ಸಾರಾಂಶ
ಥಲ್ಸಮೇನಿಯಾದಿಂದ ಬಳಲು ತ್ತಿರುವ ಇಬ್ಬರು ಹೆಣ್ಣುಮಕ್ಕಳ ಶಸ್ತ್ರಚಿಕಿತ್ಸೆಗೆ ದಾನಿಗಳು ಧನಸಹಾಯ ಮಾಡಬೇಕು ಎಂದು ದಾವಣಗೆರೆ ತಾಲೂಕಿನ ಹಳೇ ಬಾತಿ ಗ್ರಾಮದ ಗುಡ್ಡದ ಕ್ಯಾಂಪ್ ನಿವಾಸಿ, ಲಾರಿ ಚಾಲಕ ಗಿರೀಶ್ ದಾವಣಗೆರೆಯಲ್ಲಿ ಮನವಿ ಮಾಡಿದ್ದಾರೆ.
- ಹಳೇ ಬಾತಿ ಗುಡ್ಡದ ಕ್ಯಾಂಪ್ ನಿವಾಸಿ ಗಿರೀಶ್ ಮನವಿ - - -ಕನ್ನಡಪ್ರಭ ವಾರ್ತೆ, ದಾವಣಗೆರೆ ಥಲ್ಸಮೇನಿಯಾದಿಂದ ಬಳಲು ತ್ತಿರುವ ಇಬ್ಬರು ಹೆಣ್ಣುಮಕ್ಕಳ ಶಸ್ತ್ರಚಿಕಿತ್ಸೆಗೆ ದಾನಿಗಳು ಧನಸಹಾಯ ಮಾಡಬೇಕು ಎಂದು ದಾವಣಗೆರೆ ತಾಲೂಕಿನ ಹಳೇ ಬಾತಿ ಗ್ರಾಮದ ಗುಡ್ಡದ ಕ್ಯಾಂಪ್ ನಿವಾಸಿ, ಲಾರಿ ಚಾಲಕ ಗಿರೀಶ್ ಮನವಿ ಮಾಡಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಮಗಳು ಪುಷ್ಪಾ (9) ಹಾಗೂ ವಿಸ್ಮಯ (3) ಇಬ್ಬರೂ ಥಲ್ಸಮೇನಿಯಾ ರೋಗದಿಂದ ಬಳಲುತ್ತಿದ್ದಾರೆ. ಪುಷ್ಪಾಗೆ ಒಂಭತ್ತು ವರ್ಷಗಳಿಂದ ಪ್ರತಿ ತಿಂಗಳು ರಕ್ತ ಹಾಕಿಸುತ್ತಿದ್ದೇವೆ. ಈ ಕಾರಣಕ್ಕೆ ಹೊಟ್ಟೆಯಲ್ಲಿ ಗಡ್ಡೆಗಳಾಗಿದ್ದು, ಶಸ್ತ್ರಚಿಕಿತ್ಸೆ ಮಾಡಿಸಬೇಕಾಗಿದೆ ಎಂದರು.ಇಬ್ಬರೂ ಮಕ್ಕಳಿಗೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಅಸ್ಥಿಮಜ್ಜೆ ಶಸ್ತ್ರಚಿಕಿತ್ಸೆ ಮಾಡಿಸಲು ಒಬ್ಬರಿಗೆ ₹32 ಲಕ್ಷದಷ್ಟು ಹಣ ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಕಡುಬಡತನದಲ್ಲಿ ಇರುವ ನನಗೆ ಅಷ್ಟೊಂದು ಹಣ ಹೊಂದಿಸಲು ಆಗುತ್ತಿಲ್ಲ. ದಾನಿಗಳು ಫೋನ್ ಪೇ 97317-22896 ನಂಬಿಗೆ ಹಣ ನೀಡುವಂತೆ ಕೋರಿದರು. ಎ.ಕೆ. ಗಿರೀಶ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಖಾತೆ ನಂಬರ್: 34542877 404, ಐಎಫ್‌ಎಸ್‌ಸಿ ನಂಬರ್: ಎಸ್‌ಬಿಐಎನ್0015450 ಗೆ ಹಣ ಜಮೆ ಮಾಡುವ ಮೂಲಕ ನೆರವಾಗಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪತ್ನಿ ಅನ್ನಪೂರ್ಣ, ಮಕ್ಕಳು ಇದ್ದರು.- - - -6ಕೆಡಿವಿಜಿ35ಃ:
ಥಲ್ಸಮೇನಿಯಾದಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ದಾನಿಗಳು ಧನಸಹಾಯ ಮಾಡುವಂತೆ ಕೋರಿ ದಾವಣಗೆರೆಯಲ್ಲಿ ಗಿರೀಶ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.