ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗೂರು
ಹೋಬಳಿ ಕೇಂದ್ರದಲ್ಲಿ 2 ಕೋಟಿ ರು. ವೆಚ್ಚದ ಪ್ರವಾಸಿಮಂದಿರ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.ಬಾಗೂರು ಗ್ರಾಮದಲ್ಲಿ 1 ಕೋಟಿ 80 ಲಕ್ಷ ರು. ವೆಚ್ಚದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಬಾಗೂರು ಪ್ರೌಢಶಾಲೆಗೆ ಎರಡು ಶಾಲಾ ಕೊಠಡಿ ನೀಡಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸುಸಜ್ಜಿತ ಹಾಸ್ಟೆಲ್, ಕೆರೆ ಹಿಂಭಾಗ ಸಿಮೆಂಟ್ ರಸ್ತೆ ಮಾಡಿಸಲಾಗಿದೆ. ಶಿವರ ರಸ್ತೆಗೆ 1 ಕೋಟಿ ಹಣ ಸೇತುವೆ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದೆ. ಬಾಗೂರು ಅಕ್ಕನಹಳ್ಳಿ ಆಸ್ಪತ್ರೆ ಗಳನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಚಳಿ ಹೆಚ್ಚಾಗಿ ಇರುವುದರಿಂದ ಕಾಯಿಸಿ ಆರಿಸಿದ ನೀರು ಕುಡಿಯಿರಿ. ಟೇಸ್ಟ್ ಫುಡ್ ತಿನ್ನುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಆಹಾರದ ಬಗ್ಗೆ ಎಚ್ಚರ ವಹಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು. ಆಸ್ಪತ್ರೆಗೆ ಕಾಂಪೌಂಡ್, ಆ್ಯಂಬುಲೆನ್ಸ್, ಕಂದಾಯ ನಿರೀಕ್ಷಕರ ಕೊಠಡಿ ಸುಲಭ ಶೌಚಾಲಯ ಮಾಡಿಸುವ ಭರವಸೆ ನೀಡಿದರು.ಸಮಾರಂಭದಲ್ಲಿ ತಾಲೂಕು ಆಡಳಿತ ಅಧಿಕಾರಿ ಡಾ. ಎನ್. ಕಿಶೋರ್ ಕುಮಾರ್, ಡಾ. ಬಿ.ವೈ. ವರದರಾಜ್, ಎಂಜಿನಿಯರ್ ರಶ್ಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ದಾಸಾಪುರ ಕೆಂಪೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್. ಶಿವಣ್ಣ , ಮಂಜುನಾಥ್, ಮುಖಂಡರುಗಳಾದ ರಾಮಚಂದ್ರ, ಶಿವಶಂಕರ್ ಕುಂಟೆ, ಎನ್. ಬಸವರಾಜ್, ಹರೀಶ್, ಸ್ವಾಮಿ, ಬೈರೇಗೌಡ, ರಘು, ಚಂದ್ರೇಗೌಡ, ವೆಂಕಟೇಶ್, ಕಾಂತರಾಜ್, ಚಂದ್ರು, ಇತರರು ಹಾಜರಿದ್ದರು.