ಸಾರಾಂಶ
ತೆಲಂಗಾಣದ ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಕನ್ನಡದ ನಟಿ ಶೋಭಿತಾ ಶಿವಣ್ಣರವರ ಅಂತ್ರಕ್ರಿಯೆ ಅವರ ಹುಟ್ಟೂರು ಹೇರೂರು ಗ್ರಾಮದಲ್ಲಿ ನಡೆಯಿತು. ಸಕಲೇಶಪುರ ತಾಲೂಕಿನ ಚಂಗಡಹಳ್ಳಿ ಸಮೀಪದ ಹೇರೂರು ಗ್ರಾಮದಲ್ಲಿ ಮಲೆನಾಡು ಸಂಪ್ರದಾಯದಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅಂತಿಮ ವಿಧಿ ಪೂಜೆ ನಡೆಸಿ ಮಂಗಳವಾರ ಎರಡು ಗಂಟೆಗೆ ಅಂತ್ಯಕ್ರಿಯೆ ನಡೆಸಿದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಕಳೆದ ಶನಿವಾರ ತೆಲಂಗಾಣದ ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಕನ್ನಡದ ನಟಿ ಶೋಭಿತಾ ಶಿವಣ್ಣರವರ ಅಂತ್ರಕ್ರಿಯೆ ಅವರ ಹುಟ್ಟೂರು ಹೇರೂರು ಗ್ರಾಮದಲ್ಲಿ ನಡೆಯಿತು.ತಾಲೂಕಿನ ಚಂಗಡಹಳ್ಳಿ ಸಮೀಪದ ಹೇರೂರು ಗ್ರಾಮದಲ್ಲಿ ಮಲೆನಾಡು ಸಂಪ್ರದಾಯದಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅಂತಿಮ ವಿಧಿ ಪೂಜೆ ನಡೆಸಿ ಮಂಗಳವಾರ ಎರಡು ಗಂಟೆಗೆ ಅಂತ್ಯಕ್ರಿಯೆ ನಡೆಸಿದರು.ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ೭.೩೦ಕ್ಕೆ ಕುಟುಂಬಸ್ಥರು ಮೃತದೇಹವನ್ನು ಗ್ರಾಮಕ್ಕೆ ತೆಗೆದುಕೊಂಡು ಬಂದು ನಟಿಯ ಹುಟ್ಟೂರಿನ ಮನೆಯಲ್ಲಿ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಿದ್ದರು. ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಮೃತ ನಟಿಯ ಅಂತಿಮ ದರ್ಶನ ಮಾಡಿ ನಮನ ಸಲ್ಲಿಸಿದರು.