ಸಾರಾಂಶ
ನಿತ್ರಾಣಗೊಂಡ ಗಂಡು ಕೋತಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಸಾವನ್ನಪ್ಪಿದ್ದರಿಂದ ಹಂಗಳ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಕಳೆದ ಮೂರು ದಿನಗಳ ಹಿಂದೆ ಹಂಗಳ ಗ್ರಾಮದ ಬಳಿ ಕೋತಿ ಮರದ ಪೊದೆಯಲ್ಲಿ ನಿತ್ರಾಣಗೊಂಡಿರುವುದನ್ನು ಕಂಡ ಬಿಜೆಪಿ ಮುಖಂಡ ಪ್ರಣಯ್ ಪಶು ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿದ್ದರು.
ಗುಂಡ್ಲುಪೇಟೆ: ನಿತ್ರಾಣಗೊಂಡ ಗಂಡು ಕೋತಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಸಾವನ್ನಪ್ಪಿದ್ದರಿಂದ ಹಂಗಳ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಕಳೆದ ಮೂರು ದಿನಗಳ ಹಿಂದೆ ಹಂಗಳ ಗ್ರಾಮದ ಬಳಿ ಕೋತಿ ಮರದ ಪೊದೆಯಲ್ಲಿ ನಿತ್ರಾಣಗೊಂಡಿರುವುದನ್ನು ಕಂಡ ಬಿಜೆಪಿ ಮುಖಂಡ ಪ್ರಣಯ್ ಪಶು ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿದ್ದರು.
ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಕೋತಿ ಚೆನ್ನಾಗಿಯೇ ಇತ್ತು. ಬಳಿಕ ಎಲ್ಲಿ ಕಾಣಿಸಿಕೊಂಡಿತ್ತು ಆ ಸ್ಥಳದಲ್ಲಿಯೇ ಸತ್ತು ಬಿದ್ದಿತ್ತು. ಇದನ್ನು ಕಂಡ ಪ್ರಣಯ್ ಮತ್ತವರ ತಂಡ ಸತ್ತ ಕೋತಿಗೆ ಸ್ನಾನಮಾಡಿಸಿದ ಬಳಿಕ ಹೊಸ ಬಟ್ಟೆ ತೊಡಿಸಿ, ಹಾರ ಹಾಕಿ ಕೆರೆಯಂಗಳದಲ್ಲಿ ಅಂತ್ಯಕ್ರಿಯೆ ನಡೆಸಿದರು. ಸತ್ತ ಕೋತಿಗೆ ಅಂತ್ಯಕ್ರಿಯೆ ನಡೆಸಿದ ಗ್ರಾಮಸ್ಥರೇ ಜು.೪ರ ಶುಕ್ರವಾರ ಹಾಲು ತುಪ್ಪು ನಡೆಸಲಿದ್ದಾರೆ ಎಂದು ಬಿಜೆಪಿ ಮುಖಂಡ ಪ್ರಣಯ್ ತಿಳಿಸಿದ್ದಾರೆ.