ನಿರಾಣಿ ಸಿಎಂ ಆದ್ರೆ ಸಂಪೂರ್ಣ ಬೆಂಬಲ: ಶಾಸಕ ಜೆಟಿಪಾ

| Published : Feb 09 2025, 01:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೀಳಗಿ ಈ ಹಿಂದೆ ಚುನಾವಣೆ ಸಮಯದಲ್ಲಿ ಮುಂದಿನ ಮುಖ್ಯಮಂತ್ರಿ ನಾನೇ ಎಂದು ನಿರಾಣಿಯವರು ಪ್ರಚಾರ ಮಾಡಿದ್ದರು. ಆಗ ಜನರ ನಿರ್ಣಯ ಬೇರೆ ಆಯ್ತು. ಇವತ್ತೂ ಮುಂದೆ ನಾನೇ ಶಾಸಕ ಆಗ್ತೀನಿ, ಮುಖ್ಯಮಂತ್ರಿ ಆಗ್ತಿನಿ ಎಂದು ಅವರೇ ಹೇಳಿದ್ದಾರೆ. ಅವರ ಪಕ್ಷ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದರೆ ನಾನು ಸ್ವಾಗತಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ಅವರಿಗೆ ವೈಯಕ್ತಿಕವಾಗಿ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಚಿನ್ನದ ಗಣಿ ನಿಗಮ ಅಧ್ಯಕ್ಷ, ಶಾಸಕ ಜೆ.ಟಿ. ಪಾಟೀಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಈ ಹಿಂದೆ ಚುನಾವಣೆ ಸಮಯದಲ್ಲಿ ಮುಂದಿನ ಮುಖ್ಯಮಂತ್ರಿ ನಾನೇ ಎಂದು ನಿರಾಣಿಯವರು ಪ್ರಚಾರ ಮಾಡಿದ್ದರು. ಆಗ ಜನರ ನಿರ್ಣಯ ಬೇರೆ ಆಯ್ತು. ಇವತ್ತೂ ಮುಂದೆ ನಾನೇ ಶಾಸಕ ಆಗ್ತೀನಿ, ಮುಖ್ಯಮಂತ್ರಿ ಆಗ್ತಿನಿ ಎಂದು ಅವರೇ ಹೇಳಿದ್ದಾರೆ. ಅವರ ಪಕ್ಷ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದರೆ ನಾನು ಸ್ವಾಗತಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ಅವರಿಗೆ ವೈಯಕ್ತಿಕವಾಗಿ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಚಿನ್ನದ ಗಣಿ ನಿಗಮ ಅಧ್ಯಕ್ಷ, ಶಾಸಕ ಜೆ.ಟಿ. ಪಾಟೀಲ್ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಮುಖ್ಯಮಂತ್ರಿಯಾದರೆ ಅಸೂಯೆ ಇಲ್ಲ. ಕಾರ್ಖಾನೆಗಳಿಂದ ಉನ್ನತ ಮಟ್ಟದಲ್ಲಿ ಬೆಳೆಯುತ್ತಾ ಉದ್ಯೋಗ ಪತಿಯಾಗಿದ್ದಾರೆ. ಕರ್ನಾಟಕ ದಿಂದ ಮಹಾರಾಷ್ಟ್ರದವರೆಗೆ ಬೆಳೆದು ಇಂದು ಬಿಹಾರವರೆಗೆ ಹೋಗಿದ್ದಾರೆ. ಅವರು ಬೆಳವಣಿಗೆಯಿಂದ ಶ್ರೀಮಂತರಾದರೂ ನಮಗೆ ಅಸೂಯೆ ಆಗಲ್ಲ ಎಂದರು.

ದಾಖಲೆ ಕೊಟ್ಟರೆ ಒಪ್ಪುವೆ:

ಬಿಜೆಪಿ ಸರ್ಕಾರದ ಅ ೪೦೦ ದೇವಸ್ಥಾನಗಳ ಅಭಿವದ್ಧಿಗೆ ಅನುದಾನ ಒದಗಿಸಲಾಗಿತ್ತು ಎಂದು ನಿರಾಣಿಯವರು ಹೇಳುತ್ತಿದ್ದಾರೆ. ಇದರ ಕುರಿತು ನಮ್ಮ ಬಳಿ ಯಾವುದೇ ಲೆಕ್ಕವಿಲ್ಲ, ಲೆಕ್ಕ ಕೊಟ್ಟರೆ ಒಪ್ಪಿಕೊಳ್ಳುತ್ತೇನೆ, ಇದು ಹಾರಿಕೆ ಉತ್ತರವಾಗಬಾರದು. ಹಿಂದಿನ ಸರ್ಕಾರದಿಂದ ಬಂದ ಹಣದಲ್ಲಿ ಅವರು ಬಳಕೆ ಮಾಡಿಕೊಂಡು ಉಳಿದ ಅನುದಾನ ವಾಪಸ್ ಹೋಗಬಾರದೆಂಬ ಉದ್ದೇಶದಿಂದ ನಾವು ಬಳಕೆ ಮಾಡಿಕೊಂಡಿದ್ದೇವೆ ಎಂದು ತಿರುಗೇಟು ನೀಡಿದರು.

೨೦೧೩-೧೮ರ ಅವಧಿಯಲ್ಲಿ ನಾನು ಶಾಸಕನಾಗಿದ್ದಾಗ ಯಡಹಳ್ಳಿ, ಅಮಲಝರಿ, ಖಜ್ಜಿಡೋಣಿ ಗ್ರಾಮಗಳ ಅಭಿವದ್ಧಿಗೆ ಪ್ರತ್ತೇಕ ₹೧ ಕೋಟಿ ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಮಂಜೂರಾತಿ ಮಾಡಿಸಿದ್ದೆ. ನಂತರ ಅವರ ಅಧಿಕಾರ ಬಂದ ನಂತರ ಯಡಹಳ್ಳಿ ಗ್ರಾಮಕ್ಕೆ ನೀಡಿದ ₹೧ ಕೋಟಿ ಇನಾಂ ಹಂಚಿನಾಳ, ಅಮಲಝರಿ ಗ್ರಾಮಕ್ಕೆ ನೀಡಿದ್ದನ್ನು ನರೇನೂರಿಗೆ, ಖಜ್ಜಿಡೋಣಿ ಗ್ರಾಮಕ್ಕೆ ನೀಡಿದ್ದನ್ನು ಗದ್ದನಕೇರಿಗೆ ಬಳಕೆ ಮಾಡಿದ್ದಾರೆ. ಇದು ಯಾರ ಹಣ ಯಾರು ಬಳಕೆ ಮಾಡಿದ್ದಾರೆ. ಇಂತಹ ಉದಾಹರಣೆಗಳು ತುಂಬ ಇವೆ ಎಂದರು. ೨೦೦೮ರಲ್ಲಿ ನನಗೆ ಟಿಕೆಟ್ ಸಿಗಲಿಲ್ಲ. ಅವರು ಮಾಡಿದ ಕಾರ್ಯಕ್ರಮಗಳನ್ನು ಪುಸ್ತಕ ಮಾಡಿ ಬದಾಮಿ, ಬಾಗಲಕೋಟೆ ತಾಲೂಕಿನ ಹಳ್ಳಿಗಳಲ್ಲಿ ಹಂಚಿದ್ದಾರೆ. ಅಂಥ ಕೆಲಸ ನಾನು ಮಾಡಿಲ್ಲ. ಯಾರ ಮೇಲಾದರೂ ಆರೋಪ ಮಾಡಬೇಕಾದರೆ ಎಲ್ಲ ರೀತಿಯಲ್ಲಿ ವಿಚಾರ ಮಾಡಿ ಮಾಡಬೇಕು ಎಂದು ಕಿವಿಮಾತು ಹೇಳಿದರು.

ವಿಮಾನ ನಿಲ್ದಾಣಕ್ಕೆ ವಿರೋಧವಿಲ್ಲ

ಬದಾಮಿ ತಾಲೂಕಿನಲ್ಲಿ ವಿಮಾನ ನಿಲ್ದಾಣಕ್ಕೆ ನನ್ನ ವಿರೋಧವಿಲ್ಲ. ಮೊದಲು ಅಲ್ಲಿ ಸರ್ಕಾರಿ ಗೋಮಾಳ ಜಾಗೆ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು, ಬೇಕಾಬಿಟ್ಟಿಯಾಗಿ ರೈತರ ಜಮೀನು ಪಡೆಯಲು ಹೋದರೆ ನನ್ನ ಸಮ್ಮತಿ ಇಲ್ಲ. ಅಲ್ಲಿರುವ ಎಲ್ಲರೂ ಬಡ ರೈತರು. ಎಸ್ಟಿ ಮತ್ತು ಹಾಲುಮತದವರು ಭೂಮಿ ಕಳೆದುಕೊಳ್ಳುತ್ತಾರೆ. ಅದರ ಮೇಲೆ ಅವರ ಉಪ ಜೀವನವಿದೆ. ಈಗಾಗಲೇ ಹೆರಕಲ್ ಏತ ನೀರಾವರಿಯಿಂದಾಗಿ ಅನವಾಲ್, ಕೆರೂರ ಏತ ನೀರಾವರಿ ಕವರ್ ಆಗಿದೆ. ಇನ್ನಷ್ಟು ನೀರಾವರಿಯಿಂದ ಅವರ ಭೂಮಿ ಕವರ್ ಆದರೆ ಅಲ್ಲಿರುವ ರೈತರ ಬದುಕು ಹಸನಾಗುತ್ತದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತ ಕಾಖಂಡಕಿ, ಜಿಪಂ ಮಾಜಿ ಅಧ್ಯಕ್ಷ ಯಮನಪ್ಪ ರೊಳ್ಳಿ, ತಾಪಂ ಮಾಜಿ ಅಧ್ಯಕ್ಷ ಶ್ರೀಶೈಲ್ ಸುಳಿಕೇರಿ,ಡಾ ಕಿತ್ತಲಿ, ಸಿದ್ದು ಸಾರಾವರಿ ಸೇರಿದಂತೆ ಇತರರು ಇದ್ದರು.----

ನಿಮ್ಮ ಬೆನ್ನು ನಿಮಗೆ ಕಾಣಿಸಲ್ಲ ಎಂಬುದನ್ನು ಮರೆಯಬೇಡಿಕನ್ನಡಪ್ರಭ ವಾರ್ತೆ ಕಲಾದಗಿನಿರಾಣಿಯವರೇ ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ನಿಮ್ಮ ಬೆನ್ನು ನಿಮಗೆ ಕಾಣಿಸುವುದಿಲ್ಲ ಎಂಬುದು ಗೊತ್ತಿರಲಿ ಎಂದು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ, ಶಾಸಕ ಜೆ.ಟಿ.ಪಾಟೀಲ ಕುಟುಕಿದರು.ಶನಿವಾರ ಬೆಳಗ್ಗೆ ಮಿನುಗಾರ ಓಣಿಯ ಸರಕಾರಿ ಉರ್ದು ಶಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಕಾಲದಲ್ಲಿ ಅಭಿವೃದ್ಧಿಗೆ ಮಂಜೂರಾದ ಅನುದಾನವನ್ನು ಬೇರೆ ಕಡೆ ಬದಲಾಯಿಸಿದ್ದಾರೆ ಎಂದು ನಿರಾಣಿಯವರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ, 2013 ರಿಂದ 2018ರ ವರೆಗೆ ನಮ್ಮ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿಯಿಂದ ಯಡಹಳ್ಳಿ, ಅಮಲಝರಿ, ಖಜ್ಜಿಡೋಣಿ ಗ್ರಾಮಗಳಿಗೆ ತಲಾ ₹1 ಕೋಟಿ ಮಂಜೂರು ಮಾಡಿಸಲಾಗಿತ್ತು. 2018 ರಿಂದ 2023ರ ಬಿಜೆಪಿಯ ಅವಧಿಯಲ್ಲಿ ಯಡಹಳ್ಳಿ ಗ್ರಾಮಕ್ಕೆ ನಾವು ಮಂಜೂರು ಮಾಡಿಸಿದ ಅನುದಾನವನ್ನು ಸ್ವ-ಗ್ರಾಮಕ್ಕೆ ಹಾಕಿಕೊಂಡಿದ್ದರು. ಅಮಲಝರಿ ಗ್ರಾಮದ ಅನುದಾನ ಗದ್ದನಕೇರಿಗೆ, ಖಜ್ಜಿಡೋಣಿ ಗ್ರಾಮದ ಅನುದಾನ ನರನೂರ ಗ್ರಾಮಕ್ಕೆ ಹಾಕಿದ್ದಾರೆ. ನಾನು ಮಂಜೂರು ಮಾಡಿಸಿದ್ದೇನೆ ಎಂದು ಹೇಳಿದ್ದೀರಿ. ನಾನು ನಿಮ್ಮಂತೆ ಸುಳ್ಳು ಹೇಳುವುದಿಲ್ಲ. ಈ ರೀತಿ ಹೇಳಿಕೆ ನೀಡುವುದು ನಿಮಗೆ ಶೋಭೆ ತರುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಅನುದಾನವಿಲ್ಲದೆ ಕಾಮಗಾರಿಗಳಿಗೆ ಭೂಮಿ ಪೂಜೆಮಾಡಿ ಹೊಗಿದ್ದೀರಿ ನೀವು ಹೇಗೆ ಮಂಜೂರು ಮಡಿಸಿದಂತಾಗುತ್ತದೆ. ಜನರಿಗೆ ಸುಳ್ಳು ಹೇಳಿ ದಾರಿತಪ್ಪಿಸುವ ಕೆಲಸ ಮಾಡಬೇಡಿ ಎಂದು ಕಿವಿಮಾತು ಹೇಳಿದರು.