ಮನೆ ಮುಂದಿನ ಸ್ಮಶಾನದಲ್ಲೇ ಅಂತ್ಯಕ್ರಿಯೆ

| Published : Sep 13 2025, 02:04 AM IST

ಸಾರಾಂಶ

ತಾಲೂಕಿನ ಬಾಗೆ ಗ್ರಾಮದಲ್ಲಿ ಕ್ರೈಸ್ಥರ ಸ್ಮಶಾನವೊಂದಿದ್ದು ರಾಷ್ಟ್ರೀಯ ಹೆದ್ದಾರಿ ೭೫ ಚತುಷ್ಫಥ ರಸ್ತೆ ಹಾದುಹೋಗಿದ್ದರಿಂದ ಸ್ಮಶಾನದ ಜಾಗ ಸಂಪೂರ್ಣ ಕಡಿಮೆಯಾಗಿ ೪ ಭಾಗಗಳಾಗಿ ತುಂಡಾಗಿದೆ. ಹೆದ್ದಾರಿಯ ಒಂದು ಭಾಗದಲ್ಲಿ ಸರೋಜಮ್ಮ ಎಂಬ ಕುಟುಂಬದವರು ಮನೆ ಮಾಡಿಕೊಂಡು ಹಲವಾರು ವರ್ಷಗಳಿಂದ ವಾಸವಿದ್ದು ಮನೆಯ ಮುಂಭಾಗ ಕ್ರೈಸ್ಥರ ಸ್ಮಶಾನಕ್ಕೆ ಸೇರಿರುವ ಜಾಗ ಸ್ವಲ್ಪ ಉಳಿದಿರುತ್ತದೆ. ಪೊಲೀಸರ ಸಮ್ಮುಖದಲ್ಲಿ ಶುಕ್ರವಾರ ಮನೆಯ ಮುಂಭಾಗವೇ ಮೃತರ ಅಂತ್ಯಕ್ರಿಯೆ ಮಾಡಲಾಗಿದೆ. ಮನೆಯಲ್ಲಿ ಮಹಿಳೆಯರು , ಪುಟ್ಟ ಮಕ್ಕಳಿದ್ದು ಇದೀಗ ದಿನನಿತ್ಯ ಆತಂಕದಲ್ಲೆ ಮನೆಯಲ್ಲಿ ಇರಬೇಕಾಗಿದೆ. ಕೂಡಲೆ ಕ್ರೈಸ್ತರ ಸ್ಮಶಾನಕ್ಕೆ ಬೇರೆಡೆ ಜಾಗ ನೀಡಿ ಮನೆಯವರಿಗೆ ನ್ಯಾಯ ಒದಗಿಸುವ ಕೆಲಸವನ್ನು ತಾಲೂಕು ಆಡಳಿತ ಮಾಡಬೇಕಾಗಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ರಾಷ್ಟ್ರೀಯ ಹೆದ್ದಾರಿ 75ರ ಅಗಲೀಕರಣದಿಂದ ಮೂರ್ನಾಲ್ಕು ಭಾಗವಾದ ಕ್ರೈಸ್ತರ ಸ್ಮಶಾನಕ್ಕೆ ಹೊಂದಿಕೊಂಡಿರುವ ಮನೆಯೊಂದರ ಮುಂದೆಯೇ ಹೆಣವನ್ನು ಹೂಳಿರುವ ಘಟನೆ ತಾಲೂಕಿನ ಬಾಗೆ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಬಾಗೆ ಸಮೀಪದ ಗ್ರಾಮವೊಂದರ ಕ್ರೈಸ್ತ ಜನಾಂಗದ ವ್ಯಕ್ತಿಯೋರ್ವರು ಮೃತಪಟ್ಟಿದ್ದು, ಈ ಸಂದರ್ಭದಲ್ಲಿ ಇವರ ಅಂತ್ಯ ಕ್ರಿಯೆಯನ್ನು ಬಾಗೆ ಗ್ರಾಮದ ಸರೋಜಮ್ಮ ಎಂಬುವರ ಮನೆಯ ಮುಂಭಾಗವೇ ಮನೆಯವರ ತೀವ್ರ ವಿರೋಧದ ನಡುವೆ ಪೊಲೀಸರ ಬಿಗಿ ಬಂದೋಬಸ್ತಿನಲ್ಲಿ ನೆರವೇರಿಸಲಾಗಿದೆ.ಘಟನೆಯ ವಿವರ: