ಪು4....ಕೆಎಲ್ಇ ಡಿಪ್ಲೊಮಾ ಕಾಲೇಜಿನಲ್ಲಿ ಗಮನ ಸೆಳೆದ ಫನ್ ವೀಕ್

| Published : May 02 2024, 01:32 AM IST

ಪು4....ಕೆಎಲ್ಇ ಡಿಪ್ಲೊಮಾ ಕಾಲೇಜಿನಲ್ಲಿ ಗಮನ ಸೆಳೆದ ಫನ್ ವೀಕ್
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರಸ್ಥಳೀಯ ಕೆಎಲ್ಇ ಡಿಪ್ಲೊಮಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮನೋಲ್ಲಾಸಕ್ಕಾಗಿ ವಾರಪೂರ್ತಿ ಫನ್ವೀಕ್ ಎಂಬ ಮೋಜಿನ ವ್ರತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳು ವರ್ಷಪೂರ್ತಿ ಕಲಿತಿದ್ದನ್ನು ಪರೀಕ್ಷೆಯಲ್ಲಿ ಅಭಿವ್ಯಕ್ತಗೊಳಿಸಲು ಅನುಕೂಲವಾಗುವಂತೆ, ಪರೀಕ್ಷೆಯ ಬಗ್ಗೆ ಗಂಭೀರತೆ ಮತ್ತು ಓದಿನ ಮೂಡ್ ಬರಿಸಲು ವಿಭಿನ್ನ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪರೀಕ್ಷೆಯೆಂಬ ಯುದ್ಧ ಗೆಲ್ಲಲು ಹಮ್ಮಿಕೊಂಡಿದ್ದ ಸಾಪ್ತಾಹಿಕ ಮಸ್ತಿ ಕಾರ್ಯಕ್ರಮ ಫನ್ ವೀಕ್ ಗಮನ ಸೆಳೆಯಿತು.

ಪ್ರಾಚಾರ್ಯ ಎಸ್.ಐ. ಕುಂದಗೋಳ, ಯು.ಡಿ. ಹಾದಿಮನಿ, ಸುಭಾಸ ಮೂಶಿ, ವಂದನಾ ಪಸಾರ, ಅಮಿತ್‌ ಜಾಧವ, ಮಹಾದೇವಿ ಅಂಬಿ, ಸವಿತಾ ಗೊಂದಿ, ಸವಿತಾ ಬೀಳಗಿ, ಅಂಜನಾ ಮಾಲಜ, ಚೈತ್ರಾ ಹುದ್ದಾರ, ಮಂಜುನಾಥ ಅರಕೇರಿ, ನಿರ್ಮಲಾ ಫಕೀರಪುರ, ಈಶ್ವರ ಹೂಲಿ, ಪ್ರಕಾಶ ಬಡಿಗೇರ, ಗೀತಾ ಉಪಾಸೆ, ಶಿಲ್ಪಾ ಬೀರನಗಡ್ಡಿ ಸೇರಿದಂತೆ ಸಿಬ್ಬಂದಿ ಇದ್ದರು.

ಬಾಕ್ಸ್-1

ದಿನಕ್ಕೊಂದು ಆಚಾರ ಮತ್ತು ಅವತಾರ:

ಫನ್ವೀಕ್ ಕಾರ್ಯಕ್ರಮದಲ್ಲಿ ಮೊದಲ ದಿನ ಮಿಸ್ ಮ್ಯಾಚ್ ಡೇ ಆಚರಿಸಿ ಅದಲಿ ಬದಲಿ ಬಟ್ಟೆ ಧರಿಸಿದರು. ನಂತರ ರೆಟ್ರೋ ಡೇ ದಿನ ಹಳೇ ಸಿನಿಮಾ ತಾರೆಯ ಗೆಟಪ್‌ ನಲ್ಲಿ ಗಮನ ಸೆಳೆದರು. ಟ್ರೆಡಿಷನಲ್ ಡೇ ದಿನ ಲುಂಗಿ, ಅಂಗಿ, ಟವಲ್ ಧರಿಸಿ ದೇಸಿ ಸಂಸ್ಕೃತಿ ಪ್ರತಿಬಿಂಬಿಸಿದರು. ಟ್ರ್ಯಾಕ್ಟರ್ ಮತ್ತು ಜೆಸಿಬಿ ಚಲಾಯಿಸಿಕೊಂಡು ಕಾಲೇಜಿಗೆ ಆಗಮಿಸಿ ಸಂಭ್ರಮಿಸಿದರು. ಜಾನಪದ ಹಾಡಿಗೆ ತಕ್ಕಂತೆ ವಾಹನಗಳನ್ನೇ ಕುಣಿಸಿದರು. ಸಿಂಗಲ್ ಬ್ರೇಕ್ ಹಾಕಿ, ಕ್ಲಚ್ ಮತ್ತು ಎಕ್ಸಿಲೇಟರ್ ಯದ್ವಾ ತದ್ವಾ ಬಳಸಿ ಜೆಸಿಬಿ ಜಂಪಿಂಗ್ ಮಾಡಿದರು. ಜೀನ್ಸ್ ಡೇ ದಿನ ಜೀನ್ಸ್ ಪ್ಯಾಂಟ್‌ ಮತ್ತು ಜಾಕೇಟ್ ಧರಿಸಿ ಡೌವ್ ಮಾಡಿದರು. ಟ್ವಿನ್ಸ್ ಡೇ ದಿನ ಜೋಡಿಗಳಾಗಿ ಒಂದೇ ತರಹದ ಬಟ್ಟೆ ಧರಿಸಿ ಗಮನ ಸೆಳೆದರು. ಫುಡ್ಸ್‌ ಸ್ಟಾಲ್‌ ಡೇ ದಿನ ವಿವಿಧ ಆಹಾರ ಪದಾರ್ಥಗಳ ಪ್ರದರ್ಶನ ಮಾಡಿದರು. ಪಿಂಕ್ ಡೇ ದಿನ ಗುಲಾಬಿ ಬಟ್ಟೆಯಲ್ಲಿ ಕಂಗೊಳಿಸಿದರು.

ಬಾಕ್ಸ್-2ವಿದ್ಯಾರ್ಥಿಗಳು ಪ್ರತಿ ವರ್ಷ ತರಗತಿ, ಪ್ರ್ಯಾಕ್ಟಿಕಲ್, ಪ್ರೊಜೆಕ್ಟ್‌, ಟೆಸ್ಟ್ ಸೇರಿದಂತೆ ಬಿಡುವಿಲ್ಲದ ಕಲಿಕೆಯ ಏಕತಾನತೆಯಿಂದ ಹೊರಬರಲು ಮನೋಲ್ಲಾಸಕ್ಕಾಗಿ ವಾರ್ಷಿಕ ಪರೀಕ್ಷೆ ಪೂರ್ವದಲ್ಲಿ ಫನ್ ವೀಕ್ ಎಂಬ ಮೋಜಿನ ವೃತ ಆಚರಿಸಲು ನಿಯಮ ಸಡಿಲಗೊಳಿಸಿ ವಿದ್ಯಾರ್ಥಿಗಳ ಮನರಂಜನೆಗೆ ಅವಕಾಶ ನೀಡಲಾಗಿತ್ತು. ಮಕ್ಕಳು ವಾರಪೂರ್ತಿ ಎಂಜಾಯ್ ಮಾಡಿ ರಿಲ್ಯಾಕ್ಸ್ ಆಗಿ ಮರುದಿನದಿಂದಲೇ ಓದಿನ ಕಡೆ ಗಮನ ಕೊಡುವಂತೆ ಮಾಡಲಾಯಿತು.

- ಎಸ್.ಐ.ಕುಂದಗೋಳ ಪ್ರಾಚಾರ್ಯ ಕೆಎಲ್ಇ ಪಾಲಿಟೆಕ್ನಿಕ್ ಮಹಾಲಿಂಗಪುರ