಮೇಶ್ ರಾಜು ಹಾಡ್ಯ ತಿಳಿಸಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಪಂಚದ ಯಾವ ದೇಶದಲ್ಲೂ ಇಲ್ಲದ ವಕ್ಫ್ ಕಾಯ್ದೆ ರಾಜ್ಯದಲ್ಲಿ ಪೆಡಂಭೂತವಾಗಿ ಕಾಡುತ್ತಿದೆ ಎಂದರು.
ರೈತರ, ಗೋಮಾಳ, ಮಠ-ಮಂದಿರಗಳು, ಸಾರ್ವಜನಿಕ ಆಸ್ತಿಗಳನ್ನು ಬಿಡದ ವಕ್ಫ್ ರಾಜ್ಯದ ಐತಿಹಾಸಿಕ ಪರಂಪರೆಯ ತಾಣಾ ಶ್ರೀರಂಗಪಟ್ಟಣದ ಪ್ರಾಚ್ಯವಸ್ತು ಸಂಗ್ರಹಾಲಯ ಸೇರಿದಂತೆ ತಾಲುಕಿನ ಸುಮಾರು 70ಕ್ಕು ಹೆಚ್ಚು ರೈತರ ಜಮೀನುಗಳಲ್ಲಿ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್‌ಗೆ ಆರ್‌ಟಿಸಿ ಕಲಂ 11ರಲ್ಲಿ ಬದಲಾವಣೆಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಕ್ಫ್ ಬೋರ್ಡ್‌ಗೆ ಬದಲಾದ ರೈತರ ಜಮೀನುಗಳ ಆರ್‌ಟಿಸಿಗಳನ್ನು ಪುನಃ ರೈತರ ಹೆಸರಿಗೆ ಬದಲಾಯಿಸಲು ಅಧಿಕಾರಿಳಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದರು. ಇದು ಬರಿ ಕಣ್ಣೊರೆಸುವ ನಾಟಕವೇ ಎಂದು ಕಿಡಿಕಾರಿದರು.
ಸರ್ಕಾರ ಈ ಹಿಂದೆ ಓಟ್ ಬ್ಯಾಂಕ್‌ಗಾಗಿ ಕೊಟ್ಟ ಅಪರಿಮಿತ ಅಧಿಕಾರವೇ ಈ ವಕ್ಫ್ ಆಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂದರ್ಶನವೊಂದರಲ್ಲಿ ವಕ್ಫ್ ಬೋರ್ಡ್ ಎನ್ನುವುದು ಒಂದು ಭೂ ಮಾಫಿಯಾ ಬೋರ್ಡ್ ಎಂದು ಹೇಳಿದ್ದರು. ಒಂದು ಇಂಚು ಭೂಮಿಯನ್ನು ವಕ್ಫ್ ಬೋರ್ಡ್‌ಗೆ ಬಿಟ್ಟುಕೊಡುವುದಿಲ್ಲ ಎಂದು ದಿಟ್ಟತನದಿಂದ ಮಾತನಾಡಿದ್ದಾರೆ ಎಂದರು.ಅದೇ ರೀತಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಸರ್ಕಾರ ಹಾಗೂ ರೈತರ ಜಮೀನಿನಲ್ಲಿ ನಮೂದಾಗಿರುವ ವಕ್ಫ್ ಬೋರ್ಡ್ ಹೆಸರು ತೆಗೆಯುವ ಜೊತೆಗೆ ರಾಜ್ಯದಿಂದ ವಕ್ಫ್ ಬೋರ್ಡ್ ಕಿತ್ತುಹಾಕುವಂತೆ ಒತ್ತಾಯಿಸಿದರು.
ಸುದ್ಧಿಗೋಷ್ಠಿಯಲ್ಲಿ ಬ್ರೇಕ್ರಿ ರಮೇಶ್, ಡಿ. ಅಶೋಕ್, ದುಗೇರ್ಶ, ಪಾಂಡವಪುರ ಹೇಮಂತ್ ಇದ್ದರು.