ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವದ ಅಂಗವಾಗಿ ಪುತ್ತೂರಿಗೆ ಆಗಮಿಸಿದ್ದ ಕಾರ್ಗಿಲ್ ಯೋಯೋಧ, ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಲೆ.ಸಂಜಯ್ ಕುಮಾರ್ ಅವರನ್ನು ಐತಿಹಾಸಿಕ ರೀತಿಯಲ್ಲಿ ಬರಮಾಡಿಕೊಂಡದ್ದಕ್ಕಾಗಿ ಪುತ್ತೂರಿನ ಜನತೆಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವದ ಅಂಗವಾಗಿ ಪುತ್ತೂರಿಗೆ ಆಗಮಿಸಿದ್ದ ಕಾರ್ಗಿಲ್ ಯೋಯೋಧ, ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಲೆ.ಸಂಜಯ್ ಕುಮಾರ್ ಅವರನ್ನು ಐತಿಹಾಸಿಕ ರೀತಿಯಲ್ಲಿ ಬರಮಾಡಿಕೊಂಡದ್ದಕ್ಕಾಗಿ ಪುತ್ತೂರಿನ ಜನತೆಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.ಪುತ್ತೂರಿನ ವರ್ತಕರು, ವಿವಿಧ ಸಂಘ - ಸಂಸ್ಥೆಗಳು, ಪಕ್ಷ ಬೇಧವಿಲ್ಲದೆ ರಾಜಕೀಯ ನೇತಾರರು, ಸಾಮಾಜಿಕ ಧುರೀಣರು, ಶಿಕ್ಷಣ ಕ್ಷೇತ್ರದ ಹಿರಿಯರು, ಸಾರ್ವಜನಿಕರು, ಮಾಜಿ ಸೈನಿಕರು ಲೆ.ಸಂಜಯ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.

ಪುತ್ತೂರಿನ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತೆ ಅತ್ಯಪೂರ್ವ ಮೆರವಣಿಗೆಯಲ್ಲಿ ಭಾಗಿಯಾದ್ದಾರೆ. ಪುತ್ತೂರಿನ ಮಾಜಿ ಸೈನಿಕ ಸಂಘದ ಸರ್ವ ಸದಸ್ಯರು ಕಾರ್ಯಕ್ರಮಕ್ಕೆ ಹೆಗಲೆಣೆಯಾಗಿ ಜತೆ ನಿಂತಿದ್ದಾರೆ. ಮಾಧ್ಯಮ ಮಿತ್ರರು ಅತ್ಯುತ್ತಮ ಪ್ರಚಾರ ಕಾರ್ಯವನ್ನು ನಡೆಸಿ ಸಹಕಾರ ನೀಡಿದ್ದಾರೆ. ವಿವಿಧ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಹಿರಿಯರು, ಬೋಧಕ - ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದ್ದಾರೆ. ಎಲ್ಲರ ಸರ್ವವಿಧದ ಬೆಂಬಲದಿಂದಾಗಿ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ದಾಖಲಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.