ಸ್ವಗ್ರಾಮ ಮುಗಳಖೋಡದಲ್ಲಿ ಎಸ್‌ಡಿಎ ರುದ್ರಣ್ಣ ಅಂತ್ಯಕ್ರಿಯೆ

| Published : Nov 07 2024, 12:31 AM IST

ಸಾರಾಂಶ

ಮುಗಳಖೋಡ: ಬೆಳಗಾವಿಯ ತಹಸೀಲ್ದಾರ್ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಸ್‌ಡಿಸಿ ರುದ್ರಣ್ಣ ಯಡಣ್ಣವರ ಅಂತ್ಯಕ್ರಿಯೆ ಸ್ವಗ್ರಾಮ ಮುಗಳಖೋಡ ಪಟ್ಟಣದಲ್ಲಿ ಮಂಗಳವಾರ ತಡರಾತ್ರಿ ನೆರವೇರಿತು.

ಮುಗಳಖೋಡ: ಬೆಳಗಾವಿಯ ತಹಸೀಲ್ದಾರ್ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಸ್‌ಡಿಸಿ ರುದ್ರಣ್ಣ ಯಡಣ್ಣವರ ಅಂತ್ಯಕ್ರಿಯೆ ಸ್ವಗ್ರಾಮ ಮುಗಳಖೋಡ ಪಟ್ಟಣದಲ್ಲಿ ಮಂಗಳವಾರ ತಡರಾತ್ರಿ ನೆರವೇರಿತು.

ತಡರಾತ್ರಿ ಬೆಳಗಾವಿಯಿಂದ ರುದ್ರಣ್ಣ ಪಾರ್ಥಿವ ಶರೀರ ಮುಗಳಖೋಡಕ್ಕೆ ತರಲಾಯಿತು. ಸಂಬಂಧಿಕರು ಹಾಗೂ ಸ್ಥಳೀಯರು ಸೇರಿ ಕುಟುಂಬದ ಜಮೀನಿನಲ್ಲಿ ವಿಧಿವಿಧಾನದೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದರು. ಈ ವೇಳೆ ಕುಟುಂಬದವರ ಆಕ್ರಂಧನ ಮುಗಿಲುಮುಟ್ಟಿತ್ತು. ಹಲವು ಅನುಮಾನಗಳಿಗೆ ರುದ್ರಣ್ಣರ ಸಾವು ಎಡೆ ಮಾಡಿಕೊಟ್ಟಿದೆ. ಬೆಳಗಾವಿ ಪೊಲೀಸರು ತನಿಖೆ ನಡೆಸಿದ್ದಾರೆ.

ಬುಧವಾರ ಬೆಳಗ್ಗೆ ರುದ್ರಣ್ಣರ ಸಹೋದರಿ ಶ್ರೀದೇವಿ, ಸಹೋದರ ಸಂಬಂಧಿ ಚೇತನ ಮಾಧ್ಯಮಗಳೊಂದಿಗೆ ಮಾತನಾಡಿ, ರುದ್ರಣ್ಣರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.